ಸಾಯಿ ಪಲ್ಲವಿ ಹಳೆಯ ಸಂದರ್ಶನದ ತುಣುಕು ವೈರಲ್. ಈ ವಾರ ರಿಲೀಸ್ ಆಗ್ತಿದೆ ಸಾಯಿ ಪಲ್ಲವಿ ನಟನೆಯ ಅಮರನ್ ಸುಂದರಿ ಸ್ಟೇಟ್​ಮೆಂಟ್​​ನಿಂದ ಅಮರನ್ ತಂಡಕ್ಕೆ ಪೇಚಾಟ.

ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಈಗ ದೊಡ್ಡದೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಆಡಿದ ಮಾತು ಈಗ ಕಿಚ್ಚು ಹಚ್ಚಿದೆ. ಸಾಯಿ ಪಲ್ಲವಿಯ ಮಾತುಗಳಿಂದ ರೊಚ್ಚಿಗೆದ್ದಿರೋ ಜನ ಈಕೆಯ ಸಿನಿಮಾಗಳನ್ನು ಬಾಯ್ಕಾಟ್ ಮಾಡ್ತೀವಿ ಅಂತಿದ್ದಾರೆ. ಅಷ್ಟಲ್ಲೂ ಈ ಸಹಜ ಸುಂದರಿ ಮಾಡಿಕೊಂಡ ಎಡವಟ್ಟಾದ್ರೂ ಏನು..?

ಯೆಸ್! ಸಹಜ ಸುಂದರಿ ಸಾಯಿ ಪಲ್ಲವಿ ಈಗ ಹೊಸತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಅಸಲಿಗೆ ವಿವಾದ ಹೊಸತಾದರೂ ವಿಷಯ ಮಾತ್ರ ಹಳೆಯದ್ದು. ಎರಡು ವರ್ಷಗಳ ಹಿಂದೆ ಬಂದ ವಿರಾಟ್ ಪರ್ವಂ ಸಿನಿಮಾದ ಪ್ರಮೋಷನ್​ ಟೈಂನಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸಾಯಿ ಪಲ್ಲವಿ, ಜಸ್ಟ್ ಸಿನಿಮಾ ಬಗ್ಗೆ ಮಾತನಾಡೋದು ಬಿಟ್ಟು ಸೇನೆ-ಧರ್ಮ-ರಾಜಕೀಯದ ಬಗ್ಗೆ ಮಾತನಾಡಿದ್ದರು. ಆಗ ಸಾಯಿ ಪಲ್ಲವಿ ಆಡಿದ್ದ ಮಾತೊಂದು ಈಗ ವೈರಲ್ ಆಗಿ ಕಿಚ್ಚು ಹಚ್ಚಿದೆ. ಭಾರತೀಯ ಸೇನೆಯ ಪಾಲಿಗೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಂತೆ ಕಾಣ್ತಾರೆ. ಅದೇ ರೀತಿ ಅವರ ಪಾಲಿಗೆ ನಮ್ಮ ಸೇನೆಯವರು ಟೆರೆರಿಸ್ಟ್ ಇದ್ದ ಹಾಗೇ ಅಂತ ಹೇಳಿರೋ ಸಾಯಿ ಪಲ್ಲವಿಯ ಈ ವಿಡಿಯೋ ಕ್ಲಿಪ್ ಈಗ ವಿವಾದದ ಕಿಡಿ ಹೊತ್ತಿಸಿದೆ. ಬುದ್ದಿಜೀವಿಯಂತೆ ಮಾತನಾಡೋ ಸಾಯಿ ಪಲ್ಲವಿಗೆ ಬುದ್ದಿನೇ ಇಲ್ಲ ಜನ ಟೀಕೆ ಮಾಡ್ತಾ ಇದ್ದಾರೆ.

ತೆರೆ ಮೇಲೆ ಐರಾವತ.. ಜೈಲಲ್ಲಿ ಅಸ್ವಸ್ಥ!!; ದಾಸ in ನರಕ, ಬಟ್ಟೆ ಬ್ಯಾಗ್ ಎತ್ತಲಾಗದ ಸ್ಥಿತಿ!

ಅಸಲಿಗೆ ಈ ವಾರ ಸಾಯಿ ಪಲ್ಲವಿ ನಟಿಸಿರೋ ಅಮರನ್ ಸಿನಿಮಾ ತೆರೆಗೆ ಬರ್ತಾ ಇದೆ. ಇದು ದೇಶಕ್ಕಾಗಿ ಪ್ರಾಣ ತೆತ್ತ ವೀರ ಸೇನಾನಿ ಮುಕುಂದ್ ವರದರಾಜನ್ ಜೀವನವನ್ನಾಧರಿಸಿ ತಯಾರಾಗಿರೋ ಸಿನಿಮಾ. ಈ ಸಿನಿಮಾದಲ್ಲಿ ಶಿವ ಕಾರ್ತಕೇಯನ್, ಮೇಜರ್ ಮುಕುಂದ್ ಪಾತ್ರ ಮಾಡಿದ್ರೆ ಅವರ ಪತ್ನಿ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸೈನಿಕರ ಬಗ್ಗೆ ಸಿನಿಮಾ ಮಾಡೋ ಇವರಿಗೆ ಸೇನೆಯ ಬಗ್ಗೆ ಅದೆಷ್ಟು ಗೌರವ ಇದೆ ನೋಡಿ ಅಂತ ಸಾಯಿ ಪಲ್ಲವಿಯ ವಿಡಿಯೋ ಇಟ್ಟುಕೊಂಡು ಜನ ಕಾಮೆಂಟ್ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಬಾಯ್ಕಾಟ್ ಮಾಡಿ ಅಂತ ಸೋಷಿಯಲ್ ಮಿಡಿಯಾದಲ್ಲಿ ಅಬ್ಬರಿಸ್ತಾ ಇದ್ದಾರೆ. ಅಲ್ಲಿಗೆ ಸಾಯಿ ಪಲ್ಲವಿಯ ಎಡವಟ್ಟಿಗೆ ಅಮರನ್ ಸಿನಿಮಾ ಟೀಮ್ ತೊಂದರೆ ಪಡುವಂತೆ ಆಗಿದೆ. ಸದ್ಯ ಸಾಯಿ ಪಲ್ಲವಿ ಈ ವಿವಾದದ ಬಗ್ಗೆ ಏನು ಹೇಳ್ತಾರೆ..? ಕ್ಷಮೆ ಕೇಳಿ ವಿವಾದ ತಣ್ಣಗಾಗಿಸ್ತಾರಾ..? ಅಥವಾ ವಿವಾದದ ಬೆಂಕಿಗೆ ತುಪ್ಪ ಸುರೀತಾರಾ ಕಾದುನೋಡಬೇಕಿದೆ..