ಶ್ರೀದೇವಿ ಬಯೋಪಿಕ್​ಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಲ್ಲ ಎಂದ ಬೋನಿ ಕಪೂರ್​: ಏನಿದರ ಗುಟ್ಟು?

ನಟಿ ಶ್ರೀದೇವಿ ಸಾವಿನ ರಹಸ್ಯ ಗುಟ್ಟಾಗಿಯೇ ಉಳಿದಿರುವ ಈ ಹೊತ್ತಲ್ಲಿ, ಅವರ ಬಯೋಪಿಕ್​ಗೆ ತಾವು ಅನುಮತಿ ಕೊಡುವುದೇ ಇಲ್ಲ ಎಂದಿದ್ದಾರೆ ಪತಿ ಬೋನಿ ಕಪೂರ್​. ಏನಿದರ ಗುಟ್ಟು?
 

Boney Kapoor On The Prospect Of A Sridevi Biopic says Not Allow This To Happen suc

80-90ರ ದಶಕದಲ್ಲಿ ಬಾಲಿವುಡ್​ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿ ಸೇರಿದಂತೆ ತಮ್ಮ ನಟನೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1997ರಿಂದ  ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀದೇವಿ, 2012ರಲ್ಲಿ 'ಇಂಗ್ಲಿಷ್‌ಗೌರಿ ಶಿಂಧೆ ನಿರ್ದೇಶನದ  -ವಿಂಗ್ಲಿಷ್‌' ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್‌ ಆದರು. ಇದು ಇಂಗ್ಲಿಷ್​ ಬರದೇ ಮನೆಯವರಿಂದ ಕಡೆಗಣನೆಗೆ ಒಳಗಾಗುವ ಪಾತ್ರದಲ್ಲಿ ನಟಿಸಿದ್ದರು ಶ್ರೀದೇವಿ. ಈ ಚಿತ್ರವನ್ನೂ ಜನರ ಅದರಲ್ಲಿಯೂ ಗೃಹಿಣಿಯರ ಅಚ್ಚುಮೆಚ್ಚಿನದ್ದಾಗಿತ್ತು. ಶ್ರೀದೇವಿ  ಈ ಚಿತ್ರದಲ್ಲಿ ಶಶಿ (Shashi) ಹೆಸರಿನ ಪಾತ್ರ ಮಾಡಿದ್ದರು. ಶಶಿ ಮದುವೆ ಆದ ನಂತರದಲ್ಲಿ ಮನೆ ನೋಡಿಕೊಂಡಿರುವ ಗೃಹಿಣಿ.  ಮಕ್ಕಳು, ಗಂಡ ಆಕೆಯ ಪ್ರಪಂಚ. ಇಂಗ್ಲಿಷ್ ಬರುವುದಿಲ್ಲ ಎಂದು ಆಕೆಯನ್ನು ಕುಟುಂಬದವರೇ ಹಂಗಿಸುತ್ತಾರೆ. ಈ ಕಾರಣಕ್ಕೆ ಆಕೆ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡುತ್ತಾಳೆ. ನಂತರ ಇಂಗ್ಲಿಷ್ ಕಲಿತು ಮಾತನಾಡುತ್ತಾಳೆ. ಸಿನಿಮಾ ಕೊನೆಯಲ್ಲಿ ಆಕೆ ಅರ್ಥಪೂರ್ಣವಾಗಿ ಇಂಗ್ಲಿಷ್ ಮಾತನಾಡುತ್ತಾಳೆ. ಈ ಚಿತ್ರದ ಸಂದೇಶ ಬಹಳ ಮೆಚ್ಚುಗೆಗೆ ಒಳಗಾಗಿತ್ತು. 

  ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು.  ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆದಿವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 61 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೆ ವಯಸ್ಸಾದರೂ ಕೊನೆಯವರೆಗೂ ಆಕೆಯ ಮುಖದ ತೇಜಸ್ಸು ಎಂಥವರನ್ನೂ ಮರುಳು ಮಾಡುವಂತಿತ್ತು.

ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು


 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. 

ಇದರ ಮಧ್ಯೆಯೇ, ನಟಿಯ ಬಯೋಪಿಕ್​ ಬರಲಿದೆ ಎಂಬ ಸುದ್ದಿ ಕಳೆದೊಂದು ವರ್ಷದಿಂದ ಸದ್ದು ಮಾಡುತ್ತಲೇ ಇದೆ. ಹೀಗೆ ಬಯೋಪಿಕ್​ ಬಂದರೆ ಅಲ್ಲಿಯಾದರೂ ಶ್ರೀದೇವಿ ಸಾವಿನ ಬಗ್ಗೆ ಒಂದಿಷ್ಟು ಮಾಹಿತಿ ಸಿಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯ್ದಿದ್ದರು. ಇಷ್ಟೇ ಅಲ್ಲದೇ, ಬೋನಿ ಕಪೂರ್​ ಅವರ ಖಾಸಗಿ ಜೀವನದ ಒಂದಿಷ್ಟು ಕುತೂಹಲಗಳೂ ಜನರ ಮುಂದೆ ಬರುತ್ತಿತ್ತು. ಏಕೆಂದರೆ ಶ್ರೀದೇವಿ ಅವರನ್ನು ಮದುವೆಯಾದಾಗ ಬೋನಿ ಕಪೂರ್​ ಇನ್ನೂ ತಮ್ಮ ಮೊದಲ ಪತ್ನಿ ಮೋನಾರಿಗೆ ವಿಚ್ಛೇದನ ಕೊಟ್ಟಿರಲಿಲ್ಲ.  1996ರಲ್ಲಿ ಶ್ರೀದೇವಿ ಜೊತೆ  ಮದುವೆ ಆದರು. ಅವರಿಗೆ ಜಾಹ್ನವಿ ಮತ್ತು ಖುಷಿ ಕಪೂರ್​ ಮಕ್ಕಳಿದ್ದಾರೆ. ಇವುಗಳ ಬಗ್ಗೆಯೂ ಒಂದಿಷ್ಟು ಅಭಿಮಾನಿಗಳಿಗೆ ತಿಳಿಯುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ನಾನು ಬದುಕಿರುವವರೆಗೂ ಆಕೆಯ ಬಯೋಪಿಕ್​  ಮಾಡಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ ಬೋನಿ ಕಪೂರ್​! 

ಫ್ಲಾಪ್​ ಚಿತ್ರಗಳನ್ನು ಕೊಟ್ಟು, 6 ವರ್ಷ ಸಿನಿಮಾದಿಂದ ದೂರವಿದ್ದರೂ ಅಮಿತಾಭ್​, ಶಾರುಖ್​ಗಿಂತಲೂ ಫೇಮಸ್​ ಈಕೆ!

   ನಿರ್ಮಾಪಕರಾಗಿರುವ ಬೋನಿ ಕಪೂರ್  ‘ಮೈದಾನ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದರ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಆ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಅವರು,  ‘ಶ್ರೀದೇವಿ ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದರು. ಆದ್ದರಿಂದ ಅವರ ಮರಣದ ನಂತರವೂ ಇದನ್ನು ಅನುಸರಿಸಬೇಕಿದೆ. ಅವರ ಜೀವನದ ಮೇಲೆ ಬಯೋಪಿಕ್ ಬರುವುದಿಲ್ಲ. ನಾನು ಬದುಕಿರುವವರೆಗೂ ಬಯೋಪಿಕ್‌ಗೆ ಒಪ್ಪಿಗೆ ನೀಡುವುದಿಲ್ಲ’ ಎಂದಿದ್ದಾರೆ. ಇದುದ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. 

Latest Videos
Follow Us:
Download App:
  • android
  • ios