ಬಾಲಿವುಡ್‌ನಲ್ಲಿ ನಟರು ಕೋ ಸ್ಟಾರ್‌ಗಳನ್ನು ಕೆಟ್ಟದಾಗಿ ನಡೆಸಿಕೊಳ್ಳೋದು ಹೊಸ ವಿಚಾರವೇನಲ್ಲ. ಕಾರ್ಯಕ್ರಮಗಳಲ್ಲಿ ನಟರು, ನಟಿಯಂದಿರನ್ನು ಎತ್ತಿಕೊಳ್ಳುವುದು, ಮುದ್ದಾಡುವುದು, ಹಗ್ ಮಾಡುವುದು, ಕಿಸ್ ಮಾಡುವುದು ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್ ಪ್ರಿಯಾಮಣಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. 

ಬಾಲಿವುಡ್‌ನಲ್ಲಿ ನಟರು ಕೋ ಸ್ಟಾರ್‌ಗಳನ್ನು ಕೆಟ್ಟದಾಗಿ ನಡೆಸಿಕೊಳ್ಳೋದು ಹೊಸ ವಿಚಾರವೇನಲ್ಲ. ಹಲವಾರು ಇವೆಂಟ್, ಮೂವಿ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ನಟರು, ನಟಿಯಂದಿರನ್ನು ಎತ್ತಿಕೊಳ್ಳುವುದು, ಮುದ್ದಾಡುವುದು, ಹಗ್ ಮಾಡುವುದು, ಕಿಸ್ ಮಾಡುವುದು ಮಾಡುತ್ತಿರುತ್ತಾರೆ. ನಟಿಯಂದಿರಿಗೆ ಅನ್‌ಕಂಫರ್ಟೆಬಲ್ ಆಗುವಂತೆ ಮಾಡುತ್ತಾರೆ. ಹಾಗೆಯೇ ಇತ್ತೀಚಿಗೆ ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್ ಪ್ರಿಯಾಮಣಿಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

ಬೋನಿ ಕಪೂರ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಸರಾಂತ ಚಲನಚಿತ್ರ ನಿರ್ಮಾಪಕ. ಹಮಾರಾ ದಿಲ್ ಆಪ್ಕೆ ಪಾಸ್ ಹೈ, ಮಾಮ್, ಕೋಯಿ ಮೇರೆ ದಿಲ್ ಸೆ ಪೂಛೆ, ಮಿಸ್ಟರ್ ಇಂಡಿಯಾ, ರೂಪ್ ಕಿ ರಾಣಿ ಚೋರೋನ್ ಕಾ ರಾಜಾ ಸೇರಿದಂತೆ ಹಲವು ಚಿತ್ರಗಳಲ್ಲಿನ ಅಭಿನಯಕ್ಕಾಗಿ ಫೇಮಸ್ ಆಗಿದ್ದಾರೆ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿಚಿತ್ರ ವರ್ತನೆಯಿಂದ ಆಗಾಗ ಟ್ರೋಲ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಬಹುಭಾಷಾ ನಟಿ ಪ್ರಿಯಾಮಣಿಯ ಜೊತೆಗಿನ ಬಿಹೇವಿಯರ್‌ಗೆ ಟ್ರೋಲ್ ಆಗಿದ್ದಾರೆ.

ಶಿಖರ್ ತನ್ನ ಬಾಯ್‌ಫ್ರೆಂಡ್ ಎಂದು ನೆಕ್ಲೇಸ್ ಮೂಲಕ ಒಪ್ಪಿಕೊಂಡ ಜಾನ್ವಿ ಕಪೂರ್!

ಪ್ರಿಯಾಮಣಿಯನ್ನು ತಬ್ಬಿಕೊಂಡ ಬೋನಿ ಕಪೂರ್
ಏಪ್ರಿಲ್ 9, 2024 ರಂದು, ಬೋನಿ ಕಪೂರ್ ತಮ್ಮ ಹೊಸ ಸಿನಿಮಾ 'ಮೈದಾನ್‌'ನ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇವೆಂಟ್‌ಗಾಗಿ, ಚಲನಚಿತ್ರ ನಿರ್ಮಾಪಕರು ನೀಲಿ ಬಣ್ಣದ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ಇದಕ್ಕೆ ಹೊಂದಿಕೆಯಾಗುವಂತೆ ನೆಹರೂ ಕೋಟ್‌ನ್ನು ಆಯ್ಕೆ ಮಾಡಿದ್ದರು.

ಒಂದು ವೀಡಿಯೊದಲ್ಲಿ ಬೋನಿ ಕಪೂರ್‌, ನಟಿ ಪ್ರಿಯಾಮಣಿ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ, ಸೀರೆಯಲ್ಲಿ ಪ್ರಿಯಾಮಣಿ ಅದ್ಭುತವಾಗಿ ಕಾಣುತ್ತಿದ್ದರು. ಆದರೆ, ಎಲ್ಲರ ಗಮನ ಸೆಳೆದದ್ದು ಬೋನಿ ಕಪೂರ್‌ ನಟಿಯ ಸೊಂಟವನ್ನು ಹಿಡಿದು ನಂತರ ಆಕೆಯ ಭುಜದ ಮೇಲೆ ಕೈ ಹಾಕಿದ ರೀತಿ. ಈ ಸಂದರ್ಭದಲ್ಲಿ ಪ್ರಿಯಾಮಣಿ ತುಂಬಾ ಕಂಫರ್ಟೆಬಲ್ ಆಗಿದ್ದು ಸಹ ಕಂಡು ಬಂತು.

ಸ್ನಾನ ಸ್ಕಿಪ್​ ಮಾಡುವ ಸೀಕ್ರೇಟ್​ ಹೇಳಿದ ನಟಿ ತಮನ್ನಾ ಭಾಟಿಯಾ: ಏನಿದು ಮಿಲ್ಕಿ ಬ್ಯೂಟಿಯ ಸಂಡೇ ಗುಟ್ಟು?

ಪ್ರಿಯಾಮಣಿ ಜೊತೆಗೆ ಬೋನಿ ಕಪೂರ್ ಅನುಚಿತ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಬಳಕೆದಾರರೊಬ್ಬರು. 'ಪ್ರಿಯಾಮಣಿಯಂತಹ ಟ್ಯಾಲೆಂಟೆಡ್ ವ್ಯಕ್ತಿ ಸಹ ಇಂಥವರ ಅಸಹ್ಯಕರ ನಡವಳಿಕೆಯನ್ನು ಸಹಿಸಿಕೊಳ್ಳಬೇಕು. ಅವರು ಯುವ ಮತ್ತು ಮುಂಬರುವ ನಟಿಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂದು ಊಹಿಸಲು ಸಹ ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಇಬ್ಬರು ಹೆಣ್ಣುಮಕ್ಕಳಿದ್ದರೂ ಈ ರೀತಿ ವರ್ತಿಸುವುದು ನಾಚಿಕೆಯ ಸಂಗತಿ' ಎಂದಿದ್ದಾರೆ.