ಬಾಲಿವುಡ್‌ ಬಾದ್‌‌ಶಾ ಶಾರುಖ್‌ ಖಾನ್‌ ದಿನೇ ದಿನೇ ಒಂದಲ್ಲಾ ಒಂದು ವಿಚಾರಕ್ಕೆ ನೆಟ್ಟಿಗರ ಗಮನ ಸೆಳೆಯುತ್ತಾರೆ. ವಿಚಾರ ಯಾವುದೇ ಆಗಲಿ ಶಾರುಖ್‌ ಹೆಸರು ಕೇಳಿ ಬರಲೇ ಬೇಕು. ನಿನ್ನೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಕೋಟ್ ಸರಿ ಮಾಡಿ, ಸುದ್ದಿಯಲ್ಲಿದ್ದ ಲವ್ ಬಾಯ್, ಇದೀಗ ಐಷಾರಾಮಿ ಮನೆ ಕಟ್ಟಲು ವಿಪರೀತ ಮರ ಬಳಸಿ ದಂಡ ಕಟ್ಟ ಬೇಕಾಗಿ ಬಂದಿದ್ದರಿಂದ ಮತ್ತೆ ನ್ಯೂಸ್‌ನಲ್ಲಿದ್ದಾರೆ!

52ನೇ ಜನ್ಮದಿನದ ಪ್ರಯುಕ್ತ ಶಾರುಖಾನ್‌ ಪ್ರಕೃತಿಯ ಮಡಿಲಲ್ಲಿ ಐಷಾರಾಮಿ ಫಾರ್ಮ್‌ಹೌಸ್‌ ಅನ್ನು ಖರೀದಿಸಿ ಅದನ್ನು ನೆಲ ಸಮ ಮಾಡಿ, ಐರಾಷಾಮಿ ಬಂಗಲೆ ಕಟ್ಟಿಸಿದ್ದಾರೆ. ಅಷ್ಟೇ ಅಲ್ಲದೇ ಹೆಲಿಪ್ಯಾಡ್‌ ಹಾಗೂ ಸ್ವಿಮ್ಮಿಂಗ್ ಪೂಲ್‌ ಕೂಡ ನಿರ್ಮಿಸಿದ್ದಾರೆ.

ನನ್ನ ಪತ್ನಿ ಹಿಂದು, ನಾನು ಮುಸ್ಲಿಂ, ನಮ್ಮ ಮಕ್ಕಳು ಭಾರತೀಯರು: ಖಾನ್‌

ಬಾಂಬೆ ಟೆನೆಸಿ ಆ್ಯಕ್ಟ್ ಸೆಕ್ಷನ್‌ 63ರ ಪ್ರಕಾರ ಕೃಷಿ ಭೂಮಿಯಲ್ಲಿ ಐಷಾರಾಮಿ ಬಂಗಲೆ ಅಥವಾ ಹೆಲಿಪ್ಯಾಡ್‌ ಸೌಲಭ್ಯ ಕಲ್ಪಿಸಿಕೊಂಡಿದ್ದು, ಕಾನೂನು ಉಲ್ಲಂಘನೆಯಾಗುತ್ತದೆ. ಸರ್ಕಾರದ ಅನುಮತಿ ಇಲ್ಲದೇ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸುವುದು ತಪ್ಪು. ಶಾರುಖ್ ಖಾನ್‌ 52ನೇ ಹುಟ್ಟು ಹಬ್ಬಕ್ಕೆ ಅತ್ತೆ ಸವಿತಾ ಸಚ್ಚಿಬ್ಬಾ ಈ ಫಾರ್ಮ್ ಹೌಸನ್ನು ಉಡುಗೊರೆಯಾಗಿ ನೀಡಿದ್ದರು. ಬಾಲಿವುಡ್‌ ಪಾರ್ಟಿ ಹಾಗೂ ಪ್ರೈವೇಟ್ ಬರ್ತ್‌ಡೇ ಪಾರ್ಟಿಯನ್ನು ಖಾನ್‌ ಇಲ್ಲಿಯೇ ಆಯೋಜಿಸುವುದು. ಈ ಐಷಾರಾಮಿ ಬಂಗಲೆ ಸುಮಾರು 14.7 ಕೋಟಿ ರೂ. ಬೆಲೆ ಬಾಳುತ್ತದೆ.  

ಬಂಗಲೆ ಮಾಲೀಕರಿಗೆ 3.09 ಕೋಟಿ ದಂಡ ವಿಧಿಸಿರುವುದಾಗಿ ಕಲ್ಯಾಣ್ ದೊಂಬಿವಿಲ್ಲಾ ಮಹಾನಗರ ಪಾಲಿಕೆ ನೋಟಿಸ್‌ ನೀಡಿದೆ.