'ದಂಗಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಬ್ಯೂಟಿಫುಲ್ ಗರ್ಲ್‌ ಝೈರಾ ವಾಸಿಂ  ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡವರು. ಆದರೆ ಈ ಬ್ಯೂಟಿಫುಲ್‌ ಜರ್ನಿಗೆ ತುಂಬಾ ಬೇಗ ಫುಲ್‌ಸ್ಟಾಪ್‌ ಇಟ್ಟರು. ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ ಝೈವಾ ಈಗ ಸೋಷಿಯಲ್‌ ಮೀಡಿಯಾ ಲೈಫ್‌ಗೂ ಬೈ ಹೇಳುವ ಪರಿಸ್ಥತಿ ಎದುರಾಗಿದೆ.

ಅಬ್ಬಾ...! ಟಾರ್ಚರ್ ತಡೆಯಲಾರೆ' ಎಂದು ಚಿತ್ರರಂಗಕ್ಕೆ ಗುಡ್‌ಬೈ ಎಂದ ನಟಿ! 

ಹೌದು! ಕೆಲ ದಿನಗಳ ಹಿಂದೆ ರಾಜಸ್ಥಾನ, ಹರ್ಯಾಣ, ಗುಜರಾತ್‌, ಮಧ್ಯ ಪ್ರದೇಶ, ಪಂಜಾಬ್‌ ಹಾಗೂ ಅನೇಕ ದಕ್ಷಿಣ ಭಾರತ ಸ್ಥಳಗಳಲ್ಲಿ  ದಾಳಿ ಮಾಡಿರುವ ಮಿಡತೆ ಬಗ್ಗೆ ನಟಿ ಝೈವಾ ಟ್ಟೀಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು ಆದರೆ ಕುರಾನ್‌ನಲ್ಲಿ ಬರುವ ಒಂದು ಭಾಗ ಎಂದು ಜನರು ವಿರೋಧಿಸಿದ್ದಾರೆ.

“So We sent upon them the flood and locusts and lice and frogs and blood: Signs openly self explained: but they were steeped in arrogance- a people given to sin” ಎಂದು ಬರೆದುಕೊಂಡಿದ್ದರು. ಇದನ್ನೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಶೇರ್ ಮಾಡಿಕೊಂಡಿದ್ದರು.

ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ದಂಗಲ್ ನಟಿ

ಮಿಡತೆ ಒಂದು ಸಣ್ಣ ಹುಳವಾಗಿದ್ದು ಅದರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಇಷ್ಟೆಲ್ಲಾ ಚರ್ಚೆ ಆಗುವಂತ ಹೇಳಿಕೆ ನೀಡುವ ಅಗತ್ಯವಿರಲಿಲ್ಲ ಎಂಬ ಕಾರಣಕ್ಕೆ ನೆಟ್ಟಿಗರು ಝೈರಾಳನ್ನು ಕ್ಲಾಸ್‌ಗೆ ತೆಗೆದುಕೊಂಡಿದ್ದರು. ಆಕೆ ಸಾಮಾಜಿಕ ಜಾಲತಾಣವನ್ನು ಕ್ವಿಟ್‌ ಮಾಡುವಂತೆ ಒತ್ತಾಯ ಮಾಡಿದ್ದಾರೆ.  ಅಕೌಂಟ್‌ ಡಿಯಾಕ್ಟೀವ್ಟ್  ಮಾಡಿದ ನಂತರವೂ ಆಕೆ ಬಗ್ಗೆ ಚರ್ಚೆ ಆಗುತ್ತಿದ್ದ ಕಾರಣ ಕೆಲ ನಿಮಿಷಗಳ ಕಾಲ ಮತ್ತೆ ಕಮ್‌ ಬ್ಯಾಕ್‌ ಮಾಡಿ 'ನಾನು ಡಿಯಾಕ್ಟಿವೇಟ್‌ ಮಾಡಿರುವ ಕಾರಣ ನಾನು ಒಬ್ಬ ಮನುಷ್ಯೆ. ನನಗೂ ಜೀವನದಲ್ಲಿ ಬ್ರೇಕ್‌ ಬೇಕು ಎಂದೆನಿಸುತ್ತದೆ. ನನ್ನ ಮನಸ್ಸಿನಲ್ಲಿ ನನಗೆ ನೆಮ್ಮದಿ ಬೇಕು ಎಂದು ಧ್ವನಿ ಕೇಳಿ ಬಂದರೆ ನಾನು ತೆಗೆದುಕೊಳ್ಳುವ ಹೊರತು ಯಾರ ಮಾತುಗಳಿಗೂ ಹೆದರಿಕೊಂಡಲ್ಲ' ಎಂದು ಹೇಳಿ ಮತ್ತೆ ಮಾಯವಾಗಿದ್ದಾರೆ.

ಈ ಹಿಂದೆಯೂ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿ ಸೋಷಿಯಲ್‌ ಮೀಡಿಯಾ ಅಕೌಂಟ್ ಡಿಲೀಟ್‌ ಮಾಡಿದರು. ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷಗಳ ಕಾಲ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದರೂ ನೆಮ್ಮದಿಯಾಗಿಲ್ಲ ಎಂದು ಹೇಳಿಕೊಂಡಿದ್ದರು  ಮೊದಲ ಚಿತ್ರದ ನಂತರ ಅವಕಾಶಗಳು ಕೈ ಬೀಸಿ ಕರೆಯುತ್ತಿದ್ದರೂ, ಅನೇಕರಿಗೆ ಸ್ಪೂರ್ತಿಯಾದರೂ ಅದು ನನಗೆ ಖುಷಿ ಕೊಟ್ಟಿಲ್ಲ ಎಂದು ಹೇಳಿಕೆ ನೀಡಿದ್ದರು. 

ದಂಗಲ್‌, ಸೀಕ್ರೆಟ್‌ ಸೂಪರ್‌ ಹಾಗೂ ದಿ ಸ್ಕೈ ಈಸ್‌ ಪಿಂಕ್ ಚಿತ್ರಗಳಲ್ಲಿ ಮಿಂಚಿದ ನಂತರ ನನ್ನ ಕೆಲವೊಂದು ನಂಬಿಕೆಗಳಿಗೆ ದೇವರ ಹಾಗೂ ಜನರ ಆಶೀರ್ವಾದ ಕಳೆದುಕೊಂಡಿರುವೆ . ಇನ್ನೂ  ನಾನು ನಂಬಿಕೆ ಕಳೆದುಕೊಂಡರೆ ಎಂದೂ ಭಯದಿಂದ  ಮುಂದೆ ಹೋಗುವುದಿಲ್ಲ ಎಂದು ಬರೆದುಕೊಂಡು ಪೋಸ್ಟ್‌ ಮಾಡಿದರು.