ನವದೆಹಲಿ: ದಂಗಲ್ ಖ್ಯಾತಿಯ ನಟಿ ಝೈರಾ ವಾಸೀಂ (17) ಕಳೆದ 4 ವರ್ಷಗಳಿಂದ ಖಿನ್ನತೆಗೊಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತೆಯಾದ ಝೈರಾ ವಾಸೀಂ, ಖಿನ್ನತೆಗೊಳಗಾಗಿದ್ದ ಸಂದರ್ಭದಲ್ಲಿ ತಾನು ಎದುರಿಸಿದ ಸವಾಲುಗಳ ಬಗ್ಗೆ ಗುರುವಾರ ರಾತ್ರಿ ತಮ್ಮ ಇನ್ ಸ್ಟಾ ಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. 

ದೇಹ ಬಾಧೆ, ನರಗಳ ನಿಷ್ಕ್ರಿಯತೆ, ಮಧ್ಯರಾತ್ರಿ ನಿದ್ದೆ ಬಾರದಿರುವುದು, ಏನೋ ಒಂದು ರೀತಿ ಭಯ, ಹಸಿವಿದ್ದರೂ ಊಟ ಮಾಡಲಾಗದ ಸ್ಥಿತಿ ಮತ್ತು ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗುವ ಯೋಚನೆಗಳು ಬಂದಿದ್ದವು ಎಂದು ಹೇಳಿಕೊಂಡಿದ್ದಾರೆ.

 

 

A post shared by Zaira Wasim (@zairawasim_) on May 10, 2018 at 2:28pm PDT