ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಖ್ಯಾತ ನಟಿ ಎಂದೆನಿಸಿಕೊಂಡು ಈಗ ಚಿತ್ರರಂಗದಲ್ಲಿ ನೆಮ್ಮದಿ ಇಲ್ಲ ಎಂದು ಸಿನಿ ಜರ್ನಿಗೆ ಗುಡ್‌ ಬೈ ಹೇಳಿ ಶಾಕ್ ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ 'ದಂಗಲ್' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ವಿಜೇತೆ ಝೈರಾ ವಾಸಿಂ ತನ್ನ ಬ್ಯೂಟಿಪುಲ್ ಜರ್ನಿಗೆ ಫುಲ್‌ ಸ್ಟಾಪ್‌ ಇಡುವುದಾಗಿ ನಿರ್ಧಾರ ಮಾಡಿದ್ದು ಅಧಿಕೃತವಾಗಿ ತನ್ನ ಅಭಿಮಾನಿಗಳೊಂದಿಗೆ ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಸುಮಾರು 5 ವರ್ಷಗಳ ಕಾಲ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದರೂ 'ಇದು ನನಗೆ ಸಂತಸ ತಂದಿಲ್ಲ' ಎಂದು ಹೇಳುವುದರ ಮೂಲಕ ಟಾಟಾ ಮಾಡಿದ್ದಾರೆ. ಅಷ್ಟೇ ಅಲ್ಲದೇ ' 5 ವರ್ಷಗಳ ಹಿಂದೆ ನನ್ನ ಜೀವನದಲ್ಲಿ ತೆಗೆದುಕೊಂಡ ದೊಡ್ಡ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿತ್ತು. ಮೊದ ಮೊದಲಿಗೆ ಇಟ್ಟ ಹೆಜ್ಜೆಯಿಂದ ಬಾಲಿವುಡ್‌ ಕೈ ಚಾಚಿ ನನ್ನನ್ನು ಕರೆಯಿತು. ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದೆ. ಸಾವಿರಾರು ಮಂದಿಗೆ ಸ್ಫೂರ್ತಿಯಾದೆ. ಆದರೆ ಇದು ನನಗೆ ಎಕ್ಸ್ ಪ್ಲೋಸ್ ಮಾಡಲು ಒಂದು ಅವಕಾಶವಷ್ಟೇ. ಇದೇ ನನ್ನ ಜೀವನವಲ್ಲ ಎಂದು ತಿಳಿದಿತ್ತು. ಯಾವುದೇ ಖುಷಿ ಕೊಟ್ಟಿಲ್ಲ.' ಎಂದು ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಪೋಸ್ಟ್‌ ಬರೆದುಕೊಂಡಿದ್ದಾರೆ.

View post on Instagram

'ನಾವು ಮಾಡುವ ಕೆಲಸ ನಮ್ಮಲ್ಲಿನ ನಂಬಿಕೆಯನ್ನು ಹೆಚ್ಚಿಸಬೇಕು ಆದರೆ ನಾನು ಮಾತ್ರ ಇದರಿಂದ ಎಷ್ಟೋ ಜನರ ಹಾಗೂ ದೇವರ ಆರ್ಶೀರ್ವಾದ ಕಳೆದುಕೊಂಡೆ. ನನ್ನ ನಂಬಿಕೆಗೆ ಏನೇ ಅಡ್ಡ ಬಂದರೂ ಅದರಿಂದ ನಾನು ಎಂದೂ ಮುಂದೆ ಹೋಗುವುದಿಲ್ಲ' ಎಂದು ಮನದೊಂದು ಬರೆದುಕೊಂಡಿದ್ದಾರೆ.

ದಂಗಲ್ ಚಿತ್ರದ ಯಶಸ್ಸಿನ ನಂತರ 'ಸೀಕ್ರೆಟ್ ಸೂಪರ್ ಸ್ಟಾರ್' ಹಾಗೂ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.