ಮಹಾಮಾರಿ ಕೊರೋನಾ ವೈರಸ್‌ ಆರ್ಭಟ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ  ಇದೆ. ಜಾತಿ-ಭೇದ-ಧರ್ಮ ಯಾವುದನ್ನು ಲೆಕ್ಕಿಸದೇ ತನ್ನ ಆಟ ಶುರು ಮಾಡಿದೆ. ಅದರಲ್ಲೂ ಮುಂಬೈ ನಿವಾಸಿಗಳಾಗಿರುವ  ಬಿ-ಟೌನ್‌ ಚಿತ್ರರಂಗದ ಗಣ್ಯರಿಗೆ ಈ ವೈರಾಣುನಿಂದ ಸಂಕಷ್ಟ ಎದುರಾಗಿದೆ. ಇದೀಗ ಬಾಲಿವುಡ್ ನಟ ಅಮಿತಾಭ್‌ ಬಚ್ಚನ್ ಕುಟುಂಬದವರಿಗೂ ಕೊರೋನಾ ಪಾಸಿಟಿವ್ ಎಂದು ತಿಳಿದು ಚಿತ್ರರಂಗವೇ ಶಾಕ್‌ನಲ್ಲಿದೆ.

ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

ಆಸ್ಪತ್ರೆಯಲ್ಲಿ ಚಿಕಿತ್ಸೆ:

ನಟ ಅಮಿತಾಭ್ ಬಚ್ಚನ್ ಕುಟುಂಬ ಕೊರೋನಾ ಪರೀಕ್ಷೆ ಮಾಡಿಸಿಕೊಂಡ ನಂತರ ಕುಟುಂಬಸ್ಥರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅಮಿತಾಭ್ ಮತ್ತು ಅಭಿಷೇಕ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಐಶ್ವರ್ಯ, ಜಯಾ ಬಚ್ಚನ್ ಮತ್ತು ಆರಾಧ್ಯಾ ಎರಡನೇ ಬಾರಿ ಪರೀಕ್ಷೆ ಮಾಡಿಸಿದ್ದಾರೆ. ಎರಡನೇ ಪರೀಕ್ಷೆಯಲ್ಲಿ ಐಶ್ವರ್ಯ ಮತ್ತು ಆರಾಧ್ಯಾಗೆ ಕೊರೋನಾ ಇರುವುದು ಖಚಿತವಾಗಿದೆ. ಜಯಾ ಬಚ್ಚನ್ ಆರೋಗ್ಯವಾಗಿದ್ದು ತಮ್ಮ ಜಲ್ಸಾ ನಿವಾಸದಲ್ಲಿದ್ದಾರೆ.

ಬಿ-ಟೌನ್‌ನ ಪ್ರಾರ್ಥನೆ:

ಬಚ್ಚನ್ ಕುಟುಂಬದವರಿಗೆ ಸೋಂಕು ತಗುಲಿರುವುದು ಚಿತ್ರರಂಗದವರಿಗೆ ದೊಡ್ಡ ಶಾಕ್. ಅದರಲ್ಲೂ ಬಚ್ಚನ್ ವಯಸ್ಸು ಮತ್ತು ಆರಾಧ್ಯಾ ವಯಸ್ಸು ನಿರ್ಲಕ್ಷ್ಯ ಮಾಡುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಮತ್ತು ಅಭಿಮಾನಿಗಳು ಬಚ್ಚನ್ ಕುಟುಂಬ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. 

ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

ಈ ಸಮಯದಲ್ಲಿ ಐಶ್ವರ್ಯ ರೈ ಮಾಜಿ ಪ್ರಿಯಕರ ವಿವೇಕ್ ಮಾಡಿರುವ ಟ್ಟೀಟ್ ವೈರಲ್ ಆಗುತ್ತಿದೆ. ಖಾಸಗಿ ವೆಬ್‌ಸೈಟ್ ಮಾಡಿದ ಸುದ್ದಿಗೆ ಪ್ರತಿಕ್ರಿಯಿಸಿರುವ ವಿವೇಕ್ 'ಅವರ ಕುಟುಂಬದ ಯೋಗಕ್ಷೇಮ ಮತ್ತು ಚೇತರಿಕೆಗಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಬರೆದಿದ್ದಾರೆ.

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿವೇಕ್ ಐಶ್ವರ್ಯ ಜೊತೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಆದರೀಗ ಈ ಟ್ಟೀಟ್‌ನಿಂದ ವಿವೇಕ್ ನೆಟ್ಟಿಗರ ಪ್ರೀತಿಗೆ  ಪಾತ್ರರಾಗಿದ್ದಾರೆ. 'ಗೋಲ್ಡನ್‌ ಹಾರ್ಟ್‌ ಮ್ಯಾನ್‌ ವಿವೇಕ್ ಸರ್', 'ಮಾಜಿ ಪ್ರಿಯತಮೆಯಾದರೇನು ಪ್ರೀತಿ ಎಂದು ಸಾಯುವುದಿಲ್ಲ. ದೂರದಲ್ಲಿ ನಿಂತು ಅವರ ಕ್ಷೇಮಕ್ಕಾಗಿ ಪ್ರಾಥಿಸುತ್ತಿದ್ದೀರಾ ನೀವು ಗ್ರೇಟ್ ಸರ್' ಎಂದು ನೆಟ್ಟಿಗರು ಹೊಗಳಿದ್ದಾರೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"