ಪರದೆ ಮೇಲೆ ಅಮಿತಾಬ್‌ ರೇಖಾಳ ರೊಮ್ಯಾನ್ಸ್‌ ನೋಡಿ ಅತ್ತಿದ್ದರಂತೆ ಜಯಾ ಬಚ್ಚನ್‌

First Published Jun 4, 2020, 4:48 PM IST

ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನ 47 ವರ್ಷಗಳನ್ನು ಪೂರೈಸಿದೆ. ಜೂನ್ 3, 1973ರಂದು ಇವರ ಮದುವೆ ಅವಸರದಲ್ಲಿ ಆಗಿದ್ದು ಎಂದು ಹಲವರಿಗೆ ತಿಳಿದಿಲ್ಲ. ವಾಸ್ತವವಾಗಿ, ಅಮಿತಾಬ್ ಜಯಾ ಅವರೊಂದಿಗೆ ಹಾಲಿಡೇಗಾಗಿ ಲಂಡನ್‌ಗೆ ಹೋಗಲು ಬಯಸಿದ್ದರು, ಆದರೆ ತಂದೆ ಹರಿವಂಶ್‌ ರೈ ಬಚ್ಚನ್ ಇದಕ್ಕೆ ಸಿದ್ಧರಿರಲಿಲ್ಲ. ಇಬ್ಬರು ಮೊದಲು ಮದುವೆಯಾಗಿ, ನಂತರ ಹೋಗಬೇಕೆಂದು ಅವರು ಬಯಸಿದ್ದರಿಂದ ಬಿಗ್ ಬಿ ಜಯರನ್ನು ತರಾತುರಿಯಲ್ಲಿ ಮದುವೆಯಾದರು. ಆದರೆ ರೇಖಾ ಹಾಗೂ ಅಮಿತಾಬ್‌ರ ರಿಲೆಷನ್‌ಶಿಪ್‌ ಯಾವಾಗಲೂ ಚರ್ಚೆಯ ವಿಷಯವಾಗಿಯೇ ಉಳಿದಿದೆ. ರೇಖಾ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ ಇವರಿಬ್ಬರಿಗೆ ಸಂಬಂಧ ಪಟ್ಟ ಹಳೆ ಘಟನೆಯೊಂದು ಇಲ್ಲಿದೆ