'ಮೇ ಹೂ ನಾ' ಚಿತ್ರದಲ್ಲಿ ಮಿಸ್ ಚಾಂದಿನಿಯಾಗಿ ಮಿಂಚಿದ ಸುಶ್ಮಿತಾ ಸೇನ್ ಬಾಲಿವುಡ್‌ ಬಣ್ಣದ ಲೋಕದಲ್ಲಿ ತನ್ನದೇ ಶೈಲಿಯ ಅಭಿನಯದ ಮೂಲಕ ಛಾಪು ಮೂಡಿಸಿದ್ದಾರೆ. ಈ ವೇಳೆ 44 ನೇ ವಸಂತಕ್ಕೆ ಕಾಲಿಟ್ಟ ಸುಶ್ಮಿತಾ ದತ್ತು ಪುತ್ರಿ ಅಲಿಶಾ ಬರೆದ ಪತ್ರ ನೋಡಿ ಭಾವುಕರಾಗಿದ್ದಾರೆ.

‘ಮಿಸ್ ಯೂನಿವರ್ಸ್‌’ಗೆ 25 ನೇ ವರ್ಷದ ಸಂಭ್ರಮ

ಅಲಿಶಾ ಸುಶ್ಮಿತಾ ಸೇನ್ ಕ್ಲಾಸಿನಲ್ಲಿ ಅನಾಥ ಮಕ್ಕಳ ಬಗ್ಗೆ 2-3 ಪೇಜ್‌ ಪ್ರಬಂಧವನ್ನು ಬರೆದಿರುತ್ತಾರೆ. ಈ ವೇಳೆ ಶಾಲೆಗೆ ಭೇಟಿ ಕೊಟ್ಟ ಸುಶ್ಮಿತಾ ಮಗಳಿಗೆ ಅದನ್ನು ಓದುವಂತೆ ಹೇಳಿದಾಗ ಆಕೆ ಬರೆದಿರುವ ಸಾಲುಗಳನ್ನು ಕೇಳಿ ಭಾವುಕರಾಗುತ್ತಾರೆ. 'ಅಮ್ಮ ನಮ್ಮನ್ನು ದತ್ತು ಪಡೆಯುವ ಮೂಲಕ ನೀನು ಎರಡು ಮಕ್ಕಳಿಗೆ ಜನ್ಮ ನೀಡಿರುವೆ' ಎಂಬ ಸಾಲು ಕೇಳಿ ಸುಶ್ಮಿತಾ ಕಣ್ಣೀರಿಟ್ಟಿದ್ದಾರೆ.

ಈ ವಿಡಿಯೋವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.