ತಲೆಮರೆಸಿಕೊಂಡಿದ್ದ ಸುಶಾಂತ್ ಸಿಂಗ್ ಗೆಳೆಯ ಕುನಾಲ್ ಜಾನಿ ಅರೆಸ್ಟ್!
ಸುಶಾಂತ್ ಸಿಂಗ್ ಸ್ನೇಹಿತ ಕುನಾಲ್ ಜಾನಿಯನ್ನನ ಅರೆಸ್ಟ್ ಮಾಡಿದ ಮುಂಬೈ ಎನ್‌ಸಿಬಿ ಅಧಿಕಾರಿಗಳು.
ಬಾಲಿವುಡ್ ನಟ ಸುಶಾಂತ್ ಸಿಂಗ್ (Sushant Singh) ಖಿನ್ನತೆಗೆ ಒಳಗಾಗಿ ಜೂನ್ 14,2020ರಲ್ಲಿ ಆತ್ಮಹತ್ಯೆಗೆ (Suicide) ಶರಣಾದರು. ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್‌ನಲ್ಲಿ (Bollywood) ಡ್ರಗ್ಸ್ ಪ್ರಕರಣ (Drugs Case) ಬೆಳಕಿಗೆ ಬಂದಿದೆ. ಅನೇಕ ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿತ್ತು. ವಿಚಾರಣೆ ವೇಳೆ ಅನೇಕರನ್ನು ಪೊಲೀಸರು ಬಂಧಿಸಿದ್ದರು. ಆದರೆ ಸುಶಾಂತ್ ಜೊತೆಗಿದ್ದ ಸ್ನೇಹಿತ ಮಾತ್ರ ಅಂದಿನಿಂದಲೇ ಕಾಣೆಯಾಗಿದ್ದ. ನಾನ್ ಸ್ಟಾಪ್ ತನಿಖೆಯಲ್ಲಿ ತೊಡಗಿದ್ದ ಪೊಲೀಸರು, ಕುನಾಲ್‌ರನ್ನು (Kunal Janis) ಇದೀಗ ಬಂಧಿಸಿದ್ದಾರೆ.
'Magistrate ಎದುರು ಕುನಾಲ್‌ರನ್ನು ಪ್ರೊಡ್ಯೂಸ್ ಮಾಡಲಾಗಿದೆ. ನಮ್ಮ ಕೈಲಾದಷ್ಟು ಮಾಹಿತಿಗಳನ್ನು ನೀಡಿದ್ದೇವೆ. ಅದರಲ್ಲೂ ಹಲವು ಘಟನೆಗಳು ನಾಲ್ಕು ವರ್ಷಗಳ ಹಿಂದೆ ನಡೆದದ್ದು. ಇದು ಸೀರಿಯಸ್ ಅರೋಪ ಅಲ್ಲ. ಹೀಗಾಗಿ ಶಿಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬೇಕಿದೆ,' ಎಂದು ಅಧಿಕಾರಿಗಳು ಹೇಳಿದ್ದಾರೆ.
'ಕುನಾಲ್ ತಪ್ಪನ್ನು ತಿದ್ದುಕೊಳ್ಳಲು ಅವಕಾಶ ನೀಡಬೇಕು ಎಂಬ ಮಾತು ಶುರುವಾಗಿದೆ. ಅರ್ಜಿದಾರರು ವಿಚಾರಣೆಗೆ ಒಳಗಾಗಿದ್ದರೆ, ವ್ಯಸನಿ ಆಗಿದ್ದರೆ, ಅವರನ್ನು ಒಂದು ಸಣ್ಣ ವಿಚಾರಣೆಗೆ ಒಳಪಡಿಸಲಾಗುವುದು! ರಜಾ ದಿನಗಳು ಮತ್ತು ಬಾಕಿ ಇರುವ ವೈದ್ಯಕೀಯ ವರದಿಯ ದೃಷ್ಟಿಯಿಂದ, ನ್ಯಾಯಾಲಯವು ಕುನಾಲ್ ಅವರನ್ನು NCB ಕಸ್ಟಡಿಗೆ 4 ನೇ ಅಕ್ಟೋಬರ್ ವರೆಗೆ ನೀಡಿದೆ.' ಎಂದು ಹೇಳಿದ್ದಾರೆ.
ಒಟ್ಟಿಗೆ ಬಿಗ್‌ಬಾಸ್ ಮನೆ ಸೇರಲಿದ್ದಾರಾ ಸುಶಾಂತ್ ಸಿಂಗ್ ಮಾಜಿ ಗೆಳತಿಯರು ?ಡ್ರಗ್ಸ್ ಪೆಡ್ಲರ್‌ಗಳೊಂದಿಗಿನ (Drugs Peddler) ಸಂಪರ್ಕ ಮತ್ತು ಕಳೆದ ವರ್ಷ ಎನ್‌ಸಿಬಿ (NCB) ಬೇಧಿಸಿದ ಡ್ರಗ್ಸ್ ಸಿಂಡಿಕೇಟ್ ಬಗ್ಗೆ ಕುನಾಲ್ ಜಾನಿಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಸುಶಾಂತ್ ಸಿಂಗ್ ಮತ್ತೊಬ್ಬ ಸ್ನೇಹಿತ ಸಿದ್ಧಾರ್ಥ್ (Siddharth) ಫ್ಲ್ಯಾಟ್‌ಮೆಟ್ ಆಗಿದ್ದರು. ಆತನನ್ನು ಎನ್‌ಸಿಬಿ ಬಂಧಿಸಿದೆ. ಸಿದ್ಧಾರ್ಥ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ ಆದರೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಸುಶಾಂತ್ ಸಾವಿಗೂ ಮುನ್ನ ನಾಲ್ಕು ಮಂದಿ ಮನೆಯಲ್ಲಿದ್ದರು, ಅವರಲ್ಲಿ ಸಿದ್ಧಾರ್ಥ್ ಒಬ್ಬರು.
ಅಂದು ಸುಶಾಂತ್, ಇಂದು ಸಿದ್ಧಾರ್ಥ್: ಕೂಪರ್ ಹಾಸ್ಪಿಟಲ್ ವಿರುದ್ಧ 'ಹತ್ಯೆ' ಆರೋಪ!ಇನ್ನು ಸುಶಾಂತ್ ಸಿಂಗ್ ನಟನೆಯ ಎಂಎಸ್ ಧೋನಿ (MS Dhoni Biopic) ಸಿನಿಮಾ ಬಿಡುಗಡೆಯಾಗಿ 5 ವರ್ಷ ಪೂರೈಸಿದೆ. ಇದರ ಪ್ರಯುಕ್ತ ಅಭಿಮಾನಿಗಳು ಸುಶಾಂತ್ ಹ್ಯಾಷ್‌ಟ್ಯಾಗ್ (Hastag) ಬಳಸಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಸುಶಾಂತ್ ನಟನೆ ಬಗ್ಗೆ ಕೊಂಡಾಡಿದ್ದಾರೆ. ಸುಶಾಂತ್ ವೃತ್ತಿ ಜೀವನದಲ್ಲಿ ಮರೆಯಲಾಗದ ಎರಡು ಸಿನಿಮಾಗಳು ಅಂದರೆ ಚಿಚೋರೆ (Chhichhore) ಹಾಗೂ ಎಂಎಸ್‌ಡಿ.