ಬಾಲಿವುಡ್‌ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಹಾಗೂ ನಿರೂಪಕನಾಗಿ ಮಿಂಚುತ್ತಿರುವ ಕರಾವಳಿ ಹುಡುಗ ಸುನೀಲ್‌ ಶೆಟ್ಟಿ ಈಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ.  ಕಿಚ್ಚ ಸುದೀಪ್‌ ಜೊತೆ ಪೈಲ್ವಾನ್ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಸುನೀಲ್‌ ಶೆಟ್ಟಿ ಏನು ಮಾಡುತ್ತಿದ್ದಾರೆ? ಅವರ ಮುಂದಿನ ಸಿನಿಮಾ ಯಾವುದು ಎಂಬುವುದಕ್ಕೆ ಇಲ್ಲಿ ಫುಲ್ ಕ್ಲಾರಿಟಿ...

ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮತ್ತು ಮನಾರ ಲವ್‌ ಸ್ಟೋರಿ

ವೀರಪ್ಪನ್ ಬಯೋಪಿಕ್‌:

ಎಎಂಆರ್‌ ರಮೇಶ್ ನಿರ್ದೇಶನ, ನಟ ಕಿಶೋರ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಅಟ್ಟಹಾಸ' ಕರ್ನಾಟಕ, ಕೇರಳ ಮತ್ತ ತಮಿಳುನಾಡು ಈ ಮೂರು ರಾಜ್ಯದ ಪೊಲೀಸ್‌ ಇಲಾಖೆ ನಿದ್ದೆ ಗೆಡಿಸಿದ್ದ ಕಾಡಿನ ರಾಜ ವೀರಪ್ಪನ್ ಕತೆಯಾಗಿದ್ದು ಅದರಲ್ಲಿ ಆತನ ಬಗ್ಗೆ ಅನೇಕ ವಿಚಾರಗಳನ್ನು ಹೇಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಆತನನ್ನು ಬಂಧಿಸಲು ಸಹಕಾರಿಯಾದ ಪೊಲೀಸರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾದ ಕಾರಣ ವೆಬ್‌ ಸೀರಿಸ್ ರೂಪದಲ್ಲಿ ರಿಲೀಸ್‌ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.

 

 
 
 
 
 
 
 
 
 
 
 
 
 

We can choose to be affected by the world or we can choose to affect the world.

A post shared by Suniel Shetty (@suniel.shetty) on May 22, 2020 at 8:20am PDT

ಈ ಸೀರಿಸ್‌ನಲ್ಲಿ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ಬಾಲಿವುಡ್‌ ನಟನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಈ ಹಿಂದೆಯೇ ತಂಡ ಮಾಹಿತಿ ನೀಡಿತ್ತು. ಆದರೀಗ ಆ ನಾಯಕ ಯಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. 

ಸುನೀಲ್ ವರ್ಕೌಟ್:

58 ವರ್ಷದ ನಟ ಸುನೀಲ್ ಪೊಲೀಸ್‌ ಅಧಿಕಾರಿ ಪಾತ್ರಕ್ಕೆ ತುಂಬಾನೇ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಫಿಟ್ನೆಸ್‌ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಅಪ್ಡೇಟ್ ಮಾಡುತ್ತಲೇ  ಇರುತ್ತಾರೆ.  ಸುನೀಲ್‌ ಶೆಟ್ಟಿ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸಿನಿ ಸ್ನೇಹಿತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸುನೀಲ್‌ ಪೈಲ್ವಾನ್‌ ಚಿತ್ರಕ್ಕಾಗಿ  ದೇಹ ದಂಡಿಸುತ್ತಿದ್ದ ರೀತಿಗೆ ಕಿಚ್ಚ ಸುದೀಪ್‌ ಫುಲ್ ಫಿದಾ ಆಗಿದ್ದರು. ಕನ್ನಡ  ವೆಬ್  ಸೀರಿಸ್‌ನಲ್ಲಿ ಸುನೀಲ್‌ ಶೆಟ್ಟಿ ಅಭಿನಯಿಸುತ್ತಿರುವುದು ನಮ್ಮೆಲ್ಲಾ ಸಂತೋಷದ ವಿಚಾರವೇ ಎಂದು ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.