ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ | ಬಾಲಿವುಡ್ ಸೆಲಬ್ರಿಟಿಗಳಿಂದ ಅಭಿಮಾನಿಗಳಿಗೆ ವಿಶ್ | ಅಭಿಮಾನಿಗಳಿಗೆ ಹೋಳಿ ಶುಭ ಹಾರೈಸಿದ ನಟರು
ಬೆಂಗಳೂರು (ಮಾ. 21): ಇಂದು ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ. ಎಲ್ಲರೂ ಬಣ್ಣದ ರಂಗಿನಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳಾದ ಮಾಧುರಿ ದೀಕ್ಷಿತ್ ನೇನೆ, ಅಕ್ಷಯ್ ಕುಮಾರ್, ಅನಿಲ್ ಕಪೂರ್, ಹೇಮಾ ಮಾಲಿನಿ, ಹೃತಿಕ್ ರೋಷನ್ ಸೇರಿದಂತೆ ಸಾಕಷ್ಟು ನಟರು ಅಭಿಮಾನಿಗಳಿಗೆ ಹೋಳಿ ಹಬ್ಬದ ವಿಶ್ ಮಾಡಿದ್ದಾರೆ.
ಈ ಹೋಳಿ ಹಬ್ಬ ನಿಮ್ಮ ಬದುಕಿನಲ್ಲಿ ಇನ್ನಷ್ಟು ರಂಗನ್ನು ತುಂಬಲಿ. ಎಲ್ಲರಿಗೂ ಶುಭಾಶಯಗಳು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಹೋಳಿ ನಿಮ್ಮ ಬದುಕಿನಲ್ಲಿ ರಂಗನ್ನು ಚೆಲ್ಲಲಿ ಎಂದು ಅನಿಲ್ ಕಪೂರ್ ಶುಭ ಹಾರೈಸಿದ್ದಾರೆ
ರಂಗಿನ ಹಬ್ಬ ನಿಮಗೆ ಇನ್ನಷ್ಟು ಸುಖ, ಶಾಂತಿ ನೆಮ್ಮದಿ ಕೊಡಲಿ ಎಂದು ಹೃತಿಕ್ ವಿಶ್ ಮಾಡಿದ್ದಾರೆ.
ಬಣ್ಣದ ಹಬ್ಬವು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೀಪಿಕಾ ಪಡುಕೋಣೆ ವಿಶ್ ಮಾಡಿದ್ದಾರೆ.
