'ಕೇದರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸಿಂಪಲ್ ಆ್ಯಂಡ್ ಹಂಬಲ್ ಹುಡುಗಿ ಸಾರಾ ಅಲಿ ಖಾನ್ ದಿನೇ ದಿನೇ ಒಂದಲ್ಲಾ ಒಂದು ವಿಚಾರಕ್ಕೆ ಬಿ-ಟೌನ್‌ನಲ್ಲಿ ಸುದ್ದಿ ಆಗುತ್ತಿದ್ದಾರೆ. 

ಪಟೌಡಿ-ಖಾನ್ ಕುಟುಂಬದ ಕುಡಿ ಯಾಕಿಂಗೆ? ಗ್ಲಾಮರ್ ಗೊಂಬೆ ಸಾರಾ ನೋಡಿ!

PCOD ಸಮಸ್ಯೆ ಎದುರಿಸುತ್ತಿರುವ ಸಾರಾ ಯೋಗ, ಜಿಮ್ ಹಾಗೂ ಸ್ವಿಮ್ಮಿಂಗ್ ಮಾಡುವ ಮೂಲಕ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟಿಕೊಂಡಿದ್ದಾರೆ. 96 ಕೆಜಿಯಿಂದ  45 ಕೆಜಿಗೆ ತೂಕ ಇಳಿಸಿಕೊಂಡ ಸಾರಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎದುರಿಸುತ್ತಿರುವ ಹೆಣ್ಣು ಮಕ್ಕಳಿಗೆ ಮಾದರಿಯಾದವರು.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?

ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಸಾರಾ ಎಷ್ಟೇ ಬ್ಯುಸಿ ಇದ್ದರು ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. ಅಭಿಮಾನಿಗಳ ಪ್ರಕಾರ ಸಾರಾ ಹೆಚ್ಚಾಗಿ ಸಿಗುವುದೇ ಜಿಮ್‌ ಮುಗಿಸಿ ಹೊರ ಬರುವಾಗ. ಆಕೆಗಾಗಿ ಅಭಿಮಾನಿಗಳು ಕಾದು ಫೋಟೋ ಹಾಗೂ ಆಟೋಗ್ರಾಫ್ ಪಡೆಯುತ್ತಾರೆ. ಇತ್ತೀಚಿಗೆ ಜಿಮ್‌ನಿಂದ ಸಾರಾ ಹೊರ ಬರುವಾಗ ಅಭಿಮಾನಿಯೊಬ್ಬ ಫೋಟೋ ಕೇಳಿ ಆಕೆಯ ಕೈ ಹಿಡಿದು ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಆದರೆ ಗಾಬರಿಗೊಂಡ ಸಾರಾಳನ್ನು ಬೌನ್ಸರ್‌ ರಕ್ಷಿಸಿದ್ದಾರೆ.

"

ಜನವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ