ಅಭಿಮಾನಿ ಕೇಳಿದ ಪ್ರಶ್ನೆಗೆ ಫನ್ನಿ ವಿಡಿಯೋ ಹಂಚಿಕೊಂಡು ಟ್ರೋಲಿಗರಿಗೆ ಗುರಿಯಾದ ಬಾಲಿವುಡ್ ಬ್ಯೂಟಿ ಸಾರಾ.  

ಬಾಲಿವುಡ್‌ನಲ್ಲಿ ರಾಜ ಮನೆತನಕ್ಕೆ ಸೇರಿದ ನಟಿಯರಲ್ಲಿ ಸಾರಾ ಅಲಿ ಖಾನ್ ಕೂಡ ಒಬ್ಬರು. ಸೈಫ್‌ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ ಇದೀಗ ಚಿತ್ರರಂಗದ ಬೇಡಿಕೆಯ ನಟಿ. ಕೈ ತುಂಬಾ ಸಿನಿಮಾ, ಜಾಹೀರಾತುಗಳ ಪ್ರಾಜೆಕ್ಟ್‌ ಹಿಡಿದುಕೊಂಡಿರುವ ಸಾರಾ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಸ್ಟಾರ್. ಆಗಾಗ ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಮಾತನಾಡುವಾಗ ಅಭಿಮಾನಿ ಕೇಳಿದ ಪ್ರಶ್ನೆಗೆ ಸಾರಾ ಉತ್ತರ ಕೊಟ್ಟಿರುವುದು ಹೀಗೆ....

ಸಾರಾ ಮಾತಿನ ಮಲ್ಲಿ ಹಾಗೂ ಸಿಕ್ಕಾಪಟ್ಟೆ ಕೆಲಸ ಮಾಡುವ ತುಂಟ ಹುಡುಗಿ, ಎಂದು ಈಗಾಗಲೆ ಎಲ್ಲರಿಗೂ ಗೊತ್ತಿದೆ. ಆದರೂ ಯಾರಿಗಾದರೂ ಪ್ರ್ಯಾಂಕ್ ಮಾಡಲು ಹೋಗಿ ಅದು ವಿಫಲವಾಗಿದ್ದ ಘಟನೆ ನಡೆದಿದ್ಯಾ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಕ್ಕೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸಾರಾ ಸ್ಪಾಟ್ ಗರ್ಲ್ ಜೊತೆ ಫೋಟೋಗೆ ಪೋಸ್‌ ಕೊಡಲು ಹೋಗಿ ತಕ್ಷಣವೇ ಆಕೆಯನ್ನು ನೀರಿಗೆ ನೂಕುವ ಪ್ರಯತ್ನ ಮಾಡುತ್ತಾರೆ. ಆದರೆ ಆಕೆ ಸಾರಾಳನ್ನೂ ಕೂಡ ಎಳೆದುಕೊಂಡು ನೀರಿಗೆ ಬೀಳುತ್ತಾಳೆ. 

Sara Ali Khan Food Love: ವಿಕ್ಕಿ ಜೊತೆ ಇಂಡೋ-ಚೈನೀಸ್ ಫುಡ್ ಎಂಜಾಯ್ ಮಾಡ್ತಿದ್ದಾರೆ ಸಾರಾ

ವೈಟ್‌ ಬಿಕಿನಿ ಡ್ರನ್‌ನಲ್ಲಿ ಸಾರಾ, ಸೆಲ್ವಾರ್‌ನಲ್ಲಿ ಸ್ಪಾಟ್‌ ಗರ್ಲ್‌.....ಇವರ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ ಇರಲಿ, ಅಮಿತಾಭ್ ಬಚ್ಚನ್ ಇರಲಿ ಸಾರಾಳ ತುಂಟತನ ಕಡಿಮೆ ಇಲ್ಲ. ಕೆಲವರು ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರಾ ಇದು ತಮಾಷೆ ಅಲ್ಲ, ನಿನ್ನಂತೆ ಆಕೆಗೆ ಯಾರೂ ಅಸಿಸ್ಟೆಂಟ್ ಇರುವುದಿಲ್ಲ. ಟವಲ್ ಮತ್ತು ಬಟ್ಟೆ ಹಿಡಿದುಕೊಂಡು ಬರಲು ಹೀಗೆ ಮಾಡಬೇಡ, ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ನೀವು ಏನ್ ಮಾಡಿದ್ದರೂ ಮಾಡಿಸಿಕೊಳ್ಳಬೇಕು ಕಾರಣ ಆಕೆ ಸ್ಪಾಟ್ ಗರ್ಲ್. ಅದೇ ನಿಮಗೆ ಯಾರಾದರೂ ಸೆಟ್‌ನಲ್ಲಿದ್ದವರು ಹೀಗೆ ಮಾಡಿದ್ದರೆ ನಿಮ್ಮ ರಿಯಾಕ್ಷನ್ ಹೇಗಿರುತ್ತಿತ್ತು? ಎಂದು ಕಾಮೆಂಟ್ ಮಾಡಿದ್ದಾರೆ. 

ಇನ್ನೂ ಸಾರಾಗೆ ಡ್ರೀಮ್‌ ಡೆಸ್ಟಿನೇಷನ್‌ ಯಾವುದು ಎಂದು ಕೇಳಿದ್ದಾರೆ. ಆಗ Northern lights ಎಂದು ಬರೆದಿದ್ದಾರೆ. ಅಲ್ಲದೇ ಆ ಸ್ಥಳದಲ್ಲಿ ನಿಂತುಕೊಂಡು ಪೋಸ್‌ ಕೊಡುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಸಾರಾ ಕೈ ಹಿಡಿದುಕೊಂಡು ನಿಂತಿರುವುದು ಯಾರೆನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. 

ನಿಮ್ಮ ಮುಂದಿನ ದುಬೈ ಪ್ರವಾಸ ಯಾವಾಗ? ಎಂದು ಕೇಳಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಸಾರಾ ತಮ್ಮ ಕೈಯಾರೆ ಚಾಕೋಲೆಟ್‌ ಬಾರ್ ಮುರಿಯುತ್ತಿದ್ದು, ನಮ್ಮ ಚಾಲೋಕೇಟ್ ಕಲೆಕ್ಷನ್‌ ಮುಗಿಯುತ್ತಿದ್ದಂತೆ ಹೊಸ ಚಾಕೋಲೇಟ್‌ ಖರೀದಿಸಲು ಬರುವೆ ಎಂದಿದ್ದಾರೆ. ನಿಮ್ಮ ನೆಚ್ಚಿನ ನಟ ಯಾರೆಂಬ ಪ್ರಶ್ನೆಗೆ ರಣವೀರ್ ಸಿಂಗ್ 6 ಪ್ಯಾಕ್ ಫೋಟೋ ಹಂಚಿಕೊಂಡು ರಾಮ್ ಲೀಲಾ ಹಾಡನ್ನು ಪ್ಲೇ ಮಾಡಿದ್ದಾರೆ. 

ನಿಮ್ಮ ನೆಚ್ಚಿನ ಬಟ್ಟೆ ಬ್ರ್ಯಾಂಡ್‌ ಯಾವುದು, ಎಂದು ಪ್ರಶ್ನೆಗೆ 'ಯಾವ ಬ್ರ್ಯಾಂಡ್ ಆದರೇನು, ನಮಗೆ ಫ್ರೀ ಕೊಡುವ ಎಲ್ಲಾ ಬಟ್ಟೆಗಳು ತುಂಬಾನೇ ಇಷ್ಟವಾಗುತ್ತದೆ,' ಎಂದು ಸಾರಾ ಹೇಳಿದ್ದಾರೆ. ವರುಣ್ ಜೊತೆ ಕೆಲಸ ಮಾಡುವುದಕ್ಕೆ ಹೇಗಿರುತ್ತದೆ ಎಂಬ ಪ್ರಶ್ನೆಗೆ, 'ವರುಣ್‌ ದವಾನ್‌ ಒಬ್ಬರೇ ಸೆಟ್‌ನಲ್ಲಿ ನನ್ನ ಜೊತೆ ಸೇರಿಕೊಂಡು ಫನ್ ಮಾಡುವುದು'. ಕೆಲವರು ಪದೇ ಪದೇ ಮೊಬೈಲ್ ನಂಬರ್ ಕೊಡುವಂತೆ ಸಾರಾಗೆ ಕೇಳಿದ್ದಾರೆ. ನನ್ನ ಮೊಬೈಲ್ ನಂಬರ್ ಕೊಟ್ಟರೆ, ನೀವು ನನ್ನ ನೆಮ್ಮದಿ ಹಾಳು ಮಾಡುತ್ತೀರಾ. ನಂಬರ್ ಇಟ್ಕೊಂಡು ಏನ್ ಮಾಡ್ತೀರಾ...? ಎಂದು ಸಾರಾ ಕೇಳಿದ್ದಾರೆ.

ಒಟ್ಟಿನಲ್ಲಿ ಸಾರಾ Question & Answer ಮಾಡಲಿ ಎಂದು ಅಭಿಮಾನಿಗಳು ಪದೇ ಪದೇ ಕೇಳಿಕೊಳ್ಳುವುದು ಈ ರೀತಿ ಫನ್ನಿ ಉತ್ತರ ಪಡೆಯುವುದಕ್ಕೆ.

View post on Instagram