ಕೊರೋನಾ ಲಾಕ್‌ಡೌನ್‌ ಮುನ್ನ ದುಬೈಗೆ ತೆರಳಿದ ಖ್ಯಾತ ನಟನ ಕುಟುಂಬ. ಆತಂಕದಲ್ಲಿರುವ ನಟ ಜೈಲಿನ ಬಗ್ಗೆ ಚಿಂತಿಸುತ್ತಿರುವುದೇಕೆ?

ಬಾಲಿವುಡ್‌ ದಾದ ಹಾಗೂ ಕಾಂಟ್ರವರ್ಸಿ ಮ್ಯಾನ್ ಎಂದೇ ಹೆಸರು ಪಡೆದಿರುವ ಸಂಜಯ್ ದತ್ತ ಈಗ ಆತಂಕದಲ್ಲಿದ್ದಾರೆ. ಕೊರೋನಾ ವೈರಸ್‌ ಹಬ್ಬುವ ಮುನ್ನವೇ ದುಬೈಗೆ ತೆರಳಿದ್ದ ಸಂಜಯ್ ದತ್ ಪತ್ನಿ ಹಾಗೂ ಮಕ್ಕಳು ಅಲ್ಲೇ ಸಿಲುಕಿಕೊಂಡಿದ್ದಾರೆ.

ಸಂಜಯ್ ದತ್ ಪತ್ನಿ ಮಾನ್ಯತಾ ಹಾಗೂ ಇಬ್ಬರು ಮಕ್ಕಳು ಇಕ್ರಾ ಮತ್ತು ಶಹ್ರಾನ್‌ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದಲ್ಲಿರುವ ಸಂಜಯ್ ದತ್ ಏಕಾಂಗಿಯಾಗಿ ಲಾಕ್‌ಡೌನ್‌ ಸಮಯವನ್ನು ಕಳೆಯುತ್ತಿದ್ದಾರಂತೆ. ಈ ಬಗ್ಗೆ ಸಂಜಯ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

ದುಬೈನವರಿಗೆ ಶಾರುಖ್‌ ಸಂದೇಶ; ಭಾರತದವರಿಗೆ ಮಾತ್ರ ಕ್ಯಾರೆ ಅನ್ನೊಲ್ಲ?

'ಕುಟುಂಬದವರ ಜೊತೆ ನೇರವಾಗಿ ಮಾತನಾಡಲು, ಜೊತೆಗಿರಲು ಸಾಧ್ಯವಾಗದಿದ್ದರೂ ಸೋಷಿಯಲ್‌ ಮೀಡಿಯಾ ಮೂಲಕ ಒಟ್ಟಾಗಿದ್ದೀವಿ. ತಂದೆಯಾಗಿ, ಪತಿಯಾಗಿ ನಾನು ನನ್ನ ಕುಟುಂಬ ಆರೋಗ್ಯದ ಬಗ್ಗೆ ತುಂಬಾ ಚಿಂತೆಯಲ್ಲಿರುವೆ' ಎಂದು ಹೇಳಿಕೊಂಡಿದ್ದಾರೆ.

ದುಬೈನಲ್ಲಿ ಸೋನು ನಿಗಮ್; ಕೊರೋನಾ ಬಿಡೋವರ್ಗೂ ಭಾರತಕ್ಕೆ ಬರಲ್ಲ!

ಅಷ್ಟೇ ಅಲ್ಲದೆ ಕಾರಣಾಂತರಗಳಿಂದ ಜೈಲು ವಾಸಿಯಾಗಿದ್ದ ಸಂಜಯ್ ದತ್ ಆ ದಿನಗಳನ್ನು ನೆನೆದು ಮಾತನಾಡಿದ್ದಾರೆ. 'ಈ ಹಿಂದೆಯೂ ನಾನು ಲಾಕ್‌ಡೌನ್‌ ಆಗಿದ್ದೆ ಈ ಎರಡೂ ಸಮಯದಲ್ಲೂ ನಾನು ಮಿಸ್‌ ಮಾಡಿಕೊಂಡಿದ್ದು , ಮಾಡಿಕೊಳ್ಳುತ್ತಿರುವುದು ನನ್ನ ಫ್ಯಾಮಿಲಿನಾ. ನನಗೆ ಅವರೇ ಪ್ರಪಂಚ. ಟೆಕ್ನಾಲಜಿಗೆ ದೊಡ್ಡ ಥ್ಯಾಂಕ್ಸ್‌ ಅವರೊಟ್ಟಿಗೆ ಮಾತನಾಡುವ ಅವಕಾಶವಾದರೂ ಈಗ ಇದೆ. ಜೀವನದಲ್ಲಿ ಯಾವುದು ಮುಖ್ಯವೆಂದು' ಸಮಯ ನಮಗೆ ತಿಳಿಸಿಕೊಡುತ್ತಿದೆ .ಎಂದು ಮಾತನಾಡಿದ್ದಾರೆ.