ವಿಶ್ವದಾದ್ಯಂತ  ಜನರನ್ನು ನುಂಗುತ್ತಾ ಬರುತ್ತಿರುವ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸಮಯದಲ್ಲಿ ಪರ ದೇಶದವರ ಮೇಲೆ ಹೆಚ್ಚಿನ ಕಾಳಜಿ ವಹಿಸಿದ ಶಾರುಖ್‌ ವಿರುದ್ಧ ಭಾರತೀಯರು ಫುಲ್ ಗರಂ ಆಗಿದ್ದಾರೆ..

ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ಫ್ಯಾನ್ಸ್ ಒಬ್ರಾ ಇಬ್ರಾ ? ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲೆಡೆ ಮಹಾಮಾರಿ ಕೊರೋನಾ ವೈರಸ್‌ ಆಟ ಶುರು ಮಾಡಿದ ಕಾರಣ ಸಿನಿಮಾ ತಾರೆಯರು ತಮ್ಮ ಕುಟುಂಬಸ್ಥರ ಜೊತೆ ತಮ್ಮ-ತಮ್ಮ ಗೂಡುಗಳಿಗೆ ಸೇರಿಕೊಂಡಿದ್ದಾರೆ.

ಕೊರೋನಾ ವೈರಸ್‌ ಹುಟ್ಟಿದ್ದು ಚೈನಾದಲ್ಲೇ ಆಗಿದ್ದರೂ ಅದರಿಂದ ಭೀಕರ ಪರಿಣಾಮ ಎದುರಿಸುತ್ತಿರುವುದು ಮಾತ್ರ ಇಟಲಿ, ರಷ್ಯಾ, ದುಬೈ ಹಾಗೂ ಭಾರತ. ಈ ನಡುವೆ ಅಭಿಮಾನಿಗಳು ಸುರಕ್ಷಿತವಾಗಿರ ಬೇಕು ಎಂದು ಸಾಕಷ್ಟು ಸಿನಿ ತಾರೆಯರು ಜಾಗೃತಿ ಮೂಡಿಸುವ ವಿಡಿಯೋಗಳನ್ನು ಮಾಡುತ್ತಿದ್ದಾರೆ ಇನ್ನು ಕೆಲವರು ನಿರ್ಗತಿಕರಿಗೆ ಸಹಾಯವಾಗಲೆಂದು ಮೋದಿ ಫಂಡ್‌ಗೆ ಹಣ ನೀಡುತ್ತಿದ್ದಾರೆ. ಆದರೆ ಶಾರುಖ್‌ ಮಾತ್ರ ದುಬೈ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವುದು ನೆಟ್ಟಿಗರಿಗೆ ಕಿಡಿಕಾರಲು ಕಾರಣವಾಗಿದೆ .

ಇದನ್ನು ಮಾತ್ರ ಕಿಂಗ್‌ ಖಾನ್‌ ಅನ್‌ಲೈನ್‌ನಲ್ಲಿ ಖರೀದಿಸಲ್ವಂತೆ!

ಹೌದು! ಕೆಲ ದಿನಗಳ ಹಿಂದೆ ಶಾರುಖ್‌ ದುಬೈನ ಜನರು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದ ನೆಟ್ಟಿಗರು 'ಭಾರತೀಯರ ಬಗ್ಗೆ ನಿಮಗೇಕೆ ಕಾಳಜಿ ಇಲ್ಲಾ? ಹಣವಿಲ್ಲವದವರೂ ಸಹ ಏನೋ ಒಂದು ಸಹಾಯ ಎಂದು ಕೂಡಿಟ್ಟ ಹಣ ದಾನ ಮಾಡುತ್ತಿದ್ದಾರೆ ಆದ್ರೆ ಕೋಟಿಗಟ್ಟಲೆ ಹಣ ಸಂಪಾದಿಸಿ ಯಾಕೆ ಸುಮ್ಮನಿದ್ದೀರಾ? ನಿಮಗೆ ವಿದೇಶದವರ ಬಗ್ಗೆ ಅಷ್ಟೊಂದು ಪ್ರೀತಿ, ಕಾಳಜಿ ಇದ್ರೆ ನಿಮ್ಮನೂ ನಾವು ಅಲ್ಲಿಗೆ ಕಳುಹಿಸುತ್ತೇವೆ' ಎಂದು ಕಾಮೆಂಟ್‌ ಮಾಡಿದ್ದಾರೆ. 

Scroll to load tweet…

ಕಾಲಿವುಡ್‌-ಟಾಲಿವುಡ್‌- ಸ್ಯಾಂಡಲ್‌ವುಡ್‌ ಅನೇಕ ಗಣ್ಯರು ಧನ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ . ಅಲ್ಲದೆ ಅಕ್ಷಯ್ ಕುಮಾರ್ 25 ಕೋಟಿ ರೂ ಕೊಟ್ಟಿದ್ದಾರೆ. ಈ ಖಾನ್ ತ್ರಯರು ಏನು ಕೊಟ್ಟಿದ್ದಾರೆಂದೂ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .