ಬಾಲಿವುಡ್‌ ಸುಲ್ತಾನ್‌, ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ ವಿರುದ್ಧ ಆರೋಪಗಳು ಹರಿದಾಡುವುದು ಸರ್ವೇ ಸಾಮಾನ್ಯ. ಅದರಲ್ಲೂ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾದ ನಂತರವಂತೂ ಸಲ್ಲು ಏನೇ ಕೆಲಸ ಮಾಡಿದ್ದರೂ ಅದು ಸಿಂಪತಿ ಪಡೆದುಕೊಳ್ಳಲು ಎಂಬ ರೀತಿಯಲ್ಲಿ ಮಾತುಗಳು ಹರಿದಾಡುತ್ತಿದ್ದವು. 

ಸಲ್ಮಾನ್‌ ಪ್ರೀತಿಯ ಅಪಾರ್ಟ್ಮೆಂಟ್‌ ಹೇಗಿದೆ ನೋಡಿ - ಪೋಟೋಗಳು

ರೈತನಾಗಿಲ್ವಾ ಸಲ್ಲು:
ಲಾಕ್‌ಡೌನ್‌ ಪ್ರಾರಂಭದಿಂದಲೂ ಕುಟುಂಬಸ್ಥರು ಮತ್ತು ಆಪ್ತ ಸಿನಿ ತಾರೆಯರು, ಗರ್ಲ್ ಫ್ರೆಂಡ್ ಜೊತೆ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ ಸಲ್ಲು ಬಾಯ್. ರೈತನಾಗಿ ಉಳುಮೆಯನ್ನೂ ಮಾಡುತ್ತಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತನ್ನು ಸತ್ಯ ಮಾಡಲು, ಮಣ್ಣಿನಲ್ಲಿ ಮಣ್ಣಿನ ಮಗನಾಗಿ ದುಡಿಯುತ್ತಿದ್ದಾರೆ.

 

 
 
 
 
 
 
 
 
 
 
 
 
 

Respect to all the farmers . .

A post shared by Salman Khan (@beingsalmankhan) on Jul 14, 2020 at 3:42am PDT

ಇತ್ತೀಚಿಗೆ ಸಲ್ಮಾನ್‌ ಖಾನ್‌ 'ಎಲ್ಲಾ ರೈತರಿಗೆ ಗೌರವ' ಎಂದು ಬರೆದುಕೊಂಡು ಫೋಟೋವೊಂದನ್ನು ಶೇರ್ ಮಾಡಿದ್ದರು. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದ ನೆಟ್ಟಿಗರು 'ಸಲ್ಮಾನ್ ಖಾನ್‌ ಬೇಕಂತಲೇ ಮೈ-ಕೈಗೆ ಕೆಸರು ಮೆತ್ತಿಕೊಂಡು ಫೋಟೋಗೆ ಪೋಸ್‌ ನೀಡಿರುವುದು,' ಎಂದು ಆರೋಪಿಸಿದ್ದರು. ಇನ್ನು ಕೆಲವರು 'ಇದು ರೈತರಿಂದ ಸಿಂಪತಿ ಪಡೆಯುವುದಕ್ಕೆ' ಎಂದೂ ಹೇಳಿದ್ದರು.

ಸಾಕ್ಷಿಗೆ ಈ ವಿಡಿಯೋ:
ಸಲ್ಮಾನ್‌ ರೈತರನ್ನ ಅಗೌರವವಾಗಿ ನೋಡಿಕೊಂಡಿದ್ದಾರೆ. ಈ ರೀತಿ ಮಾಡಬಾರದು ಎಂಬ ಮಾತು ಕೇಳಿ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್‌ ಅನ್ನು ತಾವೇ ಚಲಿಸುತ್ತಿರವ ವಿಡಿಯೋ ಇದಾಗಿದ್ದು 'ಫಾರ್ಮಿಂಗ್' ಎಂದು ಬರೆದುಕೊಂಡಿದ್ದಾರೆ. ಅಪ್ಪಟ ರೈತನಾಗಿ ಕಾಣಿಸಿಕೊಂಡಿರುವ ಈ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಸಾರಿ ವೀಕ್ಷಿಸಲ್ಪಟ್ಟಿದೆ. 

ಇತ್ತ ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಮೈಸೂರಿನ ತಮ್ಮ ಫಾರ್ಮ್‌ಹೌಸಲ್ಲಿ ಫುಲ್ ಬ್ಯುಸಿಯಾಗಿದ್ದು, ಅಪ್ಪಟ ರೈತನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾವು ಸಾಕಿರುವ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆಯುತ್ತಿರುವ ಕರುನಾಡ ದಾಸನೂ, ಇತ್ತೀಚೆಗೆ ಟ್ರಾಕ್ಟರ್ ಓಡಿಸಿದ್ದು, ವೀಡಿಯೋ ಫುಲ್ ವೈರಲ್ ಆಗಿತ್ತು. 

 

 
 
 
 
 
 
 
 
 
 
 
 
 

Farminggg

A post shared by Salman Khan (@beingsalmankhan) on Jul 19, 2020 at 11:32am PDT

ಅತ್ತ ನವಾಜುದ್ದೀನ್ ಸಿದ್ದಿಕಿ ಸಹ ಗದ್ದೆಯಲ್ಲಿ ಕೆಲಸ ಮಾಡಿರುವ ವೀಡಿಯೋ ಶೇರ್ ಮಾಡಿಕೊಂಡು, ತಮ್ಮ ಭೂಮಿ ಪ್ರೇಮವನ್ನು ತೋರಿಸಿಕೊಂಡಿದ್ದರು. ಒಟ್ಟಿನಲ್ಲಿ ಎಲ್ಲ ದೊಡ್ಡ ದೊಡ್ಡ ನಟರೆಲ್ಲರೂ ಭೂಮಿಯೊಂದಿಗೆ ತಮ್ಮ ನಂಟನ್ನು ತೋರಿಸಿಕೊಡುತ್ತಿದ್ದು, ಎಲ್ಲರಿಗೂ ಕೃಷಿ ಪ್ರೇಮ ಹೆಚ್ಚಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ.