21 ದಿನಗಳ ಲಾಕ್‌ಡೌನಿಂದ ಕೊರೋನಾ ವೈರಸ್‌ ದೂರವಾಗುತ್ತಿದೆ ಎಂದು ಭಾಸವಾದರೂ ಬಾಲಿವುಡ್‌ ಮಂದಿಯ ಮೇಲೆ ಆಕ್ರಮಣ ಮಾಡುತ್ತಿರುವುದು  ಕೊಂಚ ಭಯ ಹೆಚ್ಚಿಸುತ್ತಿದೆ . ಬಿ-ಟೌನ್‌ನಲ್ಲಿ ಕನಿಕಾ ಕಪೂರ್‌ ನಂತರ ಯಾರಿಗೂ ಕಾಣಿಸಿಕೊಳ್ಳದ ಕೊರೋನಾ ವೈರಸ್‌ ಈಗ ನಿರ್ಮಾಪಕರ ಕುಟುಂಬದ ಮೇಲೆ ಅಟ್ಯಾಕ್‌ ಮಾಡಿದೆ.

ಶಾರುಖ್‌ ಪ್ರೊಡ್ಯೂಸರ್‌ ಎಂದೇ ಗುರುತಿಸಿಕೊಂಡಿರುವ ಕರೀಮ್‌ ಮೊರಾನಿ ಅವರ ಅವಳಿ ಹೆಣ್ಣು ಮಕ್ಕಳು ಜೀಯಾ ಹಾಗೂ ಶಾಜಾಗೆ ಕೊರೋನಾ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು ವೈದ್ಯಕೀಯ ತಪಾಸಣೆ ನಂತರ ಪಾಸಿಟಿವ್‌ ಎಂದು ತಿಳಿದು ಬಂದಿದೆ ಆದರೀಗ ಕರೀಮ್‌ ಅವರಿಗೂ ವೈರಸ್‌ ಇರುವುದು ಕನ್‌ಫರ್ಮ್‌ ಆಗಿದೆ.

ಖ್ಯಾತ ನಿರ್ಮಾಪಕನ ಅವಳಿ ಹೆಣ್ಣು ಮಕ್ಕಳಿಗೆ ಕೊರೋನಾ ಪಾಸಿಟಿವ್!

'ಕರೀಮ್‌ ಬಾಯ್‌ ಅವರಿಗೆ ಕೊರೋನಾ ಪಾಸಿಟಿವ್‌ ಎಂದು ತಿಳಿದು ಬಂದಿದೆ. ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕರೀಮ್ ಹಾಗೂ  ಪತ್ನಿ ಮತ್ತೊಂದು ನಿವಾಸದಲ್ಲಿ ಸೋಷಿಯಲ್‌ ಡಿಸ್ಟೆನ್ಸ್ ಪಾಲಿಸುತ್ತಿದ್ದರೂ  ಅವರಿಗೆ ಹಾಗೂ ಮನೆಯ ಕೆಲಸದವರಿಗೂ ಟೆಸ್ಟ್‌ ಮಾಡಿಸಲಾಗಿತ್ತು. ರಿಪೋರ್ಟ್‌ ನೆಗೆಟಿವ್‌ ಎಂದು ತಿಳಿದು ಬಂದಿದೆ' ಎಂದು ಕರೀಮ್ ಸಹೋದರ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕರೀಮ್‌ ಪುತ್ರ ಜೀಯಾ ರಾಜಸ್ಥಾನ ಪ್ರವಾಸದಿಂದ ಮಾರ್ಚ್‌ ಮಧ್ಯದಲ್ಲಿ ಹಿಂತಿರುಗಿದ್ದಾರೆ ಹಾಗೂ ಶಾಜಾ ಶ್ರೀಲಂಕಾ ಪ್ರವಾಸದಿಂದ ಮಾರ್ಚ್‌ ಮೊದಲ ವಾರದಲ್ಲಿ ಹಿಂತಿರುಗಿದ್ದಾರೆ. ಜೋಯಾಳಲ್ಲಿ ಮೊದಲು ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಆನಂತರ ಶಾಜಾಗೂ ತಗುಲಿದೆ. ಶಾಜಾ ಕೋಕಿಲಾಬೆನ್‌ ಧೀರುಬಾಯ್‌ ಅಂಬಾನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಜೀಯಾ ಹಾಗೂ ನಿರ್ಮಾಪಕ  ಕರೀಮ್‌ ನಾನಾವಟಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ಕರೀಮ್‌ ಅವರಿಗೆ ವೈದ್ಯರು ಇನ್ನೂ ಎರಡು ಟೆಸ್ಟ್‌ ಮಾಡುವುದು ಉಳಿದಿದೆ ಎಂದು ತಿಳಿಸಿದ್ದಾರೆ .