Asianet Suvarna News Asianet Suvarna News

ಜಗಳ ಮತ್ತು ಮನಸ್ತಾಪ ಕಾಮನ್, ಮನೆಯಲ್ಲಿ ಯಾರೂ ಸೀರಿಯಸ್‌ ಆಗಿಲ್ಲ: ನಟಿ Surbhi Chandna

ಬಿಬಿ15 ಮನೆ ಪ್ರವೇಶಿಸಿದ ಸುರಭಿ ಚಂದನಾ ಮನೆಯಲ್ಲಿರುವ ಸದಸ್ಯರ ಬಗ್ಗೆ ಮಾತನಾಡಿದ್ದಾರೆ. 

Bollywood Nagini 5 fame Surbhi Chandna shares her memories about BB15 vcs
Author
Bangalore, First Published Jan 3, 2022, 4:40 PM IST
  • Facebook
  • Twitter
  • Whatsapp

ಹಿಂದಿ (Hindi) ಜನಪ್ರಿಯ ನಾಗಿಣಿ 5 (Nagini 5) ಧಾರಾವಾಹಿ ನಟಿ ಸುರಭಿ ಚಂದನಾ (Surbhi Chandna) ಬಿಗ್ ಬಾಸ್ ಸೀಸನ್ 15ರಲ್ಲಿ (Bigg Boss 15) ಒಂದು ದಿನದ ಎಂಟ್ರಿ ಕೊಟ್ಟಿದ್ದರು. ಈ ಸುರಭಿ ಕೂಡ ಮಾಜಿ ಬಿಗ್ ಬಾಸ್ ಸ್ಪರ್ಧಿ ಆಗಿರುವ ಕಾರಣ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಎನರ್ಜಿ (Energy) ತುಂಬಲು ಹೋಗಿದ್ದರು. ಮಾತಿನ ಚಕಮಕಿಯಿಂದ ಯಾರೂ ಕೂಡ ಟಾಸ್ಕ್‌ ಅ್ನನ್ನು ಸಂಪೂರ್ಣವಾಗಿ ಮುಗಿಸುತ್ತಿರಲಿಲ್ಲ. ಹೀಗಾಗಿ ಅವರಿಗೆ ಮಾರ್ಗದರ್ಶನ ನೀಡಲು ಸುರಭಿ ಎಂಟರ್ ಆಗಿದ್ದರು. 

'ಈ ವರ್ಷದ ಸೀಸನ್‌ನಲ್ಲಿ ಅದ್ಭುತವಾಗಿರುವ ಸ್ಪರ್ಧಿಗಳು ಇದ್ದಾರೆ. ಆದರೆ ಶೋ ಮಾಡುವವರಿಗೆ ಏನೋ ಮಿಸ್ಸಿಂಗ್ ಎನಿಸುತ್ತಿದೆ. ಸ್ಪರ್ಧಿಗಳಿಗೆ ಕೊಂಚ ಎಜರ್ನಿ ಬೇಕೆಂದು ನನ್ನನ್ನು ಕರೆಸಿದ್ದರು. ಕೆಲವು ವಾರಗಳಿಂದ ಯಾವ ಟಾಸ್ಕ್‌ ಅನ್ನೂ ಸಂಪೂರ್ಣವಾಗಿ ಮುಗಿಸದೇ ಮುಂದೂಡುತ್ತಿದ್ದಾರೆ. ನಟ ಮುನ್ಮುನ್ ದತ್ತಾ ( Munmun Dutta), ವಿಶಾಲ್ ಸಿಂಗ್ (Vishal Singh) ಮತ್ತು ಆಕಾಂಕ್ಷಾ ಪುರಿ ( Aakanksha Puri) ಜೊತೆ ಸ್ಪರ್ಧಿಗಳಿಗೆ ಚಾಲೆಂಜ್ ಮಾಡಲು ನಾನು ಪ್ರವೇಶಿಸಿದೆ. ಹೊರಗಿನ ಪ್ರಪಂಚ ಸಂಪರ್ಕವಿಲ್ಲದೇ ಒಂದು ಮನೆಯಲ್ಲಿ ಇರುವುದು ತುಂಬಾನೇ ಡಿಫರೆಂಟ್. ದಿನ ನಿತ್ಯಕ್ಕೆ ಬೇಕಾಗಿರುವ ಸಾಮಾಗ್ರಿಗಳಿಗೆ ಜಗಳ ಆಡುತ್ತಿದ್ದಾರೆ ಕೆಲವರು,' ಎಂದು ಸುರಭಿ ಖಾಸಗಿ ಸಂದರ್ಶನದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡಿದ್ದಾರೆ. 

Family Time: ಕುಟಂಬದೊಂದಿಗಿದ್ದರೆ ಹೆಚ್ಚುತ್ತೆ ವಿಶ್ವಾಸವೆಂದ ಗರಿಮಾ

'ಮನೆಯಲ್ಲಿ ಮನಸ್ತಾಪ ಮತ್ತು ಜಗಳ ತುಂಬಾನೇ ಕಾಮನ್. ಆದರೆ ಅಲ್ಲಿ ಮೈ ಕೈ ಮುಟ್ಟಿಕೊಂಡು ಜಗಳ (Fight) ಆಡುವಂತಿಲ್ಲ. ಇಂಥ ದೊಡ್ಡ ವೇದಿಕೆಯನ್ನು ತುಂಬಾನೇ ಸುಲಭವಾಗಿ ಸ್ವೀಕರಿಸಿದ್ದಾರೆ. ಅವರನ್ನು ಚಾಲೆಂಜ್ ಮಾಡುವುದು ನನ್ನ ಪಾತ್ರವಾಗಿತ್ತು. ವಾಹಿನಿ ಜೊತೆ ನನಗೆ ಒಳ್ಳೆಯ ಸಂಬಂಧವಿದೆ. ಸೀಸನ್‌ 14ರಲ್ಲಿ ನಾನು ನಾಗಿಣಿ ಪ್ರಚಾರ ಮಾಡಲು ಆಗಮಿಸಿದ್ದೆ,' ಎಂದಿದ್ದಾರೆ ಸುರಭಿ. 

'ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ (Personal Life) ಸಾಕಷ್ಟು ಪ್ಲ್ಯಾನ್‌ಗಳಿವೆ. ಸರಿಯಾದ ಸಮಯಕ್ಕೆ ನಾನು ವಿಚಾರಗಳನ್ನು ಹಂಚಿಕೊಳ್ಳುವೆ. ನಾನು ಕೆಲಸ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾನೇ selfish. ನಾಗಿಣಿ ಮುಗಿಸುತ್ತಿದ್ದಂತೆ ನನಗೆ ಆಫರ್‌ಗಳು ಹರಿದು ಬರುತ್ತಿವೆ. ಆದರೆ ಯಾವುದೂ ನನಗೆ ಖುಷಿ ಕೊಟ್ಟಿಲ್ಲ.  ಕೆಲಸದ ವಿಚಾರದಲ್ಲಿ ನನಗೆ benchmarks ಇವೆ, ನಾನು ಯಾವುದಕ್ಕೂ ಕಾಂಪ್ರೋಮೈಸ್ (Compromise) ಆಗುವುದಿಲ್ಲ. ವೈಯಕ್ತಿಕ ಜೀವನದ ಬಗ್ಗೆ ಯಾವ ಕಾಮೆಂಟ್ ಮಾಡುವುದಿಲ್ಲ,' ಎಂದು ಹೇಳಿದ್ದಾರೆ. 

Family Time: ಕುಟಂಬದೊಂದಿಗಿದ್ದರೆ ಹೆಚ್ಚುತ್ತೆ ವಿಶ್ವಾಸವೆಂದ ಗರಿಮಾ

ಇಷ್ಕ್ಬಾಜ್ (Ishqbaaz) ಮತ್ತು ಸಂಜೀವನಿ 2 (Sanjeevani 2) ಧಾರಾವಾಹಿಯಲ್ಲಿ ನಟಿಸಿರುವ ಸುರಭಿಗೆ ನಾಗಿಣಿ ಪಾತ್ರ ತುಂಬಾನೇ ಸಂತೋಷ ತಂದುಕೊಟ್ಟಿದೆ ಎಂದಿದ್ದಾರೆ. 'ಬಾನಿ ಸಿಂಘಾನಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಶ್ರಮ ಹಾಕಿರುವೆ. ಪದೇ ಪದೇ ಪಾತ್ರ ಮತ್ತು ದೇಹದ ಆಕಾರ ಬದಲಾಯಿಸಿಕೊಳ್ಳುವ ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಕಷ್ಟವಾಯ್ತು. ಆದರೆ ಈ ಪಾತ್ರ ನನ್ನನ್ನು ಹೇಗೆ ಶೇಪ್ ಮಾಡುತ್ತದೆ ಎಂದು ಏಕ್ತಾ ಕಪೂರ್‌ಗೆ ಮೊದಲೇ ತಿಳಿದಿತ್ತು. ಅವರು ನಂಬಿಕೆ ಮತ್ತು ನಿರೀಕ್ಷೆ ಇಟ್ಟಿರುವುದಕ್ಕೆ ಸಂತೋಷವಿದೆ. ಈ ಅನುಭವ ನನ್ನ ಜೀವನ ಪೂರ್ತಿ ಮರೆಯಲಾಗದ ಪಾಠ ಹೇಳಿಕೊಟ್ಟಿದೆ,' ಎಂದು ಸುರಭಿ ಮಾತನಾಡಿದ್ದಾರೆ.

Follow Us:
Download App:
  • android
  • ios