ಟಿವಿ ಶೋ ಮೂಲಕ ಹುಡುಗಿ ಹುಡುಕಲು ಮುಂದಾದ ಖ್ಯಾತ Rapper. ನಿಜವಾದ ಪ್ರೀತಿ ಇದ್ದ ಕಡೆ ಮೋಸಕ್ಕೆ ಜಾಗವಿಲ್ಲ ಎಂದ ಮಿಕಾ....
ಹಿಂದಿ ಜನಪ್ರಿಯ ಗಾಯಕ ಮಿಕಾ ಸಿಂಗ್ ಟಾಪ್ ಸೆಲೆಬ್ರಿಟಿಯರಿಂದ ಹಿಡಿದು ಜನ ಸಾಮಾನ್ಯರ ಮದುವೆ ಕಾರ್ಯಕ್ರಮದಲ್ಲಿ ಮತ್ತು ಪಾರ್ಟಿಯಲ್ಲಿ ಹಾಡು ಹಾಡಿದ್ದಾರೆ. ಇಷ್ಟೊಂದು ಮದುವೆ ಸಮಾರಂಭದಲ್ಲಿ ಭಾಗಿಯಾಗುವ ನಿಮಗೆ ಮದುವೆ ಆಗುವ ಆಸೆ ಇಲ್ವಾ ಎಂದು ಅಭಿಮಾನಿಗಳು ಪದೇ ಪದೇ ಪ್ರಶ್ನಿಸುತ್ತಾರೆ. 20 ವರ್ಷಗಳಲ್ಲಿ ಸುಮಾರು 150 ಹುಡುಗಿಯರ ಪ್ರಪೋಸ್ ಬಂದರೂ ಬೇಡ ಎಂದಿರುವ ಗಾಯಕ ಈಗ ಸ್ವಯಂವರ ಮೂಲಕ ಆಯ್ಕೆ ಮಾಡಲು ಸಜ್ಜಾಗಿದ್ದಾರೆ. ಏನಿದು ಹೊಸ ಟಿವಿ ಶೋ?
ಮಿಕಾ ಮಾತು:
'ಈಗ ನಾನು ಆಯ್ಕೆ ಮಾಡಿಕೊಂಡಿರುವ ರೀತಿಯಲ್ಲಿ ಹುಡುಗಿಯನ್ನು ಆಯ್ಕೆ ಮಾಡಬೇಕು ಎಂದು ಹಲವರಿಗೆ ಆಸೆ ಇರುತ್ತದೆ. ಹಲವು ವರ್ಷಗಳ ನಂತರ ನನಗೆ ಈ ಆಫರ್ ಸಿಗುತ್ತಿರುವುದಕ್ಕೆ ಖುಷಿ ಇದೆ. ಕಳೆದ 20 ವರ್ಷಗಳಲ್ಲಿ ನಾನು ಸುಮಾರು 150 ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿರುವೆ. ಆಗ ನನಗೆ ನನ್ನ ಕೆಲಸ ತುಂಬಾನೇ ಮುಖ್ಯವಾಗಿತ್ತು. ನನಗೆ ಪಾರ್ಟಿ ಮಾಡುವುದಕ್ಕೆ ಹುಡುಗಿಯ ಜೊತೆ ಸುತ್ತಾಡುವುದಕ್ಕೆ ಇಷ್ಟ ಅದಿಕ್ಕೆ ಮದುವೆ ಅಗುತ್ತಿಲ್ಲ ಎಂದು ಗಾಸಿಪ್ ಹಬ್ಬಿಸಿದ್ದರು. ಆದರೆ ಸತ್ಯ ಅದಲ್ಲ. ಮದುವೆ ಅಗುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಇಲ್ಲಿಯವರೆಗೂ ನನ್ನ ಯಾವುದೇ ಗೆಳತಿಯರನ್ನು ದಲೇರ್ ಪಾಜಿಗೆ ತೋರಿಸುವಷ್ಟು ಧೈರ್ಯ ನನಗೆ ಬಂದಿಲ್ಲ . ಇಂತಹ ಒಂದು ಪದ್ಧತಿ ನಮ್ಮ ಮನೆಯಲ್ಲಿ ಇಲ್ಲ. ಮನೆ ಹಿರಿಯರ ಬಗ್ಗೆ ಒಂದು ಬಗೆಯ ಗೌರವ ಹಾಗೂ ಭಯ ಇದೆ. ಕೊನೆಗೂ ಇಂತಹುದ್ದೊಂದು ಆಫರ್ ಬಂದಾಗ ದಲೇರ್ ಪಾಜೀಯೇ ಖುದ್ದು 'ಮಾಡು, ಯಾರಿಗೊತ್ತು ಯಾರಾದರೂ ಸಿಕ್ಕರೆ? ಹೇಗಿದ್ದರೂ ನೀನು ನನ್ನ ಮಾತು ಕೇಳುವುದಿಲ್ಲ' ಎಂದು ಇಟೈಮ್ಸ್ ಸಂದರ್ಶನದಲ್ಲಿ ಮಿಕಾ ಮಾತನಾಡಿದ್ದಾರೆ.
![]()
'ನಾನು ಮದುವೆ ಆಗಲು ನಿರ್ಧಾರ ಮಾಡಿರುವುದಕ್ಕೆ ನನ್ನ ಕುಟುಂಬ ಖುಷಿ ಪಡುತ್ತಿದೆ. ಜನರನ್ನು ಭೇಟಿ ಮಾಡುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ. ನಾನು ಸಾದ ಹುಡುಗಿ ಕುಟುಂದ ಬಗ್ಗೆ ಚಿಂತೆ ಮಾಡುತ್ತೀನಿ ಅವರ ಮನೆಯವರು ಏನು ತಿಳಿದುಕೊಳ್ಳುತ್ತಾರೆ ನಾನು 20 ವರ್ಷದಿಂದ ಎಲ್ಲಾ ರಿಜೆಕ್ಟ್ ಮಾಡಿಕೊಂಡು ಬಂದು ಈಗ ಯಸ್ ಅಂದ್ರೆ? ಈ ಯೋಚನೆ ಇದೆ. ನಾನು ಒಳ್ಳೆ ಮನಸ್ಸಿರುವ ಕೆಟ್ಟ ಹುಡುಗ ಹೀಗಾಗಿ ಹೆಚ್ಚಿಗೆ ಫ್ಯಾನ್ಸ್ ಇದ್ದಾರೆ. ಕಲಾವಿದರು ತಮ್ಮ ಕಾರ್ಯಕ್ರಮಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ ಆದರೆ ನಾನು ಏನೂ ಪೋಸ್ಟ್ ಮಾಡುವುದಿಲ್ಲ ಆದರೂ ಜನರು ಬರುತ್ತಾರೆ. ಸಲ್ಮಾನ್ ಖಾನ್ ರೀತಿ ನಾನು ಪಾಲಿಸುತ್ತಿರುವೆ' ಎಂದಿದ್ದಾರೆ ಮಿಕಾ.
ಲವ್ ಸ್ಟೋರಿ:
'2001ರಲ್ಲಿ ನನಗೆ ಗರ್ಲ್ ಫ್ರೆಂಡ್ ಇದ್ದಳು. ಆಕೆ ಡೆಲ್ಲಿ ಹುಡುಗಿ ಆಗಿದ್ದಳು ಅವರ ಪೋಷಕರು ನಾನು ಬಾಲಿವುಡ್‌ನಲ್ಲಿ ಇರುವುದಕ್ಕೆ ಇಷ್ಟ ಪಡಲಿಲ್ಲ ಅದು ರಿಜೆಕ್ಟ್ ಆಯ್ತು. ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಗರ್ಲ್‌ಫ್ರೆಂಡ್‌ಗೆ ಹೇಳುತ್ತಿದ್ದೆ ಆಕೆ ಕೂಡ ಬಾಲಿವುಡ್ ಹಾಗೆ ಹೀಗೆ ಎಂದು ಬಿಟ್ಟಳು. ನನ್ನ 2 ಮಾಜಿ ಗರ್ಲ್‌ಫ್ರೆಂಡ್‌ಗೆ ಮದುವೆ ಆಗಿದೆ. ನನ್ನ ಕೆಲಸ ಮತ್ತು ನನ್ನ ಫೋಷಕರನ್ನು ದೂರು ಮಾಡುವಂತ ಹುಡುಗಿ ನನಗೆ ಬೇಡ' ಎಂದು ಮಿಕಾ ಸಿಂಗ್ ಮಾತನಾಡಿದ್ದಾರೆ.
ಟ್ವಿಟರ್‌ನಲ್ಲಿ ಸುದ್ದಿ ಮಾಡೋ ಬದಲು ಬಡ ಜನಕ್ಕೆ ಉಚಿತ ಆಹಾರ ನೀಡಿ: ಕಂಗನಾಗೆ ಸಿಂಗರ್ ಟಾಂಗ್
'ಈಗ ನನಗೆ 44 ವರ್ಷ. ಒಳ್ಳೆ ಹುಡುಗಿ ಸಿಕ್ಕರೆ ಮದುವೆ ಆಗುವೆ ಇಲ್ಲದಿದ್ದರೆ ಒಂಟಿಯಾಗಿರುತ್ತೀನಿ. ನನಗೆ ಸಿಗುವ ಹುಡುಗಿ ಬಗ್ಗೆ ಹೆಚ್ಚಿಗೆ ಕನಸಿಲ್ಲ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತವರಾಗಿರಬೇಕು. ನಾವು ಅರ್ಥ ಮಾಡಿಸುವ ಅಗತ್ಯವಿಲ್ಲ ಹಾಗೆ ಅರ್ಥ ಮಾಡಿಕೊಳ್ಳುವಂತ ಹುಡುಗಿ ಬೇಕು' ಎಂದು ಮಿಕಾ ಹೇಳಿದ್ದಾರೆ.
'ನಾನು ಸ್ವಯಂವರ-ಮಿಕಾ ದಿ ವೋತಿ ಕಾರ್ಯಕ್ರಮದಲ್ಲಿ ಪ್ರೀತಿ ಮದುವೆ ಎರಡು ನೋಡುತ್ತಿರುವೆ. ಪ್ರೀತಿ ಆದ ಮೇಲೆ ಮದುವೆ ಆಗೇ ಆಗುತ್ತೆ. ಕಾರ್ಯಕ್ರಮದಲ್ಲಿ ಹುಡುಗಿ ಆಯ್ಕೆ ಮಾಡಿಕೊಳ್ಳುವೆ ಆದರೆ ಶೋ ಕೊನೆಯಲ್ಲಿ ಮದುವೆ ಅಗಬಾರದು. ಕುಟುಂಬಸ್ಥರನ್ನು ಕೇಳಿಕೊಂಡು ಮದುವೆ ಪ್ಲ್ಯಾನ್ ಮಾಡುವೆ. ಈಗ ಜನರು ಮದುವೆ ಮತ್ತು ರೊಮ್ಯಾನ್ಸ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಅವರಿಗೆ ಜನರಿಂದ ಲೈಕ್ ಬರಬೇಕು ಕಾಮೆಂಟ್ ಬರಬೇಕು ಅವರ ಬಗ್ಗೆ ಮಾತನಾಡಬೇಕು ಎನ್ನುವ ಆಸೆ ಇರುತ್ತದೆ. ಎಷ್ಟೊಂದು ಜನ ಮದುವೆಗೆ ಬಂದಿರುವುದಿಲ್ಲ ಆದರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿಶ್ ಮಾಡುತ್ತಾರೆ. ನಾನು ದೃಢ ನಿರ್ಧಾರ ತೆಗೆದುಕೊಂಡಿರುವ. ನನ್ನ ಮದುವೆಯ ಪ್ರತಿಯೊಂದು ಕ್ಷಣವನ್ನು ಲೈವ್ ತೋರಿಸಲಾಗುತ್ತದೆ. ನನ್ನ ಜೀವನದ ಖುಷಿ ಕ್ಷಣವನ್ನು ಪ್ರತಿಯೊಬ್ಬರು ನೋಡಬೇಕು' ಎಂದು ಮಿತಾ ಹೇಳಿದ್ದಾರೆ.
