ಬಾಲಿವುಡ್‌ ನಟಿ ಕೃತಿ ಸೋನಂ ಲಾಕ್‌ಡೌನ್‌ನಲ್ಲಿ ವರ್ಕೌಟ್ ಮಾಡೋದು ಬಿಟ್ಟು ತಿಂದು ತಿಂದು ದಪ್ಪ ಆಗೋ ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನೆಂದು ಕೂಡ  ಹೇಳಿದ್ದಾರೆ...

ಬಾಲಿವುಡ್‌ ಜಿರಾಫೆ ಕೃತಿ ಸೋನಂ ಫಿಟ್ನೆಸ್‌ ಬಗ್ಗೆ ಅನೇಕ ನಟಿಯರು ನೋಡಿ ಹೊಟ್ಟೆ ಕಿಚ್ಚು ಪಟ್ಟಿರುವುದಂತೂ ಗ್ಯಾರಂಟಿ ಆದರೀಗ ಅದೇ ಕೃತಿ ದಪ್ಪ ಆಗುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ.ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗ ಇಷ್ಟು ದಿನಗಳ ಕಾಲ ನಟ-ನಟಿಯರು ಮನೆಯನ್ನೇ ಜಿಮ್‌ ಮಾಡಿಕೊಂಡಿದ್ದರು. ಡಯಟ್‌ ಮಾಡುತ್ತಾ ತಮ್ಮ ದಿನ ನಿತ್ಯದ ರೊಟಿನ್‌ ಬಗ್ಗೆ ಅಭಿಮಾನಿಗಳಿಗೆ ಅಪ್‌ಡೇಟ್‌ ಮಾಡುತ್ತಿದ್ದರು ಆದರೆ

ಬಾಲಿವುಡ್ ನಟಿ ಕೃತಿ ಸೆನಾನ್'ಗೆ ಲವ್ ಲೆಟರ್ ಬರೆಯುವ ಆಸೆಯಂತೆ!

ಕೃತಿ ಮಾತ್ರ ಸೈಲೆಂಟ್‌ ಆಗಿದ್ದರು....

ಕೃತಿ ವೇಟ್‌ ಗೇನ್:

ಇತ್ತೀಚಿಗೆ ಕೃತಿ 'ಮಿಮಿ' ಎಂಬ ಹೊಸ ಸಿನಿ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಕೃತಿ ಗರ್ಭಿಣಿಯಾಗಿ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

ಕೃತಿ ನೋಡಲು ತುಂಬಾನೇ ಸಣ್ಣವಿರುವ ಕಾರಣ ನಿರ್ದೇಶಕರ ಒತ್ತಾಯದಿಂದ ದಪ್ಪ ಆಗುತ್ತಿದ್ದಾರೆ. 'ಚಿತ್ರದ ಕೆಲವೊಂದು ಸನ್ನಿವೇಶಗಳ ಚಿತ್ರೀಕರಣ ಈಗಾಗಲೇ ನಡೆದಿದ್ದು ನನ್ನ ಗರ್ಭಿಣಿ ಪಾತ್ರವೊಂದು ಹಾಗೆ ಉಳಿದುಕೊಂಡಿತ್ತು. ನಿರ್ದೇಶಕ ಲಕ್ಷ್ಮಣ್ ಸರ್‌ ಈ ಸೀನ್‌ಗೆ ತೂಕ ಹೆಚ್ಚಿಸಿಕೊಳ್ಳಲೇ ಬೇಕೆಂದು ಡಿಮ್ಯಾಂಡ್‌ ಮಾಡಿದರು. ಗರ್ಭಿಣಿಯಾಗಿ ತುಂಬಾನೇ ಸಣ್ಣ ಕಾಣುವುದು ಸರಿ ಅಲ್ಲ' ಎಂದು ಕೃತಿ ಈ ಬಗ್ಗೆ ಮಾತನಾಡಿದ್ದಾರೆ.

ಊಟ ಅಂದ್ರೆ ಆಗಲ್ಲ:

ಚಿಕ್ಕ ವಯಸ್ಸಿನಲ್ಲಿ ಕೃತಿ ತುಂಬಾನೇ ಫುಡಿ ಆಗಿದ್ದರಂತೆ. ಮಾಡಲಿಂಗ್‌ ವೃತ್ತಿ ಅರಂಭಿಸಿದ ನಂತರ ಊಟ ಸೇವಿಸುವುದು ಕಡಿಮೆ ಎಂದು ಹೇಳುತ್ತಾರೆ. 'ನನಗೆ ಜೀರ್ಣ ಶಕ್ತಿ ಹೆಚ್ಚಿದೆ. ಈ ಕಾರಣಕ್ಕೆ ನಾನು ಏನೇ ತಿಂದರೂ ಬೇಗ ದಪ್ಪ ಆಗುವುದಿಲ್ಲ. ಈ ಕಾರಣ ಕ್ಯಾಲರಿ ಹೊಂದಿರುವ ಜಂಕ್‌ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವೆ. ವರ್ಕೌಟ್‌ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವೆ. ಯೋಗ ಸಹಿತ ಮಾಡುವುದಿಲ್ಲ. ಪೂರಿ ಚನ್ನ ಮಸಾಲ ನನ್ನ ತಿಂಡಿ, ಪ್ರತಿ ದಿನ ಮಧ್ಯಾಹ್ನದ ಊಟಕ್ಕೆ ಸ್ವೀಟ್‌ ಸೇವಿಸುವೆ. ಮೊದಲು ತುಂಬಾನೇ ಖುಷಿ ಆಗುತ್ತಿತ್ತು ಆದರೀಗ ಒತ್ತಾಯ ಮಾಡಿಕೊಂಡು ತಿನ್ನಬೇಕಾಗಿದೆ. ಫುಡ್‌ ಬಗ್ಗೆ ಇಂಟ್ರೆಸ್ಟ್‌ ಕಳೆದುಕೊಂಡಿರುವೆ. ಡೈಯಟ್‌ ಮಾಡುವಾಗ ಚೀಸ್‌ ತಿನ್ನಬೇಕು ಅನಿಸುತ್ತಿತ್ತು ಆದರೀಗ ಅದೂ ಆಗುತ್ತಿಲ್ಲ ' ಎಂದು ತಮ್ಮ ಫುಡ್‌ ಸ್ಟೈಲ್‌ ಬಗ್ಗೆ ಹೇಳಿಕೊಂಡಿದ್ದಾರೆ.

ಸೊಂಟ ಇದ್ದರೆ ಈಕೆ ಹಂಗಿರಬೇಕಪ್ಪ; ಏನ್ ತಿಂತಾಳೆ ಈ ಬೆಡಗಿ?

'ಮಿಮಿ'ಯ ವಿಭಿನ್ನ ಕಥೆ:

ಮಿಮಿ ಚಿತ್ರ ಒಂದು ಇನ್ಸ್‌ಪಿರೇಷನ್ ಕಥೆ. ಸೂಪರ್‌ ಡ್ಯಾನ್ಸರ್‌ ಅಗಿರುವ ಹೆಣ್ಣು ಅನಿವಾರ್ಯ ಕಾರಣಕ್ಕೆ ಒಂದು ದಂಪತಿಗಳಿಗೆ ಸರೋಗೆಟ್‌ ಮದರ್‌ ಆಗುತ್ತಾಳೆ. ಲೈವ್‌ ಚಾಟ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ ಕೃತಿ ಚಿತ್ರಕತೆ ಬಗ್ಗೆ ಹೇಳಿದ್ದಾರೆ. 'ನನ್ನ ವೃತ್ತಿಯಲ್ಲಿ ಮಿಮಿ ಒಂದೇ ಚಿತ್ರ ನಾನು ಸ್ಕ್ರೀಪ್ಟ್‌ ಕೇಳದೆ ಕೇವಲ ಐಡಿಯಾಗೆ ಮಾತ್ರ ಓಕೆ ಅಂದಿರುವುದು. ಸ್ಕ್ರೀಪ್ಟ್‌ ಕೇಳಿದ ನಂತರ ನಾನು ಮಾಡಿದ್ದು ಗುಡ್‌ ಡಿಸಿಶನ್‌ ಎಂದು ತಿಳಿಯಿತು' ಎಂದು ಮಾತನಾಡಿದ್ದಾರೆ.