ಬಿ-ಟೌನ್‌ ಪಾಪ್ಯೂಲರ್ ಡೈರೆಕ್ಟರ್ ಕರಣ್‌ ಜೋಹರ್‌ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.

ಬಾಲಿವುಡ್‌ ರೋಮ್ಯಾಟಿಂಕ್ ಬಟ್ ಸಿಂಗಲ್ ಮ್ಯಾನ್‌ ಕರಣ್‌ ಜೋಹಾರ್‌ ಮನೆಯಲ್ಲಿ ಕೊರೋನಾ ಕೇಸ್‌ ಪತ್ತೆಯಾಗಿದ್ದು ಬಿ-ಟೌನ್‌ ಮತ್ತೊಮ್ಮೆ ಆತಂಕದಲ್ಲಿದೆ. ಕೆಲ ದಿನಗಳ ಹಿಂದೆ ಬೋನಿ ಕಪೂರ್‌ ನಿವಾಸದಲ್ಲಿ ಕೆಲಸ ಮಾಡುವವರಿಗೂ ಪತ್ತೆಯಾಗಿತ್ತು.

ಶ್ರೀದೇವಿ ಮನೆಯಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಕೇಸ್; ಪುತ್ರಿಯರದ್ದೇ ಆತಂಕ!

ಟ್ಟಿಟರ್‌ನಲ್ಲಿ ಪತ್ರ:

ಮನೆಯಲ್ಲಿರುವ ಇಬ್ಬರು ಕೆಲಸದವರಿಗೆ ಕೊರೋನಾ ಪಾಸಿಟಿವ್‌ ಇರುವ ಬಗ್ಗೆ ತಪ್ಪಾಗಿ ಉಲ್ಲೇಖ ಆಗಬಾರದು ಎಂದು ಕರಣ್‌ ಪತ್ರ ಬರೆದು ವಿಚಾರ ತಿಳಿಸಿದ್ದಾರೆ. 'ನಮ್ಮ ಮನೆಯಲ್ಲಿದ್ದ ಇಬ್ಬರು ಕೆಲಸದವರಿಗೆ ಕೋವಿಡ್‌-19 ಪಾಸಿಟಿವ್ ಎಂದು ತಿಳಿದು ಬಂದಿದೆ. ಕೊರೋನಾ ಲಕ್ಷಣಗಳು ಕಂಡು ಬಂದ ಕೂಡಲೇ ನಮ್ಮ ಮನೆಯ ಒಂದು ಭಾಗದಲ್ಲಿ ಅವರನ್ನು ಕ್ವಾರಂಟೈನ್‌ ಮಾಡಿಸಿ ಆರೋಗ್ಯ ಚೆಕ್‌ ಮಾಡಿಸಲಾಗಿತ್ತು. ಪಾಸಿಟಿವ್‌ ವರದಿ ಪಡೆದ ನಂತರ ಆಸ್ಪತ್ರೆಗೆ ಸೇರಿಸಲಾಗಿದೆ' ಎಂದು ಬರೆದಿದ್ದಾರೆ.

Scroll to load tweet…

ಮನೆಯಲ್ಲಾ ಸ್ಯಾನಿಟೈಸ್‌:

ಮನೆಯಲ್ಲಿರುವ ನನ್ನ ಕುಟುಂಬ ಹಾಗೂ ಇನ್ನಿತರ ಕಾರ್ಮಿಕರಲ್ಲಿ ಯಾವ ಲಕ್ಷಣವೂ ಕಂಡು ಬಂದಿಲ್ಲ ಆದರೂ ನಾನು ಒಮ್ಮೆ ಟೆಸ್ಟ್‌ ಮಾಡಿಸಿದ್ದೇವೆ ನಮ್ಮೆಲ್ಲರ ವರದಿ ನೆಗೆಟಿವ್ ಬಂದಿದೆ. ಆರೋಗ್ಯದ ದೃಷ್ಟಿಯಲ್ಲಿ ನಾವೆಲ್ಲರೂ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರುತ್ತೇವೆ. ಅಧಿಕಾರಿಗಳು ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಕರಣ್‌ ವೆಚ್ಚದಲ್ಲಿ ಚಿಕಿತ್ಸೆ:

ಕರಣ್‌ ಜೋಹರ್ ಮನೆಯಲ್ಲಿ ಯಾರಿಗೆ ಕೊರೋನಾ ಲಕ್ಷಣಗಳು ಹಾಗೂ ಪಾಸಿಟಿವ್‌ ಎಂದು ತಿಳಿದು ಬಂದಲ್ಲಿ ಅವರ ಎಲ್ಲಾ ಚಿಕಿತ್ಸೆಗಳನ್ನೂ ನಾನು ನೋಡಿಕೊಳ್ಳುವೆ ಹಾಗೂ ಇನ್ನಿತ್ತರು ಆರೋಗ್ಯವಾಗಿರಲೂ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೋಗದಿಂದ ನಾವೆಲ್ಲರೂ ಬೇಗ ಮುಕ್ತರಾಗೋಣ. ಮನೆಯಲ್ಲಿ ಇರಿ ಸುರಕ್ಷಿತವಾಗಿರಿ ಎಂದು ಟ್ಟೀಟ್‌ ಮಾಡಿದ್ದಾರೆ.

ಕರಣ್‌ ಬರ್ತಡೇ:

25 ಮೇ ಕರಣ್‌ ಜೋಹರ್‌ ಬರ್ತಡೇ ಇದ್ದು ಮಕ್ಕಳ ಜತೆ ಸಂಭ್ರಮಿಸಿದ್ದಾರೆ. ಯಶ್‌ ಹಾಗೂ ರೂಹಿ ಕೇಕ್‌ ಕಟ್‌ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿತ್ತು. ಪ್ರತಿ ವರ್ಷವೂ ಕರಣ್‌ ಅದ್ಧೂರಿಯಾಗಿ ಬರ್ತಡೇ ಮಾಡಿಕೊಳ್ಳುತ್ತಾರೆ ಆದರೆ ಈ ಬಾರಿ ಲಾಕ್‌ಡೌನ್‌ ಇರುವ ಕಾರಣ ಹಾಗೂ ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳ ಇರುವುದರಿಂದ ಸರಳ ಆಚರಣೆ ಪಾಲಿಸಿದ್ದಾರೆ.

View post on Instagram

ವಿಡಿಯೋ ಸೆರೆ ಹಿಡಿಯುತ್ತಿರುವ ಕರಣ್‌ ನಾನು ಕೇಕ್‌ ತಿನ್ನುವೆ ಎಂದು ಹೇಳಿದಾಗ ಮಕ್ಕಳು 'ಬೇಡ ನೀವು ದಪ್ಪ ಅಗುತ್ತೀರಾ' ಎಂದು ಗೇಲಿ ಮಾಡಿದ್ದಾರೆ.