ನೆಟ್ಟಿಗರು ಸುಶಾಂತ್ ಸಾವಿಗೆ ಕರಣ್‌ ಜೋಹಾರ್ ಅವರೇ  ಕಾರಣವೆನ್ನುತ್ತಿರುವ  ಕಾರಣ ಕರಣ್ ಯಾರೊಟ್ಟಿಗೂ ಮಾತನಾಡದೆ ದಿನವಿಡೀ ಬೇಸರದಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು ಅದರೆ . ಇದೀಗ ನೀತು ಸಿಂಗ್ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. 

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತರ ಸ್ವಜನಪಕ್ಷಪಾತದ ವಿಚಾರದಲ್ಲಿ ನಟ ಕರಣ್‌ ಜೋಹಾರ್ ಹೆಸರು ಮೊದಲು ಕೇಳಿ ಬರುತ್ತಿತು. ಅಷ್ಟೇ ಅಲ್ಲದೆ ಸುಶಾಂತ್‌ಗೆ ಚಿತ್ರರಂಗದಲ್ಲಿ ಕರಣ್ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬ ಆರೋಪವೂ ಕೇಳಿ ಬಂದ ಕಾರಣ ನೆಟ್ಟಿಗರು ಕರಣ್‌ರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

ಸುಶಾಂತ್ ಸಾವಿನ ನಂತರ ಕರಣ್, ಆಲಿಯಾ, ಸೋನಂಗೆ ಎಂಥಾ ದುಸ್ಥಿತಿ ಬಂತು!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್‌ಗಳನ್ನು ವೀಕ್ಷಿಸಿದ ಕರಣ್ ಜೋಹಾರ್ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಸಿಕವಾಗಿ ಕುಗ್ಗಿದ್ದಾರಂತೆ. ಯಾರೊಂದಿಗೂ ಮಾತನಾಡದೆ ಸದಾ ಕಣ್ಣೀರಿಡುತ್ತಿದ್ದಾರೆ ಎಂದ ಕರಣ್‌ ಅವರ ಸಹಾಯಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕಾರಣಕ್ಕೆ ಯಾರನ್ನು ಮನೆ ಬಳಿ ಬಿಡದೆ ಟೈಟ್‌ ಸೆಕ್ಯುರಿಟಿ ನೀಡಲಾಗಿದೆ.

ಕರಣ್‌ ಬಗ್ಗೆ ಪೋಸ್ಟ್‌:

ಜುಲೈ 8ರಂದು ಬಾಲಿವುಡ್ ಹಿರಿಯ ನಟಿ ನೀತೂ ಕಪೂರ್ ಜನ್ಮದಿನವಿದ್ದ ಕಾರಣ ರಣ್ಬೀರ್ ಕಪೂರ್ ತಾಯಿಗೆ ತಮ್ಮ ನಿವಾಸದಲ್ಲಿ ಸರ್ಪ್ರೈಸ್‌ ಬರ್ತಡೇ ಪಾರ್ಟಿ ಆಯೋಜಿಸಿದ್ದರು. ಈ ಸಮಯಲ್ಲಿ ಸೆರೆ ಹಿಡಿದ ಕೆಲವೊಂದು ಫೋಟೋಗಳನ್ನು ಕರಣ್‌ ಮತ್ತೆ ಪಾರ್ಟಿಯಲ್ಲಿ ಪಾಲ್ಗೊಂಡಿರುವ ಕ್ಷಣಗಳನ್ನು ಸ್ಟಾರ್ ನಟರು ಶೇರ್ ಮಾಡಿಕೊಂಡಿದ್ದಾರೆ. ಈ ಪೋಟೋದಲ್ಲಿ ಕರಣ್ ನಗು ಮುಖ ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

View post on Instagram

'ಸರ್ ನೀವು ಅಳುತ್ತಿದ್ದೀರಾ ಅಲ್ವಾ?' ಮತ್ತು 'ಮನೆಯಿಂದ ಹೊರಗೂ ಬರುವುದಿಲ್ಲ ಎಂದು ಸೆಕ್ಯುರಿಟಿ ಪಡೆದು ಈಗ ಪಾರ್ಟಿಯಲ್ಲಿ ಇದ್ದೀರಾ' ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕೆಲ ಟ್ರೋಲ್ ಪೇಜ್‌ಗಳು ಕರಣ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಆದರೆ ಪಾರ್ಟಿ ಅಟೆಂಡ್ ಮಾಡುವ ಸ್ಥಿತಿಯಲ್ಲಿ ಇದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ.