Asianet Suvarna News

ಒಂದು ದಿನದ ಚಿತ್ರೀಕರಣಕ್ಕೆ 50 ಲಕ್ಷ ಪಡೆಯುತ್ತಿರುವ ಕಪಿಲ್ ಶರ್ಮಾ?

ದಿನೇ ದಿನೇ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರುವ ಕಪಿಲ್ ಶರ್ಮಾ. ಒಂದು ದಿನದ ಸೆಟ್‌ ಖರ್ಚಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ನಟ. 
 

Bollywood Kapil Sharma Hikes Fee ahead of show return vcs
Author
Bangalore, First Published Jul 1, 2021, 11:57 AM IST
  • Facebook
  • Twitter
  • Whatsapp

ಹಿಂದಿ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಬಾಲಿವುಡ್ ಸ್ಟಾರ್ ನಟರಿಂದ ಹೊಸಬರವರೆಗೆ ಪ್ರತಿಯೊಬ್ಬರನ್ನೂ ಕರೆಸಿ ಮಾತನಾಡಿಸಿ, ನಕ್ಕು ನಗಿಸುವ ಕಪಿಲ್ ಸಂಭಾವನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕಾಮಿಡಿಯನ್‌ ಕಪಿಲ್‌ ಶರ್ಮಾ ಹಾಗೂ ಗಿನ್ನಿ ಚಾತ್ರತ್‌ ಇಂಟರೆಸ್ಟಿಂಗ್‌ ಲವ್‌ ಸ್ಟೋರಿ! 

ಹೌದು! ಕಪಿಲ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಎಪಿಸೋಡ್‌ ಹೆಚ್ಚಾಗುತ್ತಿವೆ. ಹೀಗಿರುವಾಗ ಅತ್ತ ಸಂಭಾವನೆಯೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಂಭಾವನೆ ವಿಚಾರಕ್ಕೆ ಜಗಳವಾದ ಕಾರಣ ಕಪಿಲ್ ತಮ್ಮದೇ 'ದಿ ಕಪಿಲ್ ಶರ್ಮಾ ಶೋ' ಹೆಸರಿನಲ್ಲಿ ಮತ್ತೊಂದು ಶೋ ಅರಂಭಿಸಿದ್ದರು. ಆಗ ಒಂದು ಎಪಿಸೋಡ್‌ಗೆ 30 ಲಕ್ಷ ಸಂಭಾವನೆ ಪಡೆಯುತ್ತಿದ್ದ ಕಪಿಲ್, ಸದ್ಯ ಈ ಶೋನಲ್ಲಿ 50 ಲಕ್ಷ ಪಡೆಯುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ನಡೆದ ಒಂದು ಎಪಿಸೋಡ್ ಚಿತ್ರೀಕರಣಕ್ಕೆ ಕಪಿಲ್ 60 ಲಕ್ಷ ಪಡೆದುಕೊಂಡಿದ್ದಾರೆ. ಹೀಗಿರುವಾಗ ಆ ಕಾರ್ಯಕ್ರಮಕ್ಕೆ ಹಾಕುವ ಸೆಟ್ ಹಾಗೂ ಒಂದು ದಿನದ ಖರ್ಚು ಸೇರಿಸಿದರೂ ಇಷ್ಟು ಖರ್ಚಾಗುವುದಿಲ್ಲ, ಕಪಿಲ್ ಯಾಕೆ ಇಷ್ಟೊಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಹೊಸ ಸಂಚಿಕೆಗೆ ಕಪಿಲ್ ಶರ್ಮಾ ಮಾತ್ರವಲ್ಲ ಸಲ್ಮಾನ್ ಖಾನ್ ಮತ್ತು ದೀಪಕ್ ಧಾರ್ ಕೂಡ ಬಂಡವಾಳ ಹಾಕಿದ್ದಾರೆ.

Follow Us:
Download App:
  • android
  • ios