ನಾನು ಸುಂದರಿ ಅಲ್ಲ ಅನ್ನೋದು ಸತ್ಯ ಅದರೆ ಈ ಮಾತನ್ನು ರಕ್ತದಲ್ಲಿ ಬರೆದು ಕೊಡ್ತೀನಿ: ಜಾಹ್ನವಿ ಕಪೂರ್
ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್. ನಾನು ಸುರಸುಂದರಿ ಅಲ್ಲ ಆದರೆ....
ಬಹುಭಾಷಾ ನಟಿ ಅತಿಲೋಕ ಸುಂದರಿ ಶ್ರೀದೇವಿ ಲೆಗೆಸಿಯನ್ನು ಹಿಂದಿ ಚಿತ್ರರಂಗದಲ್ಲಿ ಕಾಪಾಡಿಕೊಂಡು ಉಳಿಸಿಕೊಂಡು ಮುಂದೆ ನಡೆಯುತ್ತಿರುವ ಪುತ್ರಿ ಜಾಹ್ನವಿ ಕಪೂರ್ ಟ್ರೋಲಿಗರಿಗೆ ಖಡತ್ ಉತ್ತರ ಕೊಟ್ಟಿದ್ದಾರೆ. ಜಿಮ್‌ನಿಂದ ಹೊರ ಬಂದರೂ ಟ್ರೋಲ್, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಟ್ರೋಲ್...ಹೀಗೆ ಸಣ್ಣ ಪುಟ್ಟ ವಿಚಾರಕ್ಕೂ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುವುದಕ್ಕೆ ನಾನು ಸತ್ಯವ್ನು ರಕ್ತದಲ್ಲಿ ಬರೆದುಕೊಡುತ್ತೀನಿ ಎಂದು ಹೇಳಿದ್ದಾರೆ.
ಜಾಹ್ನವಿ ಮಾತು:
'ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಾನು ಎಷ್ಟು ಕಷ್ಟ ಪಡುತ್ತೀನಿ ಎಂದು ನನ್ನ ರಕ್ತದಿಂದ ಬೇಕಿದ್ದರೆ ಬರೆದು ಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನ ಬೇಡ ಯಾರು ಅನುಮಾನ ಪಡುವ ಅಗತ್ಯವಿಲ್ಲ. ನನಗೆ ಒಂದೇ ವಿಷಯವನ್ನು ಪದೇ ಪದೇ ಹೇಳುವುದು ಬೇಸರ ತರುತ್ತದೆ . ಏನೋ ವಿಚಾರ ಗೊತ್ತಿದೆ ಅಂತ ಅದನ್ನು ಹೈಪ್ ಕೊಟ್ಟು ಗೊತ್ತು ಮಾಡುವುದು ಇಷ್ಟವಿಲ್ಲ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ಈಗಷ್ಟೆ ನಾನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದೇನೆ ಎನ್ನುವುದು ಗೊತ್ತಿದೆ ಅಂದ್ಮೇಲೆ ಯಾಕೆ ಸ್ಟಾರ್ ಕಿಡ್ ಅಂತ ಹೇಳಿ ಅವಕಾಶ ಕಿತ್ತುಕೊಳ್ಳುತ್ತಿರುವುದು' ಎಂದು ಜಾಹ್ನವಿ ಮಾತನಾಡಿದ್ದಾರೆ.
'ನಾನು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರವೆ ಅನಿಸುತ್ತದೆ. ನಮ್ಮ ತಾಯಿಗೆ ಇರುವ ಸ್ಟಾರ್ ಡಮ್ ನೋಡಿ ನಾನು ಹೇಗೆ ಸುಮ್ಮನಿರಲು ಸಾಧ್ಯ? ನಾನು ಸಾಧನೆ ಮಾಡಬೇಕು ಅನ್ನೋ ಯೋಚನೆ ಪದೇ ಪದೇ ಬರುತ್ತದೆ. ಅಮ್ಮ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಾಗ ಅಥವಾ ವೃತ್ತಿ ಜೀವನದಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗ ನಾನು ಇರಲಿಲ್ಲ. ಆಕೆ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ ಮೇಲೆ ನಾನು ಹುಟ್ಟಿದ್ದು. ಅಮ್ಮ ಸಿನಿಮಾ ಮಾಡುವಾಗ, ಪರ್ಫಾರ್ಮೆನ್ಸ್ ಕೊಡುವಾಗ ಅಥವಾ ಸೆಟ್‌ನಲ್ಲಿ ಇದ್ದಾಗ ಮಾತನಾಡುತ್ತಿದ್ದ ವಿಧಾನ, ತಂಡಕ್ಕೆ ನೀಡುತ್ತಿದ್ದ ಸಹಕಾರದ ಬಗ್ಗೆ ಬಹಳ ಜನರು ಹೇಳಿದನ್ನು ನಾನು ಕೇಳಿ ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿರುವೆ' ಎಂದು ಹೇಳಿದ್ದಾರೆ ಜಾಹ್ನವಿ.
ಜಾನ್ವಿ ಕಪೂರ್ ಔಟ್‌ಡೋರ್ ಶೂಟಿಂಗ್ ಬಗ್ಗೆ ನಟಿಯ ಬಾಯ್‌ಫ್ರೆಂಡ್ ಅಸಮಾಧಾನ?
ದಿನಕ್ಕೆ ಕನಿಷ್ಠ 4 ಸ್ಕೂಪ್ ಐಸ್‌ಕ್ರೀಂ:
ಇತ್ತೀಚೆಗೆ ಆಸ್ಕ್ ಮಿ ಎನಿಥಿಂಗ್ ಮಾಡಿದ ನಟಿಗೆ ಅವರ ಬ್ಯೂಟಿ ಸೀಕ್ರೆಟ್ ಏನು ಅಂತ ಕೇಳಿದ್ದಾರೆ ಅಭಿಮಾನಿ.ತಟ್ಟನೆ ಐಸ್ಕ್ರೀಂ ತಿಂತಿರೋ ಫೋಟೋ ಅಪ್ ಮಾಡೋದಾ ಧಡಾಕ್ ಚೆಲುವೆ.ಪ್ರತಿ ದಿನ ಕನಿಷ್ಠ 4 ಸ್ಕೂಪ್ ಐಸ್ಕ್ರೀಂ ತಿನ್ನುತ್ತಾರಂತೆ ಜಾಹ್ನವಿ.ಪಾಪ ಡಯೆಟ್ ಅಂತ ಬಾಯಿ ಕಟ್ಟಿರೋರು ಇದನ್ನ ನೋಡಿದ್ರೆ ಫುಲ್ ಖುಷ್ ಆಗಿ ಇದನ್ನೇ ಫಾಲೋ ಮಾಡ್ಬೋದೇನೋ.
ವಿಟಮಿನ್ ಸಿ ಎಂದು ಮತ್ತಷ್ಟು ಬೋಲ್ಡ್ ಆದ ಜಾನ್ವಿ ಕಪೂರ್; ಓ ಮೈ ಗಾಡ್...ಎಂದ ನೆಟ್ಟಿಗರು
ತಂದೆ ಬೋನಿ ಕಪೂರ್‌ಗೆ ಹೇಳಿದ ಸುಳ್ಳು:
ಒಮ್ಮೆ ತನ್ನ ತಂದೆ ಬೋನಿ ಕಪೂರ್‌ಗೆ ಸುಳ್ಳು ಹೇಳಿದ್ದಾಗಿ ಸ್ವತಃ ಜಾಹ್ನವಿ ಹೇಳಿದ್ದಾರೆ. ಬೆಬೊ ಅವರ ರೇಡಿಯೊ ಟಾಕ್ ಶೋ, ವಾಟ್ ವುಮೆನ್ ವಾಂಟ್‌ನಲ್ಲಿ ನಟಿ ಕಾಣಿಸಿಕೊಂಡಾಗ ಜಾನ್ವಿ ಕಪೂರ್ ಅವರ ಕೆಲವು ರಹಸ್ಯಗಳು ಬಹಿರಂಗಗೊಂಡವು. ಬಾಲ್ಯ ಎಂದರೆ ರೆಬಲ್. ಅದರಲ್ಲಿ ರೂಲ್ಸ್ ಬ್ರೇಕ್ ಮಾಡುವುದು ಮೊದಲ ಸ್ಥಾನದಲ್ಲಿರುತ್ತದೆ ಎಂದು ಅವರು ಹೇಳಿದರು. 'ನಿಮ್ಮ ಬಾಲ್ಯ ಮತ್ತು ಯೌವನದಲ್ಲಿ ಸ್ವಲ್ಪ ರೆಬೆಲ್ ಆಗಿರಬೇಕು ಮತ್ತು ನೀವು ಮಾಡಬಾರದ ಕೆಲಸಗಳನ್ನು ಮಾಡಬೇಕು' ಎಂದು ಹೇಳಿದ್ದರು ಶ್ರೀದೇವಿ ಪುತ್ರಿ. 'ಮೊದಲ ಬಾರಿಗೆ, ನಾನು ಅವರಿಗೆ ಸುಳ್ಳು ಹೇಳಿದ್ದೇನೆ. ಸಿನಿಮಾಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದೆ. ಆದರೆ ನಾನು ಫ್ಲೈಟ್ ತೆಗೆದುಕೊಂಡು LA ಯಿಂದ ವೆಗಾಸ್‌ಗೆ ಹೋದೆ. ಸುತ್ತಲೂ ತಿರುಗಿ ಬೆಳಗ್ಗೆ ವಿಮಾನದಲ್ಲಿ ಹಿಂತಿರುಗಿದೆ. ಅವರಿಗೆ ತಿಳಿದಿರಲಿಲ್ಲ' ಎಒಂದು ತಂದೆಗೆ ಹೇಳಿದ ಸುಳ್ಳಿನ ಬಗ್ಗೆ ಬಾಯಿಬಿಟ್ಟರು ಜಾಹ್ನವಿ ಕಪೂರ್