ಎಂಥವರನ್ನೂ ಭಾವುಕರನ್ನಾಗಿಸುತ್ತದೆ ಇರ್ಫಾನ್ ಖಾನ್ ಪತ್ನಿ ಹೃದಯಸ್ಪರ್ಶಿ ಪತ್ರ!
ಮನಕಲುಕುವಂತಿದೆ ನಟ ಇರ್ಫಾನ್ ಖಾನ್ ಪತ್ನಿ ಸುತಾಪಾ ಬರೆದ ಭಾವುಕ ಪತ್ರ. ಓದುವಾಗ ಕಣ್ಣೀರು ತಪ್ಪಿಸಲು ಸಾಧ್ಯವೇ?
ಅದ್ಭುತ ಅಂಗ ಸೌಷ್ಟವ ಇಲ್ಲದಿದ್ದರೂ, ಕೇವಲ ಅಭಿನಯದಿಂದಲೇ ಹೀರೋ ಆಗಬಹುದು ಎಂದು ತೋರಿಸಿಕೊಟ್ಟ ಬಾಲಿವುಡ್ ನಟ ಇರ್ಫಾನ್ ಖಾನ್ ತಮ್ಮ ಅದ್ಭುತ ನಟನೆಯಿಂದ ಸದಾ ನೆನಪಲ್ಲಿ ಉಳಿಯುವುದರಲ್ಲಿ ಅನುಮಾನವೇ ಇಲ್ಲ . ಪತ್ರಿಯೊಂದೂ ಸಿನಿಮಾದಲ್ಲೂ ತಮ್ಮದೇ ಶೈಲಿಯಲ್ಲಿ ಅಭಿನಯಿಸುತ್ತ ಸಿನಿ ಪ್ರೇಮಿಗಳ ಅಚ್ಚು- ಮೆಚ್ಚಿನ ನಟರಾಗಿ ಗುರುತಿಸಿಕೊಂಡವರು ಇರ್ಫಾನ್. ಕೊರೊನಾ ಲಾಕ್‌ಡೌನ್‌ನಿಂದ ಅನೇಕರಿಗೆ ಇರ್ಫಾನ್ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಆದರೆ ನೆಚ್ಚಿನ ನಟ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ವಿಧವಿಧವಾಗಿ, ವಿಶೇಷವಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೆಳೆಯನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಇರ್ಫಾನ್!
ಇರ್ಫಾನ್ ಖಾನ್ ಪತ್ನಿ ಸುತಾಪಾ ಬರೆದ ಭಾವುಕ ಪತ್ರ ಎಂಥವರಿಗಾದರೂ ಕಣ್ಣೀರು ತರಿಸದೇ ಇರದು. ಅದರಲ್ಲೂ ಇರ್ಫಾನ್ ಖಾನ್ ಮಕ್ಕಳು ಬಾಬಿಲ್ ಹಾಗೂ ಅಯಾನ್ ತಂದೆ ಕಸಿಸಿಕೊಟ್ಟ ಪಾಠವನ್ನು ಒಂದೇ ವಾಕ್ಯದಲ್ಲಿ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಪತ್ರದಲ್ಲಿ ಇರ್ಫಾನ್ ಖಾನ್‌ಗೆ ಅಪರೂಪದ ಕ್ಯಾನ್ಸರ್ ಪತ್ತೆಯಾದ ಪ್ರಾರಂಭದಿಂದಲೂ ಅವರ ನೋವು, ನಲಿವು ಹಾಗೂ ಇರ್ಫಾನ್ ಖಾನ್ ಜೊತೆ ಜೀವನ ಪಯಣದಲ್ಲಿ ಕಲಿತ ಪಾಠಗಳನ್ನು ಉಲ್ಲೇಖಿಸಿದ್ದಾರೆ. ಈ ಪಯಣದ ಕಷ್ಟ, ಸುಖಃದಲ್ಲಿ ಕೈ ಹಿಡಿದು ನಡೆಸಿವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
'ಇಡೀ ವಿಶ್ವವೇ ವೈಯಕ್ತಿಕ ಜೀವನದಲ್ಲೊಬ್ಬ ವ್ಯಕ್ತಿಯನ್ನು ಕಳೆದುಕೊಂಡ ದುಃಖದಲ್ಲಿರುವಾಗ ನಾನು ಹೇಗೆ ಅದನ್ನು ತನ್ನ ಕುಟುಂಬವರ ಲಾಸ್ ಎಂದು ಹೇಳಲಿ? ಇದನ್ನು ನಾನು ನಷ್ಟವೆಂದು ಹೇಳುವುದಿಲ್ಲ. ಹೌದು ಇದು ನಷ್ಟವಲ್ಲ ಲಾಭ. ಅವರು ಹೇಳಿಕೊಟ್ಟ ಎಲ್ಲಾ ವಿಚಾರಗಳ ಲಾಭ. ಅದನ್ನು ನಾವೆಲ್ಲರೂ ಈಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ,' ಎಂದು ಪ್ರಾರಂಭಿಸಿರುವ ಪತ್ರದಲ್ಲಿ ಜೀವನದಲ್ಲಿ ಇರ್ಫಾನ್ ಮಡದಿ, ಮಕ್ಕಳಿಗೆ ಕಲಿಸಿದ ಜೀವನ ಪಾಠದ ಬಗ್ಗೆ ಬರೆದಿದ್ದಾರೆ.
ಪದಗಳಲ್ಲಿ ಇರ್ಫಾನ್ ಹಾಗೂ ಅವರ ಜೀವನ ಶೈಲಿಯನ್ನು ವರ್ಣಿಸುವುದು ಕಷ್ಟ. ಆದರೆ ಇರ್ಫಾನ್ ಶೈಲಿಯಲ್ಲಿ ಹೇಳಬೇಕೆಂದರೆ 'It's magical'.ಅವರ ನೀಡುತ್ತಿದ್ದ ಪ್ರೀತಿ ಎಂದಿಗೂ ಒಂದೇ ಆಯಾಮದಲ್ಲಿ ಇರುತ್ತಿರಲಿಲ್ಲ. ಇರ್ಫಾನ್ ನೀಡುತ್ತಿದ್ದ ಅಗಾದ ಪ್ರೀತಿ ಪದಗಳ ವರ್ಣನೆಯಲ್ಲಿ ನಿಲಕದ್ದು. ಇದೊಂದು ಅದ್ಭುತ, ಸುಂದರ, ಆಗಾಧ, ನೋವಿನ ಮತ್ತು ರೋಮಾಂಚನಕಾರಿ ಪ್ರಯಣ. ಅದನ್ನು ಪದಗಳಲ್ಲಿ ಕಟ್ಟಿ ಕೊಡುವುದು ಕಷ್ಟ ಎಂದಿದ್ದಾರೆ.
ಇರ್ಫಾನ್ ಖಾನ್ - ಅದ್ಭುತ ನಟನ ಮರೆಯಲಾಗದ ಸಿನಿಮಾಗಳು
ಇರ್ಫಾನ್‌ಗೆ ಚಿಕಿತ್ಸೆಯಲ್ಲಿ ಸಹಾಯ ಮಾಡಿದ ವೈದ್ಯರನ್ನು ದೇವರು- ಆಪ್ತರೆಂದು ಕರೆದು ಧನ್ಯವಾದ ತಿಳಿಸಿದ್ದಾರೆ. ನಮ್ಮ 35 ವರ್ಷಗಳ ಒಡನಾಟ ಬೇರ್ಪಡಿಸಲು ಸಾಧ್ಯವಾಗದು. ಇದು ಮದುವೆಯಲ್ಲಿ ಬೆಸೆದ ಬಾಂಧವ್ಯ. ಇನ್ನು ಮುಂದೆ ನಮ್ಮ ಜೀವನದ ದೋಣಿಯನ್ನು ನಮ್ಮ ಮಕ್ಕಳು ಹುಟ್ಟು ಹಾಕಿ ನಡೆಸುತ್ತಾರೆ. ಅವರು ಇರ್ಫಾನ್ ಹೇಳಿಕೊಟ್ಟ ಜೀವನದ ಪಾಠವನ್ನು ಅನುಸರಿಸುತ್ತಾರೆ ಎಂದು ಭಾವಿಸುವೆ. ತಂದೆ ಹೇಳಿಕೊಟ್ಟ ಜೀವನದ ಪಾಠವನ್ನು ಒಂದೇ ವಾಕ್ಯದಲ್ಲಿ ಹೇಳಿ ಎಂದಾಗ ಅವರ ಕೊಟ್ಟ ಉತ್ತರ ಎಂದಿಗೂ ಊಹಿಸಿರಲಿಲ್ಲ.
ಬಾಬಿಲ್ ಹೇಳುತ್ತಾನೆ 'learn to surrender to the dance of uncertainty and trust your faith in the universe'ಎಂದು. ಅಯಾನ್ ಹೇಳುತ್ತಾರೆ 'Learn to control your mind and to let it control you' ಎಂದು.
ಇರ್ಫಾನ್ ಮಣ್ಣಾದ ಜಾಗದಲ್ಲಿ ಅವರ ನೆಚ್ಚಿನ ಮರ 'ರಾತ್ ಕಿ ರಾಣಿ' ಸಸಿ ನೆಡುವಾಗ ಕಣ್ಣೀರು ತಡೆಯಲು ಆಗಿಲಿಲ್ಲ. ಕಷ್ಟವಾಯಿತು. ಆದರೆ ಅ ಗಿಡ ಬೆಳೆದು ಅದರಿಂದ ಬರುವ ಪರಿಮಳ ಸುತ್ತಲೂ ಹರಡಿ ಅಭಿಮಾನಿಗಳ ಕುಟುಂಬಕ್ಕೆ ತಾಕುತ್ತದೆ, ಎಂದು ಪತ್ರವನ್ನು ಅಂತ್ಯ ಮಾಡಿದ್ದಾರೆ. ಈ ಪತ್ರವನ್ನು ಸುತಾಪಾ ಇರ್ಫಾನ್ ಟ್ಟಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇರ್ಫಾನ್ ಖಾನ್ ಒಬ್ಬ ನೈಜ ನಟರಾಗಿದ್ದರು. ವಿಶೇಷ ನಟರೆನಿಸಿಕೊಂಡಿದ್ದರು. ಅವರ ಕಲಾವಂತಿಕೆಯನ್ನು ಅನುಭವಿಸಲು ಅಮಿತಾಭ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆಯಂಥವರು ಜೊತೆ ನಟಿಸಿದ ಪೀಕು ಚಿತ್ರವೊಂದು ಸಾಕು. ಒಂದು ಕಡೆ ಮಲಬದ್ದತೆಯಿಂದ ಕಂಗೆಟ್ಟರುವ ಒಬ್ಬ ಮುದುಕ. ಮತ್ತೊಂದು ಕಡೆ ಮೂಗಿನ ತುದಿ ಕೋಪ ಇರೋ ಆ ವೃದ್ಧನ ಮಗಳು. ಈ ಇಬ್ಬರ ನಡುವೆ ಸಿಕ್ಕಿ ಹಾಕಿಕೊಳ್ಳುವ ನಾಯಕ! ಬೇರೆ ಯಾರಾದ್ರೂ ಆಗಿದ್ದರೆ ಅಮಿತಾಭ್ -ದೀಪಿಕಾ ಪಡುಕೋಣೆಯಂತಹ ಹೊಳೆಯುವ ಸ್ಚಾರ್ ನಟ-ನಟಿಯರ ಮುಂದೆ ಕಳೆದು ಹೋಗಿರುತ್ತಿದ್ದರು. ಆದ್ರೆ ಇರ್ಫಾನ್ ಖಾನ್ ಎಂಬ ನಟ ನಿಜಕ್ಕೂ ಅಸಮಾನ್ಯ ಕಲಾವಿದ ಎಂಬುವುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತೆ. ಕಣ್ಣಲ್ಲೇ ತನ್ನೆಲ್ಲಾ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಕಲೆ ಈ ಇರ್ಫಾನ್‌ಗೆ ಮಾತ್ರ ಒಲಿದಿತ್ತು. ಅದಕ್ಕೆ ಮತ್ತೊಂದು ಉದಾಹಣೆ ಟಿಫಿನ್ ಬಾಕ್ಸ್. ಹೇಳುತ್ತಾ ಹೋದರೆ, ಇರ್ಫಾನ್ ನಟಿಸಿರುವ ಪ್ರತಿಯೊಂದೂ ಚಿತ್ರಗಳು ಅವರ ಅಮೋಘ ಅಭಿನಯದಿಂದಲೇ ಕ್ಲಿಕ್ ಆಗಿದ್ದವು.