34 ವರ್ಷದ ಮಾಜಿ ಮಿಸ್‌ ಇಂಡಿಯಾ ಇಶಾ ಗುಪ್ತಾ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಮನೆಯಲ್ಲಿ ಕಾಲ ಕಳೆಯುತ್ತಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏನೇ ಮಾಡಿದರೂ ಡಿಫರೆಂಟ್‌ ಎಂದು ಹೇಳುವ ಇಶಾ ಅವರ  ಪ್ರತಿಯೊಂದು ಫೋಟೋ ವಿಭಿನ್ನವಾಗಿರುತ್ತದೆ.

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಇಶಾ ಗುಪ್ತಾ ಕ್ಲೋಸಪ್‌ ಫೋಟೋ ಅಪ್ಲೋಡ್‌ ಮಾಡಿದ್ದು ಅದಕ್ಕೆ ಬಂದ ನೆಟಿಗನ್ನೊಬ್ಬನ ಕಾಮೆಂಟ್‌ಗೆ ಕೆಂಡಾಮಂಡಲವಾಗಿದ್ದಾರೆ. ಹೌದು! ಇಶಾ ಕ್ಲೋಸಪ್‌ ಲುಕ್‌ನಲ್ಲಿ ಮುಖದ ಫೀಚರ್ಸ್‌ಗಳು ಸ್ಪಷ್ಟವಾಗಿ ಕಾಣಿಸುತ್ತದೆ, ಅದರಲ್ಲಿ ಯಾವ ಅಶ್ಲೀಲತೆಯೂ ಇರಲಿಲ್ಲ ಆದರೂ ಆ ಒಂದು ಕಾಮೆಂಟ್ ಬಗ್ಗೆ  ಇಶಾ ಫುಲ್ ಗರಂ ಆಗಿದ್ದಾರೆ . 

ಚಿತ್ರಗಳು: ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ, ಇದು ಪಡ್ಡೆ ಹುಡುಗರ ನಿದ್ದೆಗೆಡಿಸೋ ಅವತಾರ

ನೆಟ್ಟಿಗ ಮಾಡಿದ ಕಾಮೆಂಟ್‌ ಇನ್‌ಸ್ಟಾಗ್ರಾಂ ಪೋಸ್ಟಿಂದ  ಮಾಯವಾಗಿದೆ ಈ ವಿಚಾರ ವೈರಲ್‌ ಆಗುತ್ತಿದ್ದಂತೆ ಆತನೇ ಕಾಮೆಂಟ್‌ ಡಿಲೀಟ್‌ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಕಾಮೆಂಟ್‌ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಕ್ಲೋಸಪ್‌ ಫೋಟೋಗೆ ಇಶಾ 'Looking at you looking at me' ಎಂದು ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Looking at you looking at me

A post shared by Esha Gupta🌎 (@egupta) on Apr 22, 2020 at 11:52pm PDT

ಟ್ರೋಲ್‌ ಮಾಡುವವರಿಗೆ 'I don't care' ಎಂದು ಇಶಾ ಇನ್ನೂ ಹೆಚ್ಚಾಗಿ ಬಿಕಿನಿ ಹಾಗೂ ಬೋಲ್ಡ್‌ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.