ಮನೆಯಲ್ಲಿಯೇ ಕುಳಿತು ಕಂಗೆಟ್ಟಿದ್ದ ವಾಣಿಜ್ಯ ನಗರಿ ಜನರಿಗೆ ಮುಂಬೈ ಮಳೆ ತಂಪೆರೆದಿತ್ತು. ಮನಸ್ಸಿಗೆ ಹಿತ ಎಂದೆನಿಸುತ್ತಿತ್ತು. ಅದನ್ನೇ ಎಂಜಾಯ್ ಮಾಡುತ್ತಿದ್ದ ವಾಣಿಜ್ಯ ನಗರಿ ಮಂದಿಗೆ ಸುಶಾಂತ್ ಸಿಂಗ್ ಸಾವಿನ ಸುದ್ದಿ ಆಘಾತ ಉಂಟು ಮಾಡಿದೆ.  ಜೂನ್‌ 14 ಇಡೀ ಚಿತ್ರರಂಗಕ್ಕೆ ಕರಾಳ ದಿನವಾಗಿತ್ತು. ಆದರೆ ಈ ಘಟನೆಯಿಂದ ಸಾರ್ವಜನಿಕರಿಗೆ ಬಣ್ಣದ ಲೋಕದಲ್ಲಿ ಉಳಿಯುವುದಕ್ಕೆ ನಟ-ನಟಿಯರು ಧರಿಸುವ ಮುಖವಾಡದ ಬಗ್ಗೆ ತಿಳಿಸಿಕೊಡುತ್ತಿದೆ.

ಸುಶಾಂತ್‌ರನ್ನು ಕಳೆದುಕೊಂಡ ಅಭಿಮಾನಿಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಪರ ಧ್ವನಿ ಎತ್ತುತ್ತಿದ್ದಾರೆ. ಕ್ರಿಕೆಟರ್ ಧೋನಿ ಸಿನಿಮಾ ಹಿಟ್‌ ಕಂಡ ನಂತರ ಸುಶಾಂತ್ ವೃತ್ತಿ ಜೀವನವೇ ಬದಲಾಗಿತ್ತು. ಕೈತುಂಬಾ ಸಿನಿಮಾ ಆಫರ್‌ಗಳಿದ್ದು, ಹಲವು ವೆಚ್‌ ಸೀರಿಸ್‌ಗಳಲ್ಲಿಯೂ ಅಭಿನಯಿಸುವುದಕ್ಕೆ ಒಪ್ಪಿಕೊಂಡಿದ್ದರು. 

ಬಿ-ಟೌನ್‌ ಮಾಫಿಯಾ?
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗ ಯಾವುದೇ ರೀತಿಯ ಡೆತ್ ನೋಟ್‌ ಅಥವಾ ಯಾರಿಗೂ ಇದರ ಬಗ್ಗೆ ಮಾಹಿತಿ ನೀಡಿಲ್ಲವಾದರೂ, ಕೆಲವೊಂದು ಮೂಲಗಳ ಪ್ರಕಾರ ಹಲವು ನಟ- ನಟಿಯರ ಕಡೆ ಬೆರಳು ತೋರುವಂತೆ ಮಾಡಿದೆ.  ಚಿತ್ರರಂಗದಲ್ಲಿರುವ ಕೆಲವರು ಕೊಟ್ಟ ಮಾನಸಿಕ ಕಾಟದಿಂದ ಸುಶಾಂತ್ ಬಹಳವಾಗಿ ನೊಂದಿದ್ದರು ಎನ್ನಲಾಗಿದೆ. ಅವರಲ್ಲಿ ನಟಿ ಆಲಿಯಾ ಭಟ್, ಸಲ್ಮಾನ್ ಖಾನ್, ಸೋನಂ ಕಪೂರ್‌, ಕರಣ್‌ ಜೋಹಾರ್‌ ಹೆಸರುಗಳು ಮುಂಚೂಣಿಯಲ್ಲಿವೆ. 

ಸುಶಾಂತ್ ಪರವಾರಗಿ ನಿಂತ ನಟಿ ಕಂಗನಾ ಬಾಲಿವುಡ್ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಚಿತ್ರ ಪ್ರೇಮಿಗಳಿಗೆ ಅರ್ಥವಾಗುವಂತೆ ಬಿಚ್ಚಿಡುತ್ತಿದ್ದಾರೆ. ಕಂಗನಾ ಯಾರಿಗೂ ಹೆದರದೇ ನೀಡಿರುವ ಬೋಲ್ಡ್ ಹೇಳಿಕೆಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಾಗೂ ಈ ಚಿತ್ರೋದ್ಯಮದ ಮಾಫಿಯಾದಲ್ಲಿ ಸೇರಿಕೊಂಡಿರುವ ಜನರನ್ನು ದ್ವೇಷಿಸಲು ಆರಂಭಿಸಿದ್ದಾರೆ. ಇದರಿಂದ ಬೆರಳು ತೋರುತ್ತಿರುವ ಕರಣ್, ಆಲಿಯಾ, ಸೋನಮ್, ಸಲ್ಮಾನ್ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಕಡಿಮೆಯಾಗುತ್ತಿದ್ದಾರೆ.

 

ಇನ್‌ಸ್ಟಾಗ್ರಾಂ ಫಾಲೋವರ್ಸ್‌:
ಮಣಿಕರ್ಣಿಕಾ ನಟಿ ಕಂಗನಾ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷ 47 ಫಾಲೋವರ್ಸ್‌ ಹೊಂದಿದ್ದಾರೆ. ನಟಿ ಕೃತಿ ಸೋನಂ 2 ಲಕ್ಷ 91 ಸಾವಿರ ಫಾಲೋವರ್ಸ್‌ ಹಾಗೂ ಶ್ರದ್ಧಾ ಕಪೂರ್ 2 ಲಕ್ಷ 70 ಸಾವಿರ ಫಾಲೋವರ್ಸ್ ಹೊಂದಿದ್ದು, ಅಪಾರ ಬೆಂಬಲಿಗರನ್ನು ಹೆಚ್ಚಿಸಿಕೊಂಡಿದ್ದಾರೆ. ಸುಶಾಂತ್ ಅಂತ್ಯಕ್ರಿಯಯಲ್ಲಿ ಪಾಲ್ಗೊಂಡ ಶ್ರದ್ಧಾ ಕಫೂರ್ ಹಾಗೂ ಕೃತಿ ಸೋನಮ್ ಸುಶಾಂತ್ ಕುಟುಂಬದವರ ಜತೆ ಪತ್ರಿ ದಿನವೂ ಸಂಪರ್ಕದಲ್ಲಿದ್ದರು. 

ಕಂಗನಾ ಬೋಲ್ಡ್‌ನೆಸ್ ಎಂಥವರನ್ನೂ ಆಶ್ಚರ್ಯಗೊಳ್ಳುವಂತೆ ಮಾಡುತ್ತಿತ್ತು. ಇವಳ್ಯಾಕೆ ಎಲ್ಲರನ್ನೂ ಈ ಮಟ್ಟಿಗೆ ಎದುರು ಹಾಕಿಕೊಳ್ಳುತ್ತಾಳೆ ಎನಿಸುವುದರ ಜೊತೆ, ಅವಳ ಪ್ರತಿಭೆ ಬಗ್ಗೆ ಪ್ರತಿಯೊಬ್ಬ ಸಿನಿಮಾ ರಸಿಕನೂ ಮೆಚ್ಚುಗೆಯ ಮಾತನಾಡಿದ್ದು ಸುಳ್ಳಲ್ಲ. ಆದರೆ, ಇದೀಗ ಸುಶಾಂತ್ ಪರ ನಿಂತಿರುವ ಈ ಬಾಲಿವುಡ್ ಕ್ವೀನ್ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಲೂ ದೃತಿಗೆಡದೇ ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತ, ರಾಜಕೀಯ, ಪರಕೀಯರನ್ನು ನಾಯಿಯಂತೆ ಕಾಣುವ ರೀತಿ ಬಗ್ಗೆ ಅದೇ ರೀತಿಯ ಬಿಂದಾಸ್ ಹೇಳಿಕೆಗಳನ್ನು ನೀಡುವುದರಲ್ಲಿ ಕಂಗನಾ ಒಂದು ಹೆಜ್ಜೆ ಮುಂದಿದ್ದಾರೆ. 

ಸುಶಾಂತ್ ಅವರನ್ನು ಖಿನ್ನತೆಗೆ ತಳ್ಳಿದ್ದು ಬಾಲಿವುಡ್ ಮಂದಿ, ಎಂಜಿನೀಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ rank ಪಡೆದವ ಆತ್ಮಹತ್ಯೆ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ, ಎಂದು ಹೇಳಿ ಮೊದಲು ವೀಡಿಯೋ ಮಾಡಿದ್ದ ಕಂಗನಾ, ಇದೀಗ ಮತ್ತೊಂದು ವೀಡಿಯೋ ಮಾಡಿ, ಮತ್ತದೇ ಬಾಲಿವುಡ್‌ನ ಕೊಳಕು ರಾಜಕಾರಣದ ಬಗ್ಗೆ ಗಟ್ಟಿ ಧ್ವನಿ ಎತ್ತಿದ್ದಾರೆ. ತಮ್ಮ ಮರ್ಣಿಕರ್ಣಿಕಾ ಚಿತ್ರದ ಬಗ್ಗೆ ಬರೆಯದಿರಲು ಪತ್ರಕರ್ತರ ಗಿಲ್ಡ್ ತೆಗೆದುಕೊಂಡ ನಿರ್ಧಾರದ ಹಿಂದಿದ್ದ ಮಾಫಿಯಾ ಬಗ್ಗೆಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಹೊರಗಿನಿಂದ ಬಂದು, ಬೇರೂರಿದ ಈ ಬಾಲಿವುಡ್ ಕ್ವೀನ್ ಬಗ್ಗೆ ಇದೀಗ ಎಲ್ಲರೂ ಪ್ರಶಂಸೆ ಮಾತನಾಡುತ್ತಿದ್ದಾರೆ. ಹೆಣ್ಣೆಂದರೆ ಇಷ್ಟು ಗಟ್ಟಿಗಿತ್ತಿ ಆಗಿರಬೇಕೆಂದು ಹೇಳುವಂತಾಗಿದೆ.

ಇದರ ಜೊತೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಎಲ್ಲರೂ, ಕರಣ್ ತಾಳಕ್ಕೆ ಕುಣಿದರೆ, ಕಂಗನಾ ಮಾತ್ರ ಕರಣ್ ವಿರುದ್ಧವಾಗಿ ಮಾತನಾಡಿ, ನಿರೂಪಕನನ್ನೇ ಪೇಚಿಗೆ ಸಿಲುಕಿಸಿದ್ದರು. ಇದೀಗ ಆ ವೀಡಿಯೋ ತುಣುಕು ಸಹ ವೈರಲ್ ಆಗಿದ್ದು, ಕಂಗನಾ ಧೈರ್ಯಕ್ಕೆ ಎಲ್ಲರೂ ಶಹಬ್ಬಾಸ್ ಎನ್ನುತ್ತಿದ್ದಾರೆ. ಅದೂ ಅಲ್ಲದೇ ಆಲಿಯಾ ವಿರುದ್ಧ ಈ ಹಿಂದೆ ಕಂಗನಾ ಅಷ್ಟೇಕೆ ಹರಿಹಾಯ್ದಿದ್ದು ಎಂಬುವುದೂ ಇದೀಗ ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ. ಜೊತೆಗೆ ಏಕೆ ಈ ಬಾಲಿವುಡ್ ಮಂದಿ ಯಾವತ್ತೂ ಕಂಗನಾ ಪರ ನಿಲ್ಲೋಲ್ಲ ಎಂಬ ಕುತೂಹಲಕ್ಕೂ ಇದೀಗ ತೆರೆ ಬಿದ್ದಂತಾಗಿದೆ.

ಆದರೆ ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಕರಣ್‌ ಜೋಹಾರ್‌ 1 ಲಕ್ಷ 18 ಸಾವಿರ ಫಾಲೋವರ್ಸ್‌, ಆಲಿಯಾ ಭಟ್ 4 ಲಕ್ಷ 44 ಸಾವಿರ ಫಾಲೋವರ್ಸ್‌, ಸೋನಂ ಕಪೂರ್ 84 ಸಾವಿರ ಫಾಲೋವರ್ಸ್‌, ಸಲ್ಮಾನ್ ಖಾನ್‌ 50 ಸಾವಿರ ಫಾಲೋವರ್ಸ್‌ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.