ಮುಂಬೈ(ಆ. 06)   ಕೊರೋನಾ ಗೆದ್ದು ಬಂದ ಅಮಿತಾಬ್ ಬಚ್ಚನ್ ಇದೀಗ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ  ತಂದೆ ಕವಿ ಹರಿವಂಶರಾಯ್ ಬಚ್ಚನ್ ಅವರ ಕವಿತೆ ಸಾಲುಗಳನ್ನು ಶೇರ್ ಮಾಡಿಕೊಂಡಿದ್ದರು.

'ಅಕೆಲ್ ಪನ್ ಕಾ ಬಾಲ್ ಪೆಹಚಾನ್' ಎಂಬ ಕವನದ ಸಾಲುಗಳನ್ನು ಬುಧವಾರ ರಾತ್ರಿ ಬಿಗ್ ಬಿ ಶೇರ್ ಮಾಡಿಕೊಂಡಿದ್ದರು. ಇದು ನಮ್ಮ ತಂದೆ ಹರಿವಂಶರಾಯ್ ಬಚ್ಚನ್ ಸಾಲುಗಳು ಎಂದು ಬರೆದುಕೊಂಡಿದ್ದರು. ಆದರೆ ಗುರುವಾರ ಬೆಳಗ್ಗೆ ಆದ ತಪ್ಪು ತಿದ್ದಿಕೊಂಡು ಕ್ಷಮೆ ಕೇಳಿದ್ದಾರೆ.

ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

ನಾನು ಕವಿ, ಲೇಖಕ ಪ್ರಸೂನ್ ಜೋಶಿ ಅವರ ಕ್ಷಮೆ ಕೇಳುತ್ತೇನೆ. ನಿನ್ನೆ ಹಂಚಿಕೊಂಡ ಸಾಲುಗಳು ಅವರದ್ದು, ನನ್ನ ತಂದೆಯದ್ದಲ್ಲ ಎಂದು ಬಿಗ್ ಬಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕವಿ, ಸಾಹಿತಿ, ಗೀತರಚನೆಕಾರರಾಗಿ ಪ್ರಸೂನ್ ಜೋಶಿ ಗುರುತಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಕೊರೋನಾ ಗುಣಮುಖರಾಗಿ ಮನೆಗೆ ತೆರಳಿದ್ದರೆ ಪುತ್ರ ಅಭಿಷೇಕ್ ಬಚ್ಚನ್ ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.