ಬಾಲಿವುಡ್‌ ಅಂಗಳದಲ್ಲಿ ಕೊರೋನಾ ವೈರಸ್‌ ದೊಡ್ಡ ಅಲೆ ಎಬ್ಬಿಸಿದೆ. ಸಿನಿಮಾ ಸ್ಟಾರ್ಸ್ ಹಾಗೂ ಸೆಲೆಬ್ರಿಟಿಗಳನ್ನೇ ಟಾರ್ಗೇಟ್ ಮಾಡುತ್ತಿರುವ ಕೊರೋನಾಗೆ ಬ್ರೇಕ್ ಹಾಕಲೇ ಬೇಕೆಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಕಠಿಣ ಮಾರ್ಗ ಸೂಚನೆಗಳನ್ನು ಜಾರಿಗೊಳಿಸಿದೆ. 

'ವಕೀಲ್ ಸಾಬ್‌' ಚಿತ್ರದ ನಟಿ ನಿವೇತಾ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೋನಾ ಪಾಸಿಟಿವ್ 

ನಟಿ ಭೂಮಿ ಪಡ್ನೆಕರ್‌ ಕೊರೋನಾ ಸೋಂಕು ತಗುಲಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದಾರೆ. 'ಇಂದು ನನಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಐಸೋಲೇಟ್‌ ಆಗುತ್ತಿರುವೆ. ನನ್ನ ವೈದ್ಯರು ಹೇಳಿರುವುದನ್ನು ಪಾಲಿಸುತ್ತಿರುವೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಿ. ಬಿಸಿ ಹಬೆ, ವಿಟಮಿನ್ ಸಿ ಸೇವಿಸಿ. ಸದಾ ಖುಷಿಯಾಗಿದ್ದು, ಒಳ್ಳೆಯ ಮೂಡ್‌ನಲ್ಲಿದ್ದರೆ ಏನು ಬೇಕಾದರೂ ಎದುರಿಸಬಹುದು. ಸದ್ಯದ ಪರಿಸ್ಥತಿಯನ್ನು ನಿರ್ಲಕ್ಷ್ಯಿಸಬೇಡಿ.  ಮುಜಾಗೃತ ಕ್ರಮ ಅಗತ್ಯವಿದೆ,' ಎಂದಿದ್ದಾರೆ. 

ಬಿ-ಟೌನ್‌ ಹ್ಯಾಂಡ್ಸಮ್ ವಿಕ್ಕಿ ಕೌಶಲ್‌ಗೆ ಕೂಡ ಕೋವಿಡ್‌19 ಪಾಸಿಟಿವ್‌ ಬಂದಿದೆ. 'ಚಾಚೂ ತಪ್ಪದೇ ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡರೂ ಕೋವಿಡ್‌19 ಪಾಸಿಟಿವ್ ಆಗಿದ್ದೀನಿ.  ಮನೆಯಲ್ಲಿಯೇ ಕ್ವಾರಂಟೈನ್‌ ಆಗಿದ್ದು, ನನ್ನ ಡಾಕ್ಟರ್ ಸಲಹೆ ಪಡೆಯುತ್ತಿರುವೆ. ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಂಬ್ಬರೂ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ,' ಎಂದಿದ್ದಾರೆ ವಿಕ್ಕಿ.

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್! 

ಕೆಲವು ದಿನಗಳ ಹಿಂದೆ ರಣಬೀರ್ ಕಪೂರ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಗೋವಿಂದ್ ಸೇರಿದಂತೆ ರಾಮಸೇತು ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ 35 ಮಂದಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.