ಇಷ್ಟ ಪಟ್ಟರೆ ಹಠ ಹಿಡಿದು  ಪಾತ್ರಗಿಟ್ಟಿಸಿಕೊಂಡು ತಾನೊಬ್ಬ ಅದ್ಬುತ ನಟ ಎಂಬುದನ್ನು  ಸಾಬೀತು  ಮಾಡಿ ತೋರಿಸುತ್ತಾರೆ  ಆಯುಷ್ಮಾನ್‌ ಖುರಾನ್‌. ಪಾತ್ರಕ್ಕೆ ತಕ್ಕ ಅಭಿನಯ, ಯಾರೊಂದಿಗೂ ಗಾಸಿಪ್ ಮಾಡಿಕೊಂಡು ಉದಾಹರಣೆ ಇಲ್ಲ  ಅಂತ ನಿಷ್ಟಾವಂತ ನಟನಿಗೆ ಈ ರೀತಿಯ  ಡಿಮ್ಯಾಂಡ್‌ ಇಟ್ಟ ನಿರ್ದೇಶಕನ್ಯಾರು? 

ಲಾಕ್‌ಡೌನ್‌ನಿಂದಾ ಲೈವ್‌ ಚ್ಯಾಟ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿರುವ ತಾರೆಯರು ಯಾರಿಗೂ ತಿಳಿಯದ ಹಲವು  ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. 'ಲಾಕ್‌ಡೌನ್‌ ಇಂಟರ್ವ್ಯೂ'ಗಳನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ, ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಆಯುಷ್ಮಾನ್‌ ತನಗಾದ  ಕಾಸ್ಟಿಂಗ್ ಕೌಚ್‌ ಬಗ್ಗೆ  ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

#SareeTwitter,ಸೀರೆ ತೊಟ್ಟ ನಟನ ಫೋಟೋ ವೈರಲ್!

ಬಿ-ಟೌನ್‌ಗೆ ಕಾಲಿಡುವ ಮುನ್ನ ಆಯುಷ್ಮಾನ್‌ ಸಾಕಷ್ಟು ಆಡಿಷನ್‌ಗಳಲ್ಲಿ ಭಾಗಿಯಾಗಿದ್ದರು. ಅವಕಾಶ ಸಿಗದೆ ಕಂಗಾಲಾದಾಗ   ನಿರ್ದೇಶಕರೊಬ್ಬರು ಆಡಿಷನ್‌ಗೆ ಕರಿ ಮಾಡಿ ಭಾಗಿಯಾಗಲು ಹೇಳುತ್ತಾರೆ. ಅದರಂತೆ ಭಾಗಿಯಾದಾಗ ನಿರ್ದೇಶಕ ಕೆಟ್ಟ ಡಿಮ್ಯಾಂಡ್‌ವೊಂದನ್ನು ಅಯುಷ್ಮಾನ್‌ ಮುಂದಿಡುತ್ತಾರೆ. ಅದುವೇ 'I'll give you the lead role if you showed me your tool' ಎಂದು. ಅವರ ಮಾತುಗಳನ್ನು ಕೇಳಿ ಕಂಗಾಲಾದ ಅಯುಷ್ಮಾನ್‌ ಸ್ಥಳದಲ್ಲೇ 'ನಾನು ನೇರವಾಗಿ ಮಾತನಾಡುವ ವ್ಯಕ್ತಿ ಅವರ ಬೇಡಿಕೆಯನ್ನು ಒಳ್ಳೆಯ ರೀತಿಯಲ್ಲೇ ತಿರಸ್ಕರಿಸಿದೆ' ಎಂದಿದ್ದಾರೆ.

ಆನಂತರ 2012ರಲ್ಲಿ ಸೂರ್ಜಿತ್‌ ಸರ್ಕಾರ್ ನಿರ್ದೇಶನ 'ವಿಕ್ಕಿ ಡೋನರ್‌' ಸಿನಿಮಾದ ಮೂಲಕ ಜನರಿಗೆ ಪರಿಚಯವಾದರು. ವಿಭಿನ್ನ ಕಥೆಯುಳ್ಳ ಸಿನಿಮಾ ಇದಾದ  ಕಾರಣ ಅನೇಕರು  ಆಯುಷ್ಮಾನ್‌ ಬೋಲ್ಡ್‌ನೆಸ್‌ ಅನ್ನು  ಮೆಚ್ಚಿಕೊಂಡರು.

ಕೆಲ ದಿನಗಳ ಹಿಂದೆ  ನಟ ರಾಜೀವ್‌ ಕಾಸ್ಟಿಂಗ್ ಕೌಚ್‌ ಬಗ್ಗೆ ನೀಡಿದ ಹೇಳಿಕೆಗೆ ನಟಿಯರು ಗರಂ ಆಗಿದ್ದರು. 'ಕಾಸ್ಟಿಂಗ್ ಕೌಚ್‌ ಬಗ್ಗೆ ನಟಿಯರು ಹೇಳುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇದರಲ್ಲಿ  ಇಬ್ಬರದ್ದೂ  ತಪ್ಪಿರುತ್ತದೆ. ಒಬ್ಬ ನಟಿ ಶೋಷಣೆಗೆ ಒಳಗಾಗಿದ್ದಾಳೆ  ಎಂಬುದನ್ನು ನೀವು ಹೇಗೆ ಹೇಳುತ್ತೀರಾ? ಶೋಷಣೆಗೆ ಒಳಗಾಗುವುದರ  ಬಗ್ಗೆ ಮಾತನಾಡಲು ನಟಿ ಹೆದರುತ್ತಾಳೆ  ಅಥವಾ ಮತ್ತೊಬ್ಬ ಸಹ ನಟಿ ಆಕೆಗಿಂತಲ್ಲೂ ಪ್ರಭಾವ ಬೀರುವ ಪಾತ್ರಗಳನ್ನು ಮಾಡಿದರೆ ಮಾತ್ರ ಕಾಸ್ಟಿಂಗ್ ಕೌಚ್‌ ಮಗ್ಗೆ ನಟಿಯರು ಮಾತನಾಡುತ್ತಾರೆ' ಎಂದು ಹೇಳಿಕೆ ನೀಡಿದ್ದರು . 

ಖುಷಿ ನುಂಗಿದ ಕ್ಯಾನ್ಸರ್: ಆಯುಷ್ಯ ಬೇಡುತ್ತಿರುವ ಆಯುಷ್ಮಾನ್ ಪತ್ನಿ!

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ ವಿಚಾರ ಹೆಚ್ಚಾಗುತ್ತಿದ್ದಂತೆ ನಟಿಯರು #Metoo ಅಭಿಯಾನ ಶುರು ಮಾಡಿಕೊಂಡರು. ಆದರೆ ಆ ಸಮಯದಲ್ಲಿ ಯಾವ ನಟರೂ ತಮಗಾದ ಅನುಭದ ಬಗ್ಗೆ ಮಾತನಾಡಿರಲಿಲ್ಲ. ಈಗ ಅದರ ಬಗ್ಗೆ ಮಾತನಾಡುತ್ತಿರುವುದರಿಂದ ಅವರಿಗೂ ಬಿಡುವುದಿಲ್ಲ ಕಾಸ್ಟಿಂಗ್ ಕೌಚ್ ಎಂದು ತಿಳಿದು ಬಂದಿದೆ.