ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಕ್ಯಾನ್ಸರ್ ರೋಗಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ. 

ತಾಹಿರಾ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅದಕ್ಕೆ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಕಿಮೋ ಥೆರಪಿಗಾಗಿ ತಲೆಗೂದಲನ್ನು ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಮೋಶನಲ್ ಆಗಿ ಮಾತನಾಡಿದ್ದಾರೆ. 

"ಕಷ್ಟಕರ ಪರಿಸ್ಥಿತಿ ಎದುರಾಗುವವರೆಗೆ ನೀವು ಹೇಗೆ ರಿಯಾಕ್ಟ್ ಮಾಡುತ್ತೀರಿ ಎಂದು ನಿಮಗೆ ಗೊತ್ತಿರುವುದಿಲ್ಲ. ನಾನು ಕಿಮೋ ಆರಂಭಿಸಿದಾಗ ನನ್ನ ಕೂದಲನ್ನು ಕಳೆದುಕೊಳ್ಳುತ್ತೇನೆ ಎಂದು ನನಗೆ ಗೊತ್ತಿತ್ತು. ಅದಕ್ಕಾಗಿಯೇ ವಿಗ್ ಇಟ್ಟುಕೊಂಡಿದ್ದೆ. ಬಣ್ಣ ಬಣ್ಣದ ಸ್ಕಾರ್ಫ್ ಗಳನ್ನು ಇಟ್ಟುಕೊಂಡಿದ್ದೆ. ನಾನು ಬಾಲ್ಡಿ ಆಗುವುದಕ್ಕೆ ಸಂಪೂರ್ಣವಾಗಿ ರೆಡಿಯಾಗಿದ್ದೆ" ಎಂದು ಹೇಳಿದ್ದಾರೆ. 

" ನಾನು ತಲೆಬೋಳಿಸಿಕೊಳ್ಳುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಉದ್ದ ಕೂದಲಿರುವುದೇ ಸೌಂದರ್ಯದ ಪ್ರತೀಕ ಎಂದುಕೊಂಡಿದ್ದೆ. ಆದರೆ ನನಗೆ ಕ್ಯಾನ್ಸರ್ ಬಂದಾಗ ಕೂದಲನ್ನು ತೆಗೆಸಬೇಕಾಗಿ ಬಂತು. ತೆಗೆಸಿದೆ. ಆಗ ನನ್ನ ಮಗ ನನ್ನನ್ನು ನೋಡಿ, ತನ್ನ ಸ್ನೇಹಿತರನ್ನು ಭೇಟಿ ಮಾಡಬೇಡ ಎಂದ. ಆದರೆ ನಾನು ಭೇಟಿ ಮಾಡಿದೆ. ಅವರ ಜೊತೆ ಸಮಯ ಕಳೆದೆ. ಅವರೂ ನನ್ನನ್ನು ನಾರ್ಮಲ್ ಎನ್ನುವಂತೆಯೇ ಟ್ರೀಟ್ ಮಾಡಿದರು. ಆಗ ನನಗೆ ನಿಜವಾದ ಸೌಂದರ್ಯ ಏನು ಅಂತ ಅರ್ಥವಾಯ್ತು" ಎಂದು ತಾಹಿರಾ ಹೇಳಿದರು.