ಬಾಲಿವುಡ್ ಸ್ಟಾರ್ ನಟ ಅರ್ಜುನ್ ರಾಂಪಾಲ್- ಮೆಹರ್ ಜೆಸಿಯಾ 21 ವರ್ಷಗಳ ದಾಂಪತ್ಯ ಜೀವನ ಮುಕ್ತಾಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ. 

ರಾಖಿ ಭಾಯ್ ಮಮ್ಮಿ ಸೂಪರ್ ಹಾಟ್ ಫೋಟೋಗಳಿವು!

ಇವರಿಗೆ ಮೈರಾ, ಮಹಿಕಾ ಎನ್ನುವ ಇಬ್ಬರು ಮಕ್ಕಳಿದ್ದು ಅವರಿಬ್ಬರೂ ಅಮ್ಮ ಜೆಸಿಯಾ ಜೊತೆಯೇ ಇರಲಿದ್ದಾರೆ. ಅರ್ಜುನ್ ರಾಂಪಾಲ್ ಸೌತ್ ಆಫ್ರಿಕನ್ ಮಾಡೆಲ್ ಗೆಬ್ರಿಲ್ಲಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಅದರ ಫಲವಾಗಿ ಮನೆಗೆ ಮಗ ಕೂಡಾ ಆಗಮಿಸಿದ್ದಾನೆ.

ಇದೇನಾಯ್ತಪ್ಪಾ! ಮದ್ವೆ ಆದ್ಮೇಲೆ ಐಂದ್ರಿತಾ ಬಿಕಿನಿ ಲುಕ್‌ಗೆ ಬಂದ್ಬಿಟ್ರು!

' ನಮ್ಮ 20 ವರ್ಷಗಳ ದಾಂಪತ್ಯವನ್ನು ಪ್ರೀತಿ ಹಾಗೂ ಸುಂದರವಾದ ನೆನಪುಗಳ ಜೊತೆ ಕಳೆದಿದ್ದೇವೆ. ನಾವು ಅದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ. ನಮ್ಮ ನಮ್ಮ ದಾರಿಗಳು ಬೇರೆ ಬೇರೆ ಎಂದು ನಮಗನಿಸಿತು. ಹಾಗಾಗಿ ಬೇರೆ ಬೇರೆ ದಾರಿ ಹಿಡಿದೆವು. ಇಂದಿನಿಂದ ಹೊಸ ಹೆಜ್ಜೆ ಇಡಲಿದ್ದೇವೆ' ಎಂದು ಅರ್ಜುನ್ ಹೇಳಿದ್ದಾರೆ.

ಅರ್ಜುನ್ ಹಾಗೂ ಮೆಹರ್ 1998 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅರ್ಜುನ್ ರಾಂಪಾಲ್ 'ಓಂ ಶಾಂತಿ ಓಂ, ರಾಜನೀತಿ, ಪಲ್ತಾನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.