ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಕ್ಯೂಟ್‌ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡ ಕೊಹಿಲಿ ಮಡದಿ. ಯಾವುದು ನಮ್ಮ ಕಂಟ್ರೋಲ್‌ನಲ್ಲಿದೆ ಎಂದು ನೆಟ್ಟಿಗರನ್ನೇ ಪ್ರಶ್ನಿಸಿದ ಬಾಲಿವುಡ್ ನಟಿ. 

ಇತ್ತೀಚಿಗೆ ಪೋಷಕರಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ ಕ್ರಿಕೆಟರ್‌ ವಿರಾಟ್ ಕೊಹ್ಲಿ (Virat Kohli) ಹಾಗೂ ನಟಿ ಅನುಷ್ಕಾ ಶರ್ಮಾಗೆ ಆಪ್ತರಿಂದ ಹಾಗೂ ಅಭಿಮಾನಿಗಳಿಗೆ ಪ್ರೀತಿಯ ಶುಭಾಶಯಗಳು ಹರಿದು ಬರುತ್ತಿದೆ. ಈ ನಿಟ್ಟಿನಲ್ಲಿ ಅನುಷ್ಕಾ ಮತ್ತೊಂದು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ವಿರುಷ್ಕಾ ಜೋಡಿಗೆ ಸರ್ಫ್ರೈಸ್ ಕೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು..! 

ಇನ್‌ಸ್ಟಾ ಪೋಸ್ಟ್‌:
' ಪುಟ್ಟ ಜೀವ ಸೃಷ್ಟಿಯಾಗುತ್ತಿದೆ. ಪ್ರಪಂಚದಲ್ಲಿ ಇದಕ್ಕಿಂತ ಅದ್ಭುತ ಹಾಗೂ ಅಮೋಘ ಅನುಭವ ಮತ್ತೊಂದಿಲ್ಲ. ನಿಮ್ಮ ನಿಯಂತ್ರಣದಲ್ಲಿಲ್ಲವೆಂದ ಮೇಲೆ ನಿಜವಾಗಲೂ ಏನಿದು? (When this is not in your control then really what is?)' ಎಂದು ಬರೆದುಕೊಂಡಿದ್ದಾರೆ.

ಸಮುದ್ರ ತೀರದಲ್ಲಿ ನಿಂತು ತಮ್ಮ ಬೇಬಿ ಬಂಪನ್ನು ಎಂಜಾಯ್ ಮಾಡುತ್ತಿರುವ ಫೋಟೋಗೆ ನಟಿ ಶಿಲ್ವಾ ಶೆಟ್ಟಿ ಯಾರ ದೃಷ್ಟಿಯೂ ಬೀಳದೇ ಇರಲಿ ಎಂದಿದ್ದಾರೆ. 'ಈ ಒಂದು ಪೋಟೋದಲ್ಲಿ ನನ್ನ ಇಡೀ ಪ್ರಪಂಚವಿದೆ' ಎಂದು ವಿರಾಟ್ ಕಾಮೆಂಟ್ ಮಾಡಿದ್ದಾರೆ. ಕರೀನಾ ಕಪೂರ್, ಜಾಕ್ವೆಲೀನ್, ಮೌನಿ ರಾಯ್, ದಿಯಾ ಮಿರ್ಜಾ ಸೇರಿ ಅನೇಕರು ಶುಭವಾಗಲಿ, ಆರೋಗ್ಯವಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ.

View post on Instagram

ಡಿಸೆಂಬರ್ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿರಾಟ್ ಮತ್ತು ಅನುಷ್ಕಾ ಶರ್ಮಾ (Anushka Sharma) ಜನವರಿ 2021ರಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ. ಈ ವಿಷಯವನ್ನು ಇಬ್ಬರೂ ಇತ್ತೀಚೆಗೆ ಅನೌನ್ಸ್ ಮಾಡಿದ್ದಾರೆ. ಈ ದಂಪತಿ ಅಪ್ಪ-ಅಮ್ಮನಾಗುವ ಪೋಸ್ಟ್‌ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ನೂತನ ದಾಖಲೆ ನಿರ್ಮಿಸಿತ್ತು.. 2021ರ ಜನವರಿಯಲ್ಲಿ ಮಗುವಿನ ನಿರೀಕ್ಷೆಯಿದೆ ಎಂದು ಅನುಷ್ಕಾ ಹಾಗೂ ಕೊಹ್ಲಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಪೋಸ್ಟ್‌ ಮಾಡಿದ 24 ಗಂಟೆಗಳಲ್ಲಿ 1.53 ಕೋಟಿ ಮಂದಿ ಇಷ್ಟಪಟ್ಟಿದ್ದರು.. ನಟ ಡ್ವೇನ್‌ ಜಾನ್ಸನ್‌ ಮದುವೆ ಫೋಟೋಗೆ 1.46 ಕೋಟಿ ಲೈಕ್ಸ್‌ ಬಂದಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದು ಈ ಹಿಂದೆ ಘೋಷಿಸಿದ್ದ ಸೆಲೆಬ್ರಿಟಿಗಳ ಫೋಸ್ಟ್‌ಗಳ ದಾಖಲೆಯನ್ನು ಮುರಿದಿದೆ. ಮಾಡೆಲ್‌ ಗಿಗಿ ಹದಿದ್‌-ಜಯಾನ್‌ ಮಲಿಕ್‌ ಪೋಸ್ಟ್‌ (8.2 ಮಿಲಿಯನ್‌), ಪಾಪ್‌ ಗಾಯಕ ಜಸ್ಟಿನ್‌ ಬೈಬರ್‌-ಹೈಲಿ ಬಾಲ್ಡ್‌ವಿನ್‌ (13.4 ಮಿಲಿಯನ್‌),ಶೀಘ್ರದಲ್ಲಿಯೇ ಐಪಿಎಲ್ ಹವಾ ಶುರುವಾಗಲಿದ್ದು, RCB ನಾಯಕನಾಗಿರುವ ವಿರಾಟ್ ಕೊಹ್ಲಿ ತಂದಡ ದುಬೈಗೆ ಪ್ರಯಾಣ ಬೆಳೆಸಿದೆ. ತಂಡದ ಸದಸ್ಯರೊಂದಿಗೆ ಅವರ ಮಡದಿಯರೂ ತೆರಳಿದ್ದು, ಕುಟುಂಬದೊದ್ದಿಟ್ಟಿಗೆ ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಸಂಗೀತಾ ಬಿಜ್ಲಾನಿ-ಅನುಷ್ಕಾ, ಕ್ರಿಕೆಟಿಗರಿಗೆ ಬೋಲ್ಡ್‌ ಆದ ನಟಿಯರು!

ಗರ​ಗಸದಲ್ಲಿ ಬ್ಯಾಟ್‌ ಹ್ಯಾಂಡಲ್‌ ಕೊಯ್ದ ಕೊಹ್ಲಿ!
ಕೊರೋನಾ ಸೋಂಕು ತಡೆ​ಯಲು ಬಯೋ ಸೆಕ್ಯೂರ್‌ ವಾತಾ​ವ​ರಣ ಸೃಷ್ಟಿ​ಸಿ​ರುವ ಐಪಿ​ಎಲ್‌ ಅಯೋ​ಜ​ಕರು, ಆಟ​ಗಾ​ರರು ಹಾಗೂ ಸಹಾ​ಯಕ ಸಿಬ್ಬಂದಿಯನ್ನು ಹೊರ​ತು​ ಪಡಿಸಿ ಮತ್ತ್ಯಾ​ರಿಗೂ ಕ್ರೀಡಾಂಗಣ, ಹೋಟೆಲ್‌ಗೆ ಪ್ರವೇಶ ನೀಡು​ತ್ತಿಲ್ಲ. ಈ ಕಾರಣದಿಂದಾಗಿ ಆಟ​ಗಾ​ರರು ತಮ್ಮ ಕೆಲಸಗಳನ್ನು ತಾವೇ ಮಾಡಿ​ಕೊ​ಳ್ಳ​ಬೇ​ಕಿದೆ. ಬ್ಯಾಟ್‌ ತಯಾ​ರ​ಕ​ರಿ​ಗೂ ಪ್ರವೇಶವಿಲ್ಲದ ಕಾರಣ, ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ, ಹೋಟೆಲ್‌ ಕೊಠ​ಡಿ​ಯಲ್ಲಿ ಬ್ಯಾಟ್‌ಗಳನ್ನು ತಾವೇ ಅಗ​ತ್ಯಕ್ಕೆ ತಕ್ಕಂತೆ ಸಿದ್ಧ​ಪ​ಡಿ​ಸಿ​ಕೊ​ಳ್ಳು​ತ್ತಿದ್ದಾರೆ. 

ಕೊಹ್ಲಿ ಗರ​ಗಸದಲ್ಲಿ ಬ್ಯಾಟ್‌ ಹ್ಯಾಂಡಲ್‌ ಕಟ್‌ ಮಾಡು​ತ್ತಿ​ರುವ ವಿಡಿಯೋ ಸಾಮಾ​ಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ‘ಸಣ್ಣ ವಿಚಾರವೂ ಮಹತ್ವದಾಗ​ಲಿದೆ. ಬ್ಯಾಟ್‌ ಸಮ​ತೋ​ಲನವನ್ನು ಕಾಪಾ​ಡಲು ಕೆಲ ಸೆಂ.ಮೀ.ಗಳು ಸಹ ಮುಖ್ಯ​ವೆ​ನಿ​ಸ​ಲಿದೆ,’ ಎಂದು ಕೊಹ್ಲಿ ಟ್ವೀಟ್‌ ಮಾಡಿ​ದ್ದರು..

"