ಖ್ಯಾತ ನಟಿಯೊಬ್ಬರು ಬಾಲ್ಯದಿಂದ ಚಿತ್ರರಂಗದವರೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. 

ಖ್ಯಾತ ಬಾಲಿವುಡ್‌ ನಟಿಯೋರ್ವರು ಬಾಲ್ಯದ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳು ಭಾವುಕರಾಗುವಂತೆ ಮಾಡಿದ್ದಾರೆ. ಬಾಲ್ಯದ ಸಾಹಸ. ಕ್ಯೂಟ್‌ ಹೇರ್‌ಕಟ್‌ ಇರುವ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ. ಬೇಬಿಯಾಗಿದ್ದಿನಿಂದ ಹಿಡಿದು ಬಾಲಿವುಡ್‌ಗೆ ಎಂಟ್ರಿ ಕೊಡುವವರೆಗೆ ಅವರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು? 
ಹೌದು, ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಪ್ರಿಯಾಂಕಾ ಚೋಪ್ರಾ ಅವರು ಬಾಲ್ಯದಿಂದ ಬಾಲಿವುಡ್‌ವರೆಗಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. “ನಾನು ನನ್ನ ಫೋಟೋಗಳನ್ನು ನೋಡುವಾಗ, ಜೀವನದ ಕೆಲ ಫನ್‌ ವಿಷಯಗಳು ಕಾಣಿಸ್ತು” ಎಂದು ಅವರು ಬರೆದುಕೊಂಡು ಕೆಲ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಬೈಸಿಕಲ್‌ ಓಡಿಸುವುದು, ಟ್ರೆಂಡಿ ಗ್ಲಾಸ್‌ ಹಾಕಿಕೊಂಡಿರೋದು, ಕೂಲ್‌ ಆಗಿರುವ ಫೋಟೋಗಳು ಕೂಡ ಇವೆ. ಹದಿನೈದಕ್ಕೂ ಹೆಚ್ಚಿನ ಫೋಟೋಗಳನ್ನು ಹಂಚಿಕೊಂಡು ಅವರು, ಪ್ರತಿ ಫೋಟೋ ಹಿಂದಿನ ಇತಿಹಾಸ ತಿಳಿಸಿದ್ದಾರೆ.

ಹೆಂಡ್ತಿ ವರ್ಜಿನ್ ಆಗಿರ್ಬೇಕು ಅನ್ಬೇಡಿ! ಅದು ಒಂದು ರಾತ್ರಿಯಲ್ಲಿ ಕಳೆದುಹೋಗುತ್ತೆ ಅಂತಿದ್ದಾರೆ ಪ್ರಿಯಾಂಕಾ ಚೋಪ್ರಾ!

Bluff ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ 
ಪ್ರಿಯಾಂಕಾ ಚೋಪ್ರಾ ಅವರು ʼBluffʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ Frank E Flowers ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಕರ್ಲ್‌ ಉರ್ಬನ್‌ ಎನ್ನುವವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 19ನೇ ಶತಮಾನದ ಕ್ಯಾರಿಬಿಯನ್‌ ಮಾಜಿ ಮಹಿಳಾ ದರೋಡೆಕಾರ್ತಿ ಕುರಿತ ಕಥೆ ಈ ಸಿನಿಮಾದಲ್ಲಿದೆ. ʼHeads of Stateʼ ಸಿನಿಮಾದಲ್ಲಿಯೂ ಇವರು ನಟಿಸುತ್ತಿದ್ದಾರೆ. ʼಸಿಟಾಡೆಲ್ʼ‌ ಸೀಸನ್‌ 2ಶೋನಲ್ಲಿಯೂ ಅವರು ನಟಿಸುತ್ತಿದ್ದಾರೆ. 

ಮಹೇಶ್‌ ಬಾಬು ಜೊತೆ ಸಿನಿಮಾ! 
ಬಾಹುಬಲಿ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಹಾಗೂ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ಅವರ ಜೊತೆಗೆ ಪ್ರಿಯಾಂಕಾ ಚೋಪ್ರಾ ಕೂಟ ನಟಿಸಲಿದ್ದಾರೆ. 2027ರಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆಯಂತೆ. ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈ ಸಿನಿಮಾ ಶೂಟಿಂಗ್‌ಗೂ ಮುನ್ನ ಅವರು ಹೈದರಾಬಾದ್‌ನ ಚಿಲ್ಕುರ್‌ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. “ಶ್ರೀ ಬಾಲಾಜಿ ಆಶೀರ್ವಾದದೊಂದಿಗೆ ಹೊಸ ಅಧ್ಯಾಯ ಶುರುವಾಯ್ತು. ನಮ್ಮೆಲ್ಲರ ಹೃದಯಲ್ಲಿ ಈಗ ಶಾಂತಿ ಸಿಗಬಹುದು“ ಎಂದು ಪ್ರಿಯಾಂಕಾ ಚೋಪ್ರಾ ಅವರು ಬರೆದುಕೊಂಡಿದ್ದಾರೆ. 

ಸಹೋದರನ ಮದುವೆಗೆ ಪ್ರಿಯಾಂಕಾ ಚೋಪ್ರಾ ಧರಿಸಿದ 70 ಕೋಟಿ ರೂ ಮೌಲ್ಯದ ಹಾರ ತಯಾರಾಗಿದ್ದು 1600ಗಂಟೆಯಲ್ಲಿ!

ಲವ್‌, ಮದುವೆ, ಮಗಳು! 
2002ರಿಂದ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು 2018ರಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವರಾದ ಅಮೆರಿಕ ಮೂಲದ ಗಾಯಕ ನಿಕ್‌ ಜೋನಾಸ್‌ ಅವರನ್ನು ಮದುವೆಯಾದರು. ಭಾರತದಲ್ಲೇ ಅವರು ಹಿಂದು, ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆ ಆದರು. ನಟನೆ, ಮಾಡೆಲಿಂಗ್‌ ಜೊತೆಗೆ ಪ್ರಿಯಾಂಕಾ ಚೋಪ್ರಾ ಅವರು ಹಾಡು ಕೂಡ ಹಾಡುತ್ತಾರೆ. ಅನೇಕ ಸಿನಿಮಾಗಳಿಗೆ ಅವರು ಹಾಡು ಹಾಡಿದ್ದಾರೆ. ಅಷ್ಟೇ ಅಲ್ಲದೆ ಪತ್ರಿಕೆಗಳಿಗೆ ಅಂಕಣ ಬರೆಯುತ್ತ, ಪುಸ್ತಕವನ್ನು ಕೂಡ ಬರೆದಿದ್ದಾರೆ. 2022ರಲ್ಲಿ ಈ ಜೋಡಿ ಸರೋಗಸಿ ಮೂಲಕ ಹೆಣ್ಣುಮಗುವಿನ ಪಾಲಕರಾದರು. ಮಗಳಿಗೆ ಮಾಲ್ತಿ ಮೇರಿ ಜೋನಾಸ್‌ ಎಂದು ಹೆಸರು ಇಡಲಾಗಿದೆ. ಪ್ರಿಯಾಂಕಾ ಅವರು ಅಷ್ಟಾಗಿ ಮಗಳ ಮುಖವನ್ನು ಸಾರ್ವಜನಿಕವಾಗಿ ಪ್ರದರ್ಶಿಸೋದಿಲ್ಲ. 

View post on Instagram