ದಕ್ಷಿಣ  ಭಾರತ ಚಿತ್ರರಂಗದ ಮಾಸ್ಟರ್‌ ಲವರ್‌, ಆನ್‌‌ಸ್ಕ್ರೀನ್‌ ಕಿಸ್ಸಿಂಗ್ ಬಾಯ್‌ ವಿಜಯ್ ದೇವರಕೊಂಡ 'ಫೈಟರ್‌' ಚಿತ್ರದ ಮೂಲಕ ಬಾಲಿವುಡ್‌‌ಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿ ಯಾರೇ ಆಗಿರಲಿ, ಚಿತ್ರದಲ್ಲಿ ಕಿಸ್ಸಿಂಗ್‌ ಮತ್ತು ರೊಮ್ಯಾನ್ಸ್‌ ಸೀನ್‌ ಇಲ್ಲಾ ಅಂದ್ರೆ ವಿಜಯ್ ಸಿನಿಮಾ ನೋಡೋಕೆ ಅಗಲ್ಲ ಅನ್ನುತ್ತಾರೆ ಅಭಿಮಾನಿಗಳು. ಅಷ್ಟೇ ಏಕೆ ಹೊಸದೊಂದು ಟ್ರೋಲ್‌ ಶುರು ಮಾಡಿದ್ದಾರೆ ಈಗ...

21 ವರ್ಷಕ್ಕೆ ಬಿ-ಟೌನ್‌ ಕಾಲಿಟ್ಟು ಟ್ರೋಲಿಗರಿಗೆ ಆಹಾರವಾದ ನಟಿಯ ಅಸಲಿ ಮುಖವಿದು!

ವಿಜಯ್ ದೇವರಕೊಂಡ ಅವರ ಜೋಡಿಯಾಗಿ ಅಭಿನಯಿಸುತ್ತಿರುವ 'ಸ್ಟೂಡೆಂಟ್ ಆಫ್‌ ದಿ ಇಯರ್-2' ಚಿತ್ರದ ನಾಯಕಿ ಅನನ್ಯಾ ಪಾಂಡೆ ಈಗಾಗಲೇ ಸಾಕಷ್ಟು ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಈ ಜೋಡಿಯ ಚಿತ್ರ ಹಿಟ್ ಆಗುತ್ತೋ, ಈ ಪೇರ್ ತೆರೆ ಮೇಲೆ ಕಮಾಲ್ ಮಾಡುವಲ್ಲಿ ಯಶಸ್ವಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಫುಲ್‌ ಟ್ರೋಲ್ ಆಗುತ್ತಿದ್ದಾರೆ. ವಿರಾಟ್‌ ಹಾಗೂ ಅನುಷ್ಕಾ ಹೆಸರು ಸೇರಿದ್ರೆ #Virushka ಆಗುತ್ತೆ ಹಾಗೆ ವಿಜಯ್ ಹಾಗೂ ಅನನ್ಯಾ ಹೆಸರು ಸೇರಿದ್ರೆ #Anakonda ಆಗುತ್ತೆ ಎಂದು ಕಾಲೆಳೆಯುತ್ತಿದ್ದಾರೆ.

ಹೆಲ್ಮೆಟ್‌ ಇಲ್ಲದೆ ದೇವರಕೊಂಡ ಸ್ಟಂಟ್‌; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್‌!

ಇನ್ನು ವಿಜಯ್ ಜೊತೆ ನಟಿಸಿದ ಮೊದಲ ಚಿತ್ರ ಅನುಭವದ ಬಗ್ಗೆ ಮಾತನಾಡಿದ್ದಾರೆ ಅನನ್ಯಾ. ' ನಾನು ಇದೇ ಮೊದಲ ಬಾರಿ ದಕ್ಷಿಣ ಭಾರತೀಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ವಿಜಯ್ ಇದೇ ಮೊದಲ ಸಲ ಬಾಲಿವುಡ್‌ನಲ್ಲಿ ಅಭಿನಯಿಸುತ್ತಿರುವುದು. ಹೀಗಾಗಿ ನಾವಿಬ್ಬರೂ ಹೊಸ ವಾತಾವರಣದಲ್ಲಿ ಕೆಲಸ ಮಾಡುತ್ತಿರುವುದರಿಂದ ಸ್ವಲ್ಪ ನರ್ವಸ್‌ ಆಗಿದ್ದೇವೆ. ಹೊಸ ರೀತಿಯ ಅನುಭವವಾಗುತ್ತಿದೆ,' ಎಂದು ಹೇಳಿಕೊಂಡಿದ್ದಾರೆ.

ಫೈಟರ್ ಚಿತ್ರದ ಕೆಲವೊಂದು ಫೋಟೋಗಳ ವೈರಲ್‌ ಆಗುತ್ತಿದೆ. ಈ ಹಿಂದೆ ವಿಜಯ್ ಬೈಕ್‌ ಚಲಾಯಿಸುತ್ತಿರುವಾಗ, ಅನನ್ಯಾಳನ್ನು ಬೈಕ್‌ ಟ್ಯಾಂಕ್‌ ಮೇಲೆ ಕೂರಿಸಿಕೊಂಡಿರುವುದು ಫುಲ್‌ ವೈರಲ್‌ ಆಗಿತ್ತು.
 

"