ನಟ Akshay Kumarಗೆ ನಂಬಿಕೆ ದ್ರೋಹ ಮಾಡಿದ ಕಪಿಲ್ ಶರ್ಮಾ; ಏನಿದು ಕಥೆ?
ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಬಚ್ಚನ್ ಪಾಂಡೆ ಸಿನಿಮಾ ಪ್ರಚಾರ ಬೇಡವೇ ಬೇಡ ಎಂದ ನಟ ಅಕ್ಷಯ್ ಕುಮಾರ್, ಕಾರಣವೇನು?
ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಪ್ರಚಾರ ಮಾಡಲು ಮೊದಲು ಆಯ್ಕೆ ಮಾಡುವುದು ದಿ ಕಪಿಲ್ ಶರ್ಮಾ ಕಾರ್ಯಕ್ರಮವನ್ನ. ಒಂದು ಗಂಟೆ ಕಪಿಲ್ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದರೂ ಏನೇ ಅಂದ್ರೂ 1 ಕೋಟಿ ಜನರಿಗೆ ಸುಲಭವಾಗಿ ತಲುಪಬಹುದು ಎನ್ನುವ ಲೆಕ್ಕಾಚಾರವಿದೆ. ಆದರೆ ಈ ಸಲ ಆ ಲೆಕ್ಕ ಬೇಡ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಕಾರಣ ಕಪಿಲ್ ಮಾಡಿದ ನಂಬಿಕ ದ್ರೋಹ.
ಹೌದು! ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್ ಮತ್ತು ಧನುಷ್ ನಟನೆಯ ಅತ್ರಂಗಿ ರೇ ಸಿನಿಮಾ ಪ್ರಚಾರ ಮಾಡಲು ಇಡೀ ತಂಡ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕಪಿಲ್ ಶರ್ಮಾ ಅಕ್ಷಯ್ ಕುಮಾರ್‌ಗೆ ಒಂದು ಪ್ರಶ್ನೆ ಮಾಡಿದ್ದಾರೆ. 'ಫೇಮಸ್ ಪರ್ಸನ್ಯಾಲಿಟಿಗಳನ್ನು ನೀವು ಸಂದರ್ಶನ ಮಾಡಿದ್ದೀರಿ ಹೇಗಿತ್ತು? ಹಾಗೇ ಮಾವಿನ ಹಣ್ಣಿನ ರುಚಿ ಹೇಗಿತ್ತು ಎಂದು ಕಾಲೆಳೆದಿದ್ದಾರೆ, ಇದಕ್ಕೆ ತಕ್ಷಣವೇ ಅಕ್ಷಯ್ ಕುಮಾರ್ 'ನಿನಗೆ ಧೈರ್ಯವಿದ್ದರೆ ಆ ಫೇಮಸ್ ವ್ಯಕ್ತಿ ಯಾರೆಂದು ಹೇಳು?' ಎಂದು ಮರು ಪ್ರಶ್ನಿಸಿದ್ದಾರೆ. ಉತ್ತರ ಗೊತ್ತಿದ್ದರೂ ಕ್ಯಾಮೆರಾ ನೋಡಿ ನಗುವ ಕಪಿಲ್ ಮಾತು ಮರಿಸಿದ್ದಾರೆ.
ಇಡೀ ಕಾರ್ಯಕ್ರಮ ಚಿತ್ರೀಕರಣ ನಡೆದ ನಂತರ ಅಕ್ಷಯ್ ಕುಮಾರ್ ಖುದ್ದಾಗಿ ಕಪಿಲ್ ತಂಡದ ಜೊತೆ ಮಾತನಾಡಿ, ಕೇಳಿರುವ ಪ್ರಶ್ನೆಯನ್ನು ಟಿವಿಯಲ್ಲಿ ತೋರಿಸದಂತೆ ಮನವಿ ಮಾಡಿದ್ದರಂತೆ. ಎಲ್ಲರಿಗೂ ಗೊತ್ತಿತ್ತು ಕಪಿಲ್ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಂದು. ಹೀಗಾಗಿ ಅಕ್ಷಯ್ ಮಾತಿಗೆ ಒಪ್ಪಿಕೊಂಡು ಟಿವಿಯಲ್ಲಿ ಪ್ರಸಾರ ಮಾಡಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅ ಸಣ್ಣ ಮಾತುಕತೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಧಾನಿಗಳ ಬಗ್ಗೆ ಕಪಿಲ್ ಮಾತನಾಡಿರುವ ವಿಡಿಯೋ ಲೀಕ್ ಆಗುವುದು ಬೇಡ ಎಂದು ಹೇಳಿದ್ದರೂ, ಅದನ್ನು ಎಲ್ಲೆಡೆ ವೈರಲ್ ಆಗುತ್ತಿದೆ ಅಂದ್ರೆ ಕಪಿಲ್ ತಂಡದಿಂದಲೇ ಆಗಬೇಕು, ನಂಬಿಕೆ ದ್ರೋಹ ಮಾಡಿದ್ದಾರೆ, ಎಂದಿದ್ದಾರೆ ಅಕ್ಷಯ್ ಕುಮಾರ್.
ಹೀಗಾಗಿ ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾವನ್ನು ಈ ಸಲ ಕಪಿಲ್ ಶರ್ಮಾ ಶೋನಲ್ಲಿ ಪ್ರಚಾರ ಮಾಡುವುದು ಬೇಡ ಎಂದಿದ್ದಾರಂತೆ. ಕಪಿಲ್ ಹೇಳುವ ಎಲ್ಲಾ ಜೋಕ್‌ಗಳನ್ನೂ ಸಂತೋಷದಿಂದ ಸ್ವೀಕರಿಸಿದ ಅಕ್ಷಯ್ ಪ್ರಧಾನಿ ಬಗ್ಗೆ ಕೇಳಿದ್ದಕ್ಕೆ ಮಾತ್ರ ಯಾಕೆ ಇಷ್ಟು ಕೋಪ ಮಾಡಿಕೊಂಡಿದ್ದಾರೆಂದು ಯಾರಿಗೂ ಅರ್ಥವಾಗುತ್ತಿಲ್ಲ. ಪ್ರಚಾರದಿಂದ ಸಿನಿಮಾಗೆ ಒಳ್ಳೆಯದೇ ಆಗುತ್ತದೆ. ಆದರೆ ಅಕ್ಷಯ್ ತೆಗೆದುಕೊಂಡಿರುವ ಈ ನಿರ್ಧಾರ ನಿರ್ಮಾಪಕರ ಮೇಲೆ ಪರಿಣಾಮ ಬೀರಲಿದೆ. ಸಿನಿಮಾವನ್ನು ಜನರಿಗೆ ಸುಲಭವಾಗಿ ಮುಟ್ಟಿಸುವುದು ಕಷ್ಟವಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
Kapil Sharma Show: ಸ್ಮೃತಿ ಇರಾನಿಯನ್ನು ಒಳ ಬಿಡದ ಗಾರ್ಡ್, ಮರಳಿದ ಸಚಿವೆಬಚ್ಚನ್ ಪಾಂಡೆ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ತುಂಬಾನೇ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಷಯ್ ಜೊತೆ ಕೃತಿ ಸನೋನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಿದ್ದಾರೆ. ಸಾಜಿದ್ ನಾಡಿಯುದ್ವಾಲ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ಫರ್ಹಾದ್ ಸಮ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಾರ್ಚ್ 18 ಅಂದ್ರೆ ಹೋಳಿ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
Prithviraj ಸಿನಿಮಾದಿಂದ ರಜಪೂತ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ; ಹೈಕೋರ್ಟ್ ಮೆಟ್ಟಿಲೇರಿದ ಕರಿನ್ ಸೇನೆಅಕ್ಷಯ್ ಕುಮಾರ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಮಾಡಲು ತುಂಬಾನೇ ಡಿಮ್ಯಾಂಡ್ ಇದೆ. ಹೀಗಾಗಿ ಓಟಿಟಿ ಸಂಸ್ಥೆಯೊಂದು ಬರೋಬ್ಬರಿ 175 ಕೋಟಿ ರೂಪಾಯಿ ಆಫರ್ ಮಾಡಿತ್ತಂತೆ. ನಿರ್ಮಾಪಕರು ಕೂಡ ಓಕೆ ಮಾಡುವುದಕ್ಕೆ ರೆಡಿಯಾಗಿದ್ದರು. ಅದರೆ ದೊಡ್ಡ ಪರದೆ ಮೇಲೆ ಸಿನಿಮಾದ ಟ್ರೈಲರ್ ನೋಡಿ ನಿರೀಕ್ಷೆ ಹೆಚ್ಚಾಗಿ ಮನಸ್ಸು ಬದಲಾಯಿಸಿದರಂತೆ.
ಅಕ್ಷಯ್ ಕುಮಾರ್ ಸಿನಿಮಾ ಹೇಗಿದ್ದರೂ ನೋಡುವವರಿದ್ದಾರೆ. ಅದು ಬಿಡಿ, ಈಗ ಅಕ್ಷಯ್ ಮತ್ತು ಕಪಿಲ್ ಕೋಲ್ಡ್ ವಾರ್‌ಗೆ ಬ್ರೇಕ್ ಹಾಕುವುದು ಯಾರು? ಪ್ರಚಾರ ಹೇಗೆ ನಡೆಯಲಿದೆ ಎಂದು ಕಾದು ನೋಡಬೇಕಿದೆ.