ದೊಡ್ಡ ಮೊತ್ತ ಬರುವ ಜಾಹಿರಾತಿನ್ನು ಕೈ ಬಿಟ್ಟ ಅಲ್ಲು ಅರ್ಜುನ್, ಟ್ರೋಲಿಗರಿಗೆ ಗುರಿಯಾದ ಅಕ್ಷಯ್ ಕುಮಾರ್. ಸಾರಿ ಪತ್ರ ಇಲ್ಲಿದೆ...

ಚಿತ್ರರಂಗದಲ್ಲಿ ನಟ,ನಟಿಯರು ನೇಮ್ ಆಂಡ್ ಫೇಮ್ ಪಡೆದುಕೊಂಡ ನಂತರ ಅವರನ್ನು ಹುಡುಕಿಕೊಂಡು ನೂರಾರೂ ಜಾಹಿರಾತು ಸಂಸ್ಥೆಗಳು ಸಂಪರ್ಕ ಮಾಡುತ್ತವೆ. ಸಮಾಜಕ್ಕೆ ಸಂದೇಶ ಸಾರುವ ಬ್ರ್ಯಾಂಡ್, ಜನರ ಜೀವನಕ್ಕೆ ಉಪಯೋಗ ಆಗುವಂತ ಬ್ರ್ಯಾಂಡ್ ಆಗಿದ್ದಾರೆ ಮಾತ್ರ ಪಾಸಿಟಿವ್ ಆಗಿ ಒಪ್ಪಿಕೊಳ್ಳುತ್ತಾರೆ ಆದರೆ ಮಧ್ಯಪಾನ, ಧೂಮಪಾನ ಅಥವಾ ತಂಬಾಕು ಬ್ರ್ಯಾಂಡ್‌ಗಳೆಂದರೆ ಕಿಡಿಕಾರುತ್ತಾರೆ. ಈಗ ಅಕ್ಷಯ್ ಕುಮಾರ್ ಪರಿಸ್ಥಿತಿ ಕೂಡ ಅದೇ ಆಗಿರುವುದು...

ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಕೆಲವು ದಿನಗಳ ಹಿಂದೆ ತಂಬಾಕು ಮಾರಾಟ ಮಾಡುವ ಬ್ರ್ಯಾಂಡ್‌ವೊಂದು ಕೋಟಿ ರೂಪಾಯಿ ಸಂಭಾವನೆ ನೀಡಿ ಜಾಹಿರಾತು ಮಾಡುವಂತೆ ಆಫರ್ ಬಂದಿತ್ತು ಆಗ ಅಲ್ಲು ರಿಜೆಕ್ಟ್‌ ಮಾಡಿದ ವಿಚಾರ ದೊಡ್ಡ ಸುದ್ದಿಯಾಗಿತ್ತು. ನನಗೂ ಒಂದು ಕುಟುಂಬವಿದೆ ನಾನು ಎಂದೂ ಈ ರೀತಿಯ ಬ್ರ್ಯಾಂಡ್ ಆಯ್ಕೆ ಮಾಡಿಕೊಳ್ಳುವುದಿಲ್ಲ ನಾನೇ ತಂಬಾಕು ಸೇವಿಸುವುದಿಲ್ಲ ಅಂದ್ಮೇಲೆ ನನ್ನ ಅಭಿಮಾನಿಗಳಿಗೆ ನಮ್ಮ ಜನರಿಗೆ ನಾನು ಎಂದೂ ಸಲಹೆ ನೀಡುವುದಿಲ್ಲ ಎಂದು ಹೇಳಿ ರಿಜೆಕ್ಟ್‌ ಮಾಡಿದ್ದರು. 

ಈ ಘಟನೆ ನಡೆದ ಕೆಲವು ಕ್ಷಣಗಳನ್ನು ನೆಟ್ಟಿಗರು ಅಕ್ಷಯ್ ಕುಮಾರ್‌ನನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ವಿಮಲ್ ಪಾನ್ ಮಸಾಲ ಬ್ರ್ಯಾಂಡ್‌ ಅವರ cardamom ಬ್ರ್ಯಾಂಡ್‌ನ ಜಾಹಿರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ತಂಬಾಕು ಮಾರಾಟ ಮಾಡುವ ಸಂಸ್ಥೆ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿರುವುದಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತ್ರ ಬರೆಯುವ ಮೂಲಕ ಕ್ಷಮೆ ಕೇಳಿದ್ದಾರೆ. 

ಅಕ್ಷಯ್ ಕುಮಾರ್ ಪತ್ರ:
I am sorry.
ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ನಾನು ಕ್ಷಮೆ ಕೇಳುತ್ತೇನೆ. ಕೆಲವು ದಿನಗಳಿಂದ ನಿಮ್ಮ ಮಾತುಗಳು ಮತ್ತು ರಿಯಾಕ್ಷನ್‌ಗಳು ನನ್ನ ಮೇಲೆ ಪರಿಣಾಮ ಬೀರುತ್ತಿದೆ. ನಾನು ಈವರೆಗೂ ಮಾಡಿಲ್ಲ ಮುಂದಕ್ಕೂ ನಾನು ತಂಬಾಕು ಜಾಹಿರಾತುಗಳನ್ನು ಮಾಡುವುದಿಲ್ಲ. Vimal Elaichi ಜೊತೆಗಿರುವ ಒಪ್ಪಂದದ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ನಮ್ರತೆಯಿಂದ ನಾನು ಈ ಒಪ್ಪಂದಿಂದ ಹಿಂದೆ ಸೆರೆಯುತ್ತಿರುವೆ. ಈ ಬ್ರ್ಯಾಂಡ್‌ನಿಂದ ಬಂದಿರುವ ಸಂಭಾವನೆಯನ್ನು ನಾನು ಒಳ್ಳೆಯ ಉದ್ದೇಶಕ್ಕೆ ಬಳಸುವೆ. ನಮ್ಮ ಲೀಗಲ್ ಕಾಂಟ್ರ್ಯಾಕ್ಟ್‌ ಇರುವವರೆಗೂ ನಾನು ಮಾಡಿರುವ ಜಾಹಿರಾತನ್ನು ಬ್ರ್ಯಾಂಡ್ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ತುಂಬಾನೇ ಗಮನವಿಟ್ಟು ನಾನು ಆಯ್ಕೆ ಮಾಡಿಕೊಳ್ಳುವೆ ಎಂದು ನಿಮಗೆ ಮಾತು ಕೊಡುತ್ತೇನೆ. ಇದಕ್ಕೆ ಪ್ರತಿಯಾಗಿ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನನ್ನ ಮೇಲಿರಬೇಕು ಎಂದು ಕೇಳಿಕೊಳ್ಳುವೆ'.

ಈ ಕಾರಣಕ್ಕೆ ತಂಬಾಕು ಜಾಹೀರಾತು ರಿಜೆಕ್ಟ್ ಮಾಡಿ ಮಾದರಿಯಾದ ಅಲ್ಲು ಅರ್ಜುನ್

ರಾತ್ರೋರಾತ್ರಿ ಈ ಪೋಸ್ಟ್‌ ವೈರಲ್ ಆಗಿದ್ದು ಒಂದು ಮಿಲಿಯನ್ ಮೂವತ್ತು ಸಾವಿರ ಇನ್‌ಸ್ಟಾಗ್ರಾಂ ಲೈಕ್ ಪಡೆದುಕೊಂಡಿದೆ. ಅಕ್ಷಯ್ ನಿರ್ಧಾರವನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. 

ಕೆಲವು ತಿಂಗಳುಗಳ ಹಿಂದೆ ಅಮಿತಾಭ್ ಬಚ್ಚನ್ ತುಂಬಾಕು ಮಾಡುವ ಸಂಸ್ಥೆಯ ಜಾಹಿರಾತನ್ನು ನಿರಾಕರಿಸಿದ್ದರು.

View post on Instagram