ಬೆಂಗಳೂರು (ಮಾ. 29): ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಅಬ್ಬರ ಜೋರಾಗುತ್ತಿದೆ. ಮೋದಿ, ಜಯಲಲಿತಾ, ಮನಮೋಹನ್ ಸಿಂಗ್ ಆಯ್ತು ಇದೀಗ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಯೋಪಿಕ್ ಕೂಡಾ ತೆರೆ ಮೇಲೆ ಬರುತ್ತದೆ ಎನ್ನಲಾಗಿದೆ. 

ಅರ್ಜುನ್- ಮಲೈಕಾ ಅರೋರಾ ಗಟ್ಟಿಮೇಳಕ್ಕೆ ಮಹೂರ್ತ ಫಿಕ್ಸ್!

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಯೋಪಿಕ್ ಮಾಡಲಾಗುತ್ತದೆ ಎನ್ನಲಾಗುತ್ತಿದ್ದು ಸದ್ಯದಲ್ಲೇ ತೆರೆ ಮೇಲೆ ಬರಲಿದ್ದಾರೆ. ಖ್ಯಾತ ನಿರ್ದೇಶಕ ಸುಭಾಷ್ ಕಪೂರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಮಾಯಾವತಿ ಪಾತ್ರದಲ್ಲಿ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.  ಆದರೆ ಈ ಬಗ್ಗೆ ವಿದ್ಯಾ ಬಾಲನ್ ಆಗಲಿ ಅಥವಾ ನಿರ್ದೇಶಕರಾಗಲಿ ಖಚಿತಪಡಿಸಿಲ್ಲ. 

ಸಾಯಿ ಪಲ್ಲವಿಗೆ ಕೂಡಿ ಬಂತಾ ಕಂಕಣ ಭಾಗ್ಯ?

ವಿದ್ಯಾಬಾಲನ್ ಈಗಾಗಲೇ ಎನ್ ಟಿಆರ್ ಬಯೋಪಿಕ್ ನಲ್ಲಿ ಅವರ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಇಂದಿರಾ ಗಾಂಧಿ ಜೀವನಾಧಾರಿತ ವೆಬ್- ಸೀರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.