ಬಾಲಿವುಡ್ ಕಪೂರ್ ಫ್ಯಾಮಿಲಿ ಮತ್ತೊಂದು ಗಟ್ಟಿಮೇಳಕ್ಕೆ ಸಿದ್ಧವಾಗುತ್ತಿದೆ. ಮಲೈಕಾ ಅರೋರಾ- ಅರ್ಜುನ್ ಕಪೂರ್ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಎಲ್ಲಿ, ಹೇಗೆ ಎಂಬ ಇನ್ಫಾರ್ಮೇಷನ್ ಇಲ್ಲಿದೆ...

ಫ್ರೆಂಡ್‌ಶಿಪ್ಪಾ, ಕ್ರಶಾ ಅಥವಾ ಲವ್ವಾ ಎಂದು ಕನ್‌ಫ್ಯೂಷನ್ ಕ್ರಿಯೇಟ್ ಮಾಡಿದ ಜೋಡಿ ಎಂದರೆ ಮಲೈಕಾ ಹಾಗೂ ಅರ್ಜುನ್ ಕಪೂರ್. ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದು, ಇದೀಗ ಈ ಜೋಡಿ ಸಪ್ತಪದಿ ತುಳಿಯಲು ಗಟ್ಟಿ ಮನಸ್ಸು ಮಾಡಿದೆ.

ಏಪ್ರಿಲ್ 19ರಂದು ಕ್ರಿಸ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದಾರೆಂದು ಕೆಲವು ಮೂಲಗಳು ಹೇಳಿವೆ. ಇನ್ನು ಮದುವೆಗೆ ಕೆಲವೇ ಕೆಲವು ಕುಟುಂಬದ ಆಪ್ತರು ಹಾಗೂ ಚಿತ್ರರಂಗದಿಂದ ಕರೀನಾ ಕಪೂರ್, ಕರೀಶ್ಮಾ, ದೀಪಿಕಾ ದಂಪತಿ, ಪ್ರಿಯಾಂಕ ದಂಪತಿ ಹಾಗೂ ಅವರ ಸ್ನೇಹಿತರಿಗೆ ಮಾತ್ರ ಆಹ್ವಾನಿಸಿದ್ದಾರಂತೆ. ಸ್ಥಳದ ಬಗ್ಗೆ ಗೌಪ್ಯತೆ ಕಾಪಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

 

45 ವರ್ಷದ ಮಲೈಕಾ 33 ವರ್ಷದ ಅರ್ಜುನ್ ಮದುವೆ ಬಗ್ಗೆ ನೆಗೆಟಿವ್ ಕೆಮೆಂಟ್ಸ್ ಹರಿದಾಡುತ್ತಿದ್ದು, Love and feelings are true....ಇಷ್ಟು ಸಾಕು ನಮಗೆ, ಎಂದು ಮಾದ್ಯಮದ ಮುಂದೆ ಹೇಳಿ ಕೊಂಡಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾರೊಂದಿಗೆ ಅರ್ಜುನ್ ಡೇಟಿಂಗ್ ಮಾಡುತ್ತಿದ್ದರು. ಆದರೀಗ, ಸಲ್ಮಾನ್ ಅತ್ತಿಗೆ ಅಂದರೆ ಸಹೋದರ ಅರ್ಬಾಜ್ ಖಾನ್ ಮಾಜಿ ಪತ್ನಿಯೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ. ಯಾವ ಹೂವು ಯಾರ, ಮುಡಿಗೋ?