ಡಾಕು ಮಹಾರಾಜ ಸಿನಿಮಾ ಕಾರ್ಯಕ್ರಮದಲ್ಲಿ ನಟಿ ಊರ್ವಶಿ ರೌತೆಲಾ ಅವರನ್ನು ಬಾಲಕೃಷ್ಣ ನಿರ್ಲಕ್ಷಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ. 

ಹೈದರಾಬಾದ್: ಟಾಲಿವುಡ್ ನಟ ಬಾಲಯ್ಯ ಮತ್ತು ಬಾಲಿವುಡ್ ನಟಿ ಊರ್ವಶಿ ರೌತೆಲಾ ಅಭಿನಯದ ಡಾಕು ಮಹಾರಾಜ್ ಸಿನಿಮಾ ನೋಡಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಚಿತ್ರದ 'ದಬಿಡಿ ದಿಬಿಡಿ' ಹಾಡು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ತುಂಬಿದ ವೇದಿಕೆಯಲ್ಲಿ ನಟಿ ಊರ್ವಶಿ ರೌತೆಲಾ ಅವಮಾನಕ್ಕೊಳಗಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಮಾಲ್ ಆರ್ ಖಾನ್ (KRK) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.ಉರ್ವಶಿ ರೌತೆಲಾ ಅವರಿಗೆ ಇದು ನಿಜವಾಗಿಯೂ ದೊಡ್ಡ ಅವಮಾನ. ಹೀರೋ ಊರ್ವಶಿಯನ್ನು ಈ ರೀತಿ ನಿರ್ಲಕ್ಷಿಸಬಾರದು ಎಂದು ಕಮಾಲ್ ಆರ್ ಖಾನ್ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಓರ್ವ ನಟಿ ತನ್ನದೇ ಸಿನಿಮಾ ಕಾರ್ಯಕ್ರಮದಲ್ಲಿ ನಟನಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರೋದು ಇದೇ ಮೊದಲ ಬಾರಿ ಇರಬಹುದು ಎಂದು ಕಮೆಂಟ್ ಮಾಡಿದ್ದಾರೆ. 

ದಬಿಡಿ ದಿಬಿಡಿ ಹಾಡಿನಿಂದಲೂ ಮುಜುಗರ
ಸಿನಿಮಾದ ಯಶಸ್ಸಿನ ಪಾರ್ಟಿಯಲ್ಲಿ ಬಾಲಕೃಷ್ಣ ಜೊತೆ ಊರ್ವಶಿ 'ದಬಿಡಿ ದಿಬಿಡಿ' ಹುಕ್ ಸ್ಟೆಪ್ ಮಾಡಲು ಯತ್ನಿಸಿದ್ದರು. ಈ ವೇಳೆ ಎಲ್ಲರ ಮುಂದೆ ಊರ್ವಶಿ ಮಜುಗರಕ್ಕೊಳಗಾಗಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ್ರೂ ವಿಡಿಯೋ ವ್ಯೂವ್‌ಗಳಲ್ಲಿ ದಾಖಲೆಯನ್ನು ಬರೆದಿದೆ. 'ದಬಿಡಿ ದಿಬಿಡಿ' ಹಾಡಿಗೆ ಬಾಲಯ್ಯ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಾಡಿನಿಂದ ಊರ್ವಶಿ ರೌತೆಲಾಗೆ ಟಾಲಿವುಡ್‌ನಲ್ಲಿ ಭರ್ಜರಿ ಬೇಡಿಕೆ ಬಂದಿದೆ. ಸಿನಿಮಾಗಳ ವಿಶೇಷ ಪಾತ್ರಗಳಲ್ಲಿ ನಟಿಸಲು ಊರ್ವಶಿಗೆ ಹಲವು ಆಫರ್ ಗಳು ಬರುತ್ತಿವೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ನಿರ್ಮಾಪಕರಿಗಾಗಿ ಸ್ನಾನದ ವಿಡಿಯೋ ಲೀಕ್​ ಮಾಡಿದ್ದೆ, ಆದ್ರೆ... ಊರ್ವಶಿ ರೌಟೇಲಾ ಶಾಕಿಂಗ್​ ಸುದ್ದಿ ರಿವೀಲ್!

OTTಗೆ ಡಾಕು ಮಹಾರಾಜ
ಡಾಕು ಮಹಾರಾಜ ಸಿನಿಮಾ ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಈ ಸಿನಿಮಾ Netflixನಲ್ಲಿ OTT ರಿಲೀಸ್ ಆಗ್ತಿದೆ. ವರದಿಗಳ ಪ್ರಕಾರ, ಫೆಬ್ರವರಿ 9 ರಿಂದ Netflixನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಥಿಯೇಟರ್‌ನಲ್ಲಿ ಮಿಸ್ ಮಾಡ್ಕೊಂಡವರು ‘ಡಾಕು ಮಹಾರಾಜ’ನ OTTಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ವೇದಿಕೆಯಲ್ಲಿ ನಟಿಯನ್ನು ತಳ್ಳಿದ್ದ ಬಾಲಯ್ಯ
ಈ ಹಿಂದೆ ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ನಟಿ ಅಂಜಲಿ ತಮಾಷೆಯಾಗಿ ತೆಗೆದುಕೊಂಡರೂ ನೆಟ್ಟಿಗರು ನಂದಮೂರಿ ಬಾಲಕೃಷ್ಣರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನೀವು ತಳ್ಳಿರೋದು ಜೂನಿಯರ್ ಆರ್ಟಿಸ್ಟ್ ಅಲ್ಲ, ಅವರು ನಟಿ ಅಂಜಲಿ, ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಅನುಭವವನ್ನು ಹೊಂದಿರುವ ಕಲಾವಿದೆ ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದರು.

ಇದನ್ನೂ ಓದಿ: ಪ್ಲೀಸ್​ ಕ್ಷಮಿಸಿ, ಸೈಫ್​ ಇರಿತದ ವಿಷ್ಯದಲ್ಲಿ ದೊಡ್ಡ ತಪ್ಪು ಮಾಡಿದೆ: ಅಂಗಲಾಚಿ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲಾ!

Scroll to load tweet…