ಬಾಲಿವುಡ್ ನಟಿ, ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ದಶಕಗಳ ನಂತರ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲಿದ್ದಾರೆ.  ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 

ನನಗೆ ಯಾವಾಗಲೂ ಪ್ರೀತಿ ಕೊಡುತ್ತಾ, ಸಪೋರ್ಟ್ ಮಾಡ್ತಾ ನನ್ನ ಕಮ್ ಬ್ಯಾಕ್‌ಗಾಗಿ 10 ವರ್ಷಗಳಿಂದ ಕಾಯುತ್ತಿದ್ದಾರೆ. ಅವರಿಗೋಸ್ಕರ್ ಮತ್ತೆ ನಾನು ಹಿಂತಿರುತ್ತೇನೆ' ಎಂದು ಹೇಳಿಕೊಂಡಿದ್ದಾರೆ. 

 

ಈ ಹಿಂದೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರುವುದರ ಬಗ್ಗೆ ಪ್ರಶ್ನಿಸಿದಾಗ, ಎರಡನೇ ಮಗಳನ್ನು ದತ್ತು ತೆಗೆದುಕೊಂಡ ನಂತರ ಅವಳಿಗೋಸ್ಕರ ಬ್ರೇಕ್ ತೆಗೆದುಕೊಂಡೆ. ಅವಳು ನನ್ನ ಬಿಟ್ಟು ಇರುವುದಿಲ್ಲ' ಎಂದಿದ್ದರು. 

ನಿರೂಪಕ ನಿರಂಜನ್‌ ದೇಶಪಾಂಡೆ ಪತ್ನಿ ಹೀಗಿದ್ದಾರೆ ನೋಡಿ!

ನನ್ನ ಮಗಳನ್ನು ಬಿಟ್ಟು ಸಿನಿಮಾಗೆ ಬಂದರೆ ನಾನು ರಿಗ್ರೇಟ್ ಮಾಡುತ್ತೇನೆ. ಒಂದು ವೇಳೆ ನಾನು ಮಗಳನ್ನು ಬಿಟ್ಟು ಬರುವುದಿಲ್ಲ. ಕೆಲ ಕಾಲ ಬ್ರೇಕ್ ತೆಗೆದುಕೊಳ್ಳುತ್ತೇನೆ. ಮತ್ತೆ ವಾಪಸ್ಸಾಗುತ್ತೇನೆ. ಒಂದು ವೇಳೆ ನನ್ನ ಕರಿಯರ್ ಸಿನಿಮಾ ಅಂತಲೇ ಇದ್ದರೆ ಹಾಗೆಯೇ ಆಗುತ್ತದೆ. ಇಲ್ಲದಿದ್ದರೆ ಬೇರೆ ಏನನ್ನಾದರೂ ಮಾಡುತ್ತೇನೆ. ಆದರೆ ನನ್ನ ಫ್ಯಾಮಿಲಿಯನ್ನು ನಾನು ಮಿಸ್ ಮಾಡಿಕೊಳ್ಳುವುದಿಲ್ಲ' ಎಂದಿದ್ದರು.   

'ಬೀವಿ ನಂಬರ್ 1', 'ಮೈ ಹೂನಾ', ಆಂಖೆ, ಸಿರ್ಫ್ ತುಮ್, ಫಿಲಾಲ್' ಸಿನಿಮಾಗಳಲ್ಲಿ ನಟಿಸಿದ್ದಾರೆ.