ಲಾಕ್ ಡೌನ್ ನಲ್ಲಿ ಜನ ಸೋಷಲ್ ಮೀಡಿಯಾಗೆ ಎಡಿಕ್ಟ್ ಆಗಿರೋದು, ಮೂರು ಹೊತ್ತೂ ಮೊಬೖಲ್ ನಲ್ಲೇ ಮುಳುಗಿರೋದು, ಮಂಕಾಗಿರೋದು ಇತ್ಯಾದಿ ಎಲ್ಲ ಕಡೆ ನಡೀತಿರೋ ಸಂಗತಿ. ಆದರೆ ಇಂಥಾ ಟೖಮ್ ನಲ್ಲೂ ತನ್ನ ಮಾರ್ಕೆಟ್ ಹೆಚ್ಚಿಸಿಕೊಂಡಿರುವ ಚೆಲುವೆ ಸನ್ನಿ ಲಿಯೋನ್. ವಯಸ್ಸು ಮೂವತ್ತೆಂಟು ತುಂಬಿದರೂ, ತಾನಿನ್ನೂ ಯೌವನದ ಬುಗ್ಗೆ ಅಂತ ಸಾರಿ ಸಾರಿ ಹೇಳ್ತಿದ್ದಾರೆ ಈ ಚೆಲುವೆ. 

ಮೊದಲು ಪೋರ್ನ್ ಸಿನಿಮಾ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ ಈ ಮಾದಕ ಸುಂದರಿ ಯಾವತ್ತೂ ತನ್ನ ಹಿಸ್ಟರಿ ಬಗ್ಗೆ ಸಣ್ಣ ಪಾಪಪ್ರಜ್ಞೆಯನ್ನೂ ಹೊಂದಿದವಳಲ್ಲ. ಬದಲಾಗಿ ಉಳಿದೆಲ್ಲ ಪ್ರೊಫೆಶನ್ ಗಳ ಥರ ಅದೂ ಒಂದು ಫ್ರೊಫೆಶನ್ ಅಂತ ಅಂದುಕೊಂಡವಳು. ಬಾಲ್ಯದಲ್ಲಿ ಸ್ವತಃ ಪೋರ್ನ್ ಸಿನಿಮಾಗಳ ಬಗ್ಗೆ ಕುತೂಹಲಿಯಾಗಿದ್ದ ಈ ತುಂಬು ಚೆಲುವೆ, ತನ್ನ ಸಾಂಪ್ರದಾಯಿಕ ಫ್ಯಾಮಿಲಿಯಿಂದ ಬಂದ ತಾನು ಮುಂದೊಂದು ದಿನ ಈ ನೀಲಿ ಸಿನಿಮಾ ಜಗತ್ತಿನ ಅನಭಿಷಿಕ್ತ ರಾಣಿಯಾಗ್ತೀನಿ ಅಂತ ಕನಸೂ ಕಂಡವಳಲ್ಲ. ಆದರೆ ಅವಳ ಕುತೂಹಲ ಆಸಕ್ತಿಯಾಗಿ ಬದಲಾದದ್ದೇ ಅವಳು ನೀಲಿ ಜಗತ್ತಿನಲ್ಲಿ ತನ್ನ ಮೊದಲ ಹೆಜ್ಜೆಗಳನ್ನು ಇಡೋದಕ್ಕೆ ಕಾರಣವಾಯ್ತು. ಒಮ್ಮೆ ಆ ಇಂಡಸ್ಟ್ರಿಯ ಒಳ ಹೊಕ್ಕ ಸನ್ನಿ ಆಮೇಲೆ ಹಿಂತಿರುಗಿ ನೋಡಿದವಳಲ್ಲ. ಮೊದ ಮೊದಲು ಫ್ಯಾಮಿಲಿಯಿಮದ ಸಖತ್ ವಿರೋಧ ಬಂದರೂ ತನ್ನ ಆಸಕ್ತಿ, ತನ್ನ ಪ್ರೊಫೆಶನ್ ಅನ್ನು ಸಮರ್ಥಿಕೊಂಡು ಮುಂದುವರಿದಳು. ಒಂದು ಹಂತದ ಬಳಿಕ ಫ್ಯಾಮಿಲಿಯೂ ಅವಳನ್ನು ಒಪ್ಪಿಕೊಂಡದ್ದಾಯ್ತು. 

ಮಲೈಕಾ ಅರೋರಾ ನಲವತ್ತರ ತುಂಟಾಟ, ಮದನಾರಿಯ ಮೇಲಾಟ! 

ನೀಲಿ ವೀಡಿಯೋ ಜಗತ್ತಿನಲ್ಲಿ ಒಂದು ಹಂತದ ಮೖಲುಗಲ್ಲು ಸಾಧಿಸಿದ ಮೇಲೆ ಸನ್ನಿಯನ್ನು ಸೆಳೆದದ್ದು ಬಾಲಿವುಡ್. ಬಿಗ್ ಬಾಸ್ ಮೂಲಕ ಭಾರತೀಯರಿಗೆ ಚಿರಪರಿಚಿತಳಾದ ಈ ಚೆಲುವೆ ಆಮೇಲೆ ಪೋರ್ನ್ ಲೋಕ ಬಿಟ್ಟು ಬಾಲಿವುಡ್ ಗೆ ಹಾಯ್ ಅಂದಳು. ಆದರೆ ಇಲ್ಲಿ ಬಂದ ಅವಕಾಶಗಳೆಲ್ಲವೂ ಅವಳ ಬ್ಯಾಗ್ರೌಂಡ್ ನ ಜನಪ್ರಿಯತೆಯನ್ನು ಬಳಸಿ ಅವಳನ್ನು ಮಾದಕವಾಗಿಯೋ ತೆರೆ ಮೇಲೆ ತೋರಿಸಿದವು.

ಒಂದು ಕಡೆ ಬಾಲಿವುಡ್ ಮತ್ತೊಂದು ಕಡೆ ಫ್ಯಾಮಿಲಿ ಅಂತಿದ್ದ ಸನ್ನಿ ಈ ಲಾಕ್ ಡೌನ್ ಡೇಸ್ ನಲ್ಲಿ ದಿಢೀರನೆ ಆನ್ ಲೈನ್ ‌ನಲ್ಲಿ ತನ್ನ ಹವಾ ಶುರುಮಾಡಿ ಕೂಲ್ ಕೂಲ್ ಆಗಿದ್ದ ಗಂಡಸರ ಮೖ ಬೆಚ್ಚಗೆ ಮಾಡಿದಳು. 

"

ಸಲ್ಮಾನ್‌ ಖಾನ್‌ ಬಿಟ್ಟು ಅಭಿಷೇಕ್‌ ಮದ್ವೆಯಾಗಿದ್ದೇಕೆ ಐಶ್ವರ್ಯಾ? 

ಇನ್ ಸ್ಟಾಗ್ರಾಮ್ ನಲ್ಲಿ ಲೖವ್ ಚಾಟ್ ಗೆ ಬಂದು ಮಾತು ಶುರು ಮಾಡಿದ ಚೆಲುವೆ, ತನ್ನದೊಂದು ಮಾದಕ ಫೋಟೋ ಪೋಸ್ಟ್ ಮಾಡಿ ಪಡ್ಡೆಗಳ ನಿದ್ದೆ ಕೆಡಿಸಿದಳು. ಇಲ್ಲಿ ಸನ್ನಿ ಧರಿಸಿರೋದು ಬೀಚ್ ವೇರ್. ಮಲ್ಟಿ ಕಲರ್ ನಲ್ಲಿರುವ ಈ ಟೂ ಪೀಸ್ ಡ್ರೆಸ್ ಗೆ ಬಿಕಿನಿ ಥರವೇ ಮೊನೊಕಿನಿ ಅಂತಾನೂ ಕರೀತಾರೆ. ತೆರೆದೆದೆ ಈ ಡ್ರೆಸ್ ಫೇಮಸ್. ಹಿಂದೆ ಇದು ಟಾಪ್ ಲೆಸ್ ಆಗಿ ಸಖತ್ ಫೇಮಸ್ ಆಗಿತ್ತು. ಇವತ್ತಿಗೂ ನೀವು ಮೊನೊಕಿನಿ ಅಂತ ಸರ್ಚ್ ಕೊಟ್ಟರೆ ಟಾಪ್ ಲೆಸ್ ಆಗಿರುವ ಮಾಡೆಲ್ ಒಬ್ಬಳ ಹಳೆಯ ಬ್ಲ್ಯಾಕ್ ಆ್ಯಂಡ್ ವೖಟ್ ಫೋಟೋ ಬರುತ್ತೆ. ಮಾಡರ್ನ್ ಡೇಸ್ ನಲ್ಲಿ ಸನ್ನಿ ಈ ಡ್ರೆಸ್ ಧರಿಸೋ ಮೂಲಕ ತಾನು ಸಖತ್ ಬೋಲ್ಡ್ ಅಂತ ಮತ್ತೆ ಮತ್ತೆ ಪ್ರೂವ್ ಮಾಡ್ತನೇ ಇದ್ದಾಳೆ.