Asianet Suvarna News Asianet Suvarna News

ರಾಧಿಕಾ ಆಪ್ಟೆ ಪ್ರೆಗ್ನೆಂಟಾ? ಇದಕ್ಕಿದೆ ಬಲವಾದ ಕಾರಣ

ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ಸುದ್ದಿಯಲ್ಲಿಲ್ಲ. ಇದಕ್ಕೆ ಈಕೆ ಪ್ರೆಗ್ನೆಂಟ್ ಆಗಿರೋದು ಕಾರಣವಾ? ಹೀಗನ್ನೋದಕ್ಕೂ ಬಲವಾದ ಕಾರಣ ಇದೆ.

 

Bollywood Actress Radhika Apte Silence on Pregnancy Rumors
Author
First Published Jun 29, 2024, 10:19 AM IST

ರಾಧಿಕಾ ಆಪ್ಟೆ ಸದ್ಯಕ್ಕೆ ಸೈಲೆಂಟಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕಮಕ್‌ ಕಿಮಕ್‌ ಇಲ್ಲ. ವಿವಾದಗಳ ಬಗೆಗೂ ಚಕಾರ ಇಲ್ಲ. ಹಾಗಿದ್ರು ಏನಾಯ್ತು ಈ ಬೋಲ್ಡ್‌ ಆಂಡ್‌ ಬ್ಯೂಟಿಫುಲ್‌ ನಟಿಗೆ? ವೆಬ್‌ ಸೀರೀಸ್‌ಗಳಲ್ಲಿ ಈಕೆ ಫುಲ್‌ ಬ್ಯುಸಿಯಾಗಿರುತ್ತಾರೆ. ತುರಿಸಿಕೊಳ್ಳಲಿಕ್ಕೂ ಪುರುಸೊತ್ತಿರಲಿಕ್ಕಿಲ್ಲ ಅಂತೆಲ್ಲ ನೀವು ಅಂದುಕೊಂಡಿರಬಹುದು. ಆದರೆ ರಿಯಲ್ ರೀಸನ್ ಅದಲ್ಲ ಅಂತಿದೆ ಬಿಟೌನ್‌. ಸದ್ಯ ಈಕೆ ಈ ಲೆವೆಲ್‌ಗೆ ಸೈಲೆಂಟಾಗಿದ್ದಾರೆ ಅಂದರೆ ದೊಡ್ಡ ಸುನಾಮಿಯಂಥಾ ಸುದ್ದಿಯೊಂದು ಹೊರ ಬರಲು ಹೊಂಚು ಹಾಕ್ತಾ ಇರಬಹುದು, ಅದು ಮತ್ತೇನೂ ಅಲ್ಲ, ಅದೊಂದು ಸ್ಪೆಷಲ್‌ ನ್ಯೂಸ್‌.

ರಾಧಿಕಾ ಎರಡು ವರ್ಷಗಳ ಕೆಳಗೆ ಬ್ರಿಟಿಷ್ ಮ್ಯೂಸಿಕ್ ಕಂಪೋಸರ್‌, ವಯೊಲಿನಿಸ್ಟ್ ಬೆನೆಡಿಕ್ಟ್‌ ಟೇಲರ್‌ ಜೊತೆಗೆ ಮದುವೆ ಆದದ್ದು ಸುದ್ದಿಯಾಯ್ತು. ಹೇಳಿ ಕೇಳಿ ಅವರದು ಲಾಂಗ್‌ ಡಿಸ್ಟೆನ್ಸ್‌ ಮ್ಯಾರೇಜ್‌. ಅಂದ್ರೆ ಸದ್ಯ ಟ್ರೆಂಡಿಂಗ್‌ನಲ್ಲಿರೋ ದಾಂಪತ್ಯ. ಗಂಡ ಎಲ್ಲೋ ಒಂದು ಕಡೆ, ಹೆಂಡತಿ ಮತ್ತೆಲ್ಲೋ ಕಡೆ ಇರುವ ಸಂಬಂಧ. ಸೋ ಮದುವೆ ಆದರೂ ಗಂಡನ ಕಿರಿಕಿರಿ ಇಲ್ಲದೇ, ಸಾಂಸಾರಿಕ ತಾಪತ್ರಯಗಳಿಲ್ಲದೇ ರಾಧಿಕಾ ಆಪ್ಟೆ ಹಾಯಾಗಿ ತಾನಾಯ್ತು, ತನ್ನ ವೆಬ್‌ಸೀರೀಸ್‌ ಆಯ್ತು ಅಂತ ಇರಬೇಕಾದರೆ ಈ ಸುದ್ದಿ ಹರಿದಾಡ್ತಿದೆ. ಅದು ಮತ್ತೇನಲ್ಲ, ರಾಧಿಕ ಆಪ್ಟೆ ಗರ್ಭಿಣಿ ಅನ್ನೋ ವಿಚಾರ. 

ರಾಧಿಕಾ ಆಪ್ಟೆ ಬಾಲಿವುಡ್‌ನ ಸಕ್ಸಸ್‌ಫುಲ್ ನಟಿ. ವಿಶಿಷ್ಟ ಸಿನಿಮಾಗಳನ್ನು ಹುಡುಕುತ್ತಾ ತನ್ನದೇ ದಾರಿ ಹಿಡಿದು ಹೊರಟಿರೋ ರಾಧಿಕಾಗೆ ಒಳ್ಳೆಯ ಯಶಸ್ಸು ಸಿಕ್ಕಿದೆ. ಹೆಚ್ಚು ಕಡಿಮೆ ಬೋಲ್ಡ್ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ ಕಥೆಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಸಿನಿಮಾದಲ್ಲಿ ಉದ್ದೇಶ ಪೂರ್ವಕವಾಗಿ ಎಕ್ಸ್‌ಪೋಸ್ ಮಾಡುವಂತಹ ನಟಿಯಲ್ಲ. ಆದರೂ ಹೆಚ್ಚಾಗಿ ಈಕೆ ಕಾಣಿಸಿಕೊಂಡಿರುವುದು ಬೋಲ್ಡ್‌ ಪಾತ್ರಗಳಲ್ಲೇ. ಕೆಲವೊಮ್ಮೆ ಈ ನಟಿಯ ಪಾತ್ರಗಳಷ್ಟೇ ಬೋಲ್ಡ್ ಇರುತ್ತೆ ಅಂತಲ್ಲ. ಕೊಡುವ ಹೇಳಿಕೆಗಳು ಕೂಡ ಅಷ್ಟೇ ಬೋಲ್ಡ್ ಇರುತ್ತೆ. ಆ ಕಾರಣಕ್ಕೆ ಆಗಾಗ ವಿವಾದ ಕೇಂದ್ರ ಬಿಂದುವಾಗುತ್ತಾರೆ. ಹಿಂದಿ ಅಷ್ಟೇ ಭಾರತದ ಹಲವು ಸಿನಿಮಾಗಳಲ್ಲಿಯೂ ರಾಧಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವರ ವಿವಾದಕ್ಕೂ ಸಿಕ್ಕಿಕೊಂಡಿದೆ. ಅದರಲ್ಲೊಂದು 'ದಿ ವೆಡ್ಡಿಂಗ್ ಗೆಸ್ಟ್'

ಹುಟ್ಟಿದ ವರ್ಷವನ್ನು 2023 ಎಂದು ಬದಲಿಸಿದ ನಟಿ ಸುಷ್ಮಿತಾ ಸೇನ್​! ಇದರ ಹಿಂದಿದೆ ಕುತೂಹಲದ ಕಥೆ...

ಬ್ರಿಟಿಷ್ ನಿರ್ದೇಶಕ ಮೈಕೆಲ್ ವಿಂಟರ್‌ಬಾಟಮ್ 'ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 2018ರಲ್ಲಿ ಟೊರೆಂಟೋ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. 2019ರಲ್ಲಿ ಅಮೆರಿಕ ಹಾಗೂ ಇಂಗ್ಲೆಡ್‌ನಲ್ಲಿ ತೆರೆಕಂಡಿತ್ತು. ಆದರೆ, ಭಾರತದಲ್ಲಿ ಈ ಸಿನಿಮಾ ಬಿಡುಗಡೆಯಾಗಿರಲಿಲ್ಲ. ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾ ರಾಧಿಕಾ ಆಫ್ಟೆ ಬೆತ್ತಲೆ ದೃಶ್ಯವಿತ್ತು. ಹೀಗಾಗಿ ಭಾರತದಲ್ಲಿ ಈ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದ್ರೀಗ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸಖತ್‌ ಪಾಪ್ಯುಲರ್‌. ಇದಕ್ಕೆ ಕಾರಣ ಈ ಸಿನಿಮಾದಲ್ಲಿ ರಾಧಿಕಾ ಬೆತ್ತಲಾಗಿ ಕಾಣಿಸಿಕೊಂಡಿರೋದಂತೆ. 

ಆದರೆ ನಾವು ಹೇಳಬೇಕೆಂದಿರುವ ಮ್ಯಾಟರ್‌ ಇದಲ್ಲ. ಅದು ರಾಧಿಕಾ ಗರ್ಭಿಣಿ ಅನ್ನೋದು ವಿಚಾರ. ಅದಕ್ಕೆ ಪೂರಕವಾಗಿ ರಾಧಿಕಾ ಸೋಷಿಯಲ್‌ ಮೀಡಿಯಾದಲ್ಲಿ ಗರ್ಭಿಣಿಯೊಬ್ಬಳ ಅಸ್ಪಷ್ಟ ಚಿತ್ರ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದು ರಾಧಿಕಾದೇ ಚಿತ್ರವಾ ಅಂತ ಒಂದಿಷ್ಟು ಜನರಿಗೆ ಅನುಮಾನ ಇದೆ. ಇದಕ್ಕೆ ಉತ್ತರ ರಾಧಿಕಾ ಆಪ್ಟೆಯಿಂದ ಸದ್ಯದಲ್ಲೇ ಉತ್ತರ ನಿರೀಕ್ಷಿಸಲಾಗಿದೆ. 

ಪ್ರೆಗ್ನೆನ್ಸಿಯಲ್ಲಿ ಹೈ ಹೀಲ್ಸ್‌ ಬಾಲಿವುಡ್‌ನಲ್ಲೀಗ ಟ್ರೆಂಡಿಂಗ್‌
 

Latest Videos
Follow Us:
Download App:
  • android
  • ios