ಎಷ್ಯಾದ ಮೋಸ್ಟ್ ಡಿಸೈರೇಬಲ್ ವುಮೆನ್ ಪ್ರಿಯಾಂಕಾ ಚೋಪ್ರಾ ಬಾತ್‌ಟಬ್‌ನಲ್ಲಿ ಲಾಲಿ ಪಾಪ್ ಹಿಡಿದು ಫೋಸ್ ನೀಡಿದ್ದಾರೆ. ಇದೀಗ ಸೋಷಿಯಲ್ಲಿ ಮೀಡಿಯಾದಲ್ಲಿ ಈ ಪೋಟೋ ಸದ್ದು ಮಾಡುತ್ತಿದೆ. ಏಕೆ ಈ ಲುಕ್?

ಬಾಲಿವುಡ್ ಬ್ಯುಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಿಂತ, ಪತಿಯೊಂದಿಗೇ ಕಾಣಿಸಿಕೊಳ್ಳುತ್ತಿರುವುದು ಹೆಚ್ಚು. ಬರೀ ಅದೇ ಸುದ್ದಿ. ಆದರೆ ಈ ಸಲ ಗಂಡನೊಂದಿಗೆ ಸೇರಿಕೊಂಡು, ಫ್ಯಾನ್ಸ್‌ಗೊಂದು ಸರ್ಪ್ರೈಸ್ ನೀಡಿದ್ದಾರೆ.

 

ಪ್ರಿಯಾಂಕ ಪತಿ ನಿಕ್ ಜೊನಾಸ್ ತಮ್ಮ ಜೊನಾಸ್ ಬ್ರದರ್ಸ್ ತಂಡದಿಂದ ‘ಸಕ್ಕರ್’ ಎಂಬ ಹಾಡೊಂದನ್ನು ಮಾಡಿದ್ದಾರೆ. ಈ ಹಾಡಿನ ಆಲ್ಬಮ್‌ನಲ್ಲಿ ಪಿಗ್ಗಿ ಕಾಣಿಸಿಕೊಂಡಿದ್ದು, ಅದರದ್ದೇ ಈ ಬಾತ್‌ಟಬ್ ಫೋಟೋ ಇದು.

ಬಾತ್‌ಟಬ್ ಫೋಟೋವನ್ನು ಸ್ವತಃ ಪ್ರಿಯಾಂಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು, ‘ಗ್ಲಾಮ್ ಬಾಟ್ಸ್... ಎಸ್ ಪ್ಲೀಸ್ ..#Jonasbrothers are back! #Sucker’ ಎಂದು ಬರೆದುಕೊಂಡಿದ್ದಾರೆ