ಬಾಲಿವುಡ್ ಸಿನಿಮಾ ತೆರೆ ಕಾಣುತ್ತದೆಂದರೆ ಸಾಕು ಬಾಲಿವುಡ್ ನಟ, ನಟಿಯರು ಕಪಿಲ್ ಶರ್ಮಾ ಶೋನಲ್ಲಿ ಕುಳಿತಿರುತ್ತಾರೆ. ಶೋಗೆ ಬಂದ ಸಿನಿಮಾ ಸೆಲಬ್ರಿಟಿಗಳ ಸೀಕ್ರೆಟನ್ನು ಹೊರಗೆಡುವುದರಲ್ಲಿ ಕಪಿಲ್ ಶರ್ಮಾ ನಿಸ್ಸೀಮರು. 

ಏಕ್ತಾ ಕಪೂರ್ ಹಾರರ್-ಕಾಮಿಡಿ ವೆಬ್ ಶೋ ಬೋ ಸಬ್ ಕಿ ಪಟೇಗಿ ತಂಡ ಕಪಿಲ್ ಶರ್ಮಾ ಶೋಗೆ ಬಂದಿತ್ತು. ನಟರಾದ ತುಷಾರ್ ಕಪೂರ್, ಮಲ್ಲಿಕಾ ಶರಾವತ್, ಕೃಷ್ಣಾ ಅಭಿಷೇಕ್, ಕಿಕು ಶಾರ್ದಾ ಭಾಗವಹಿಸಿದ್ದರು. 

ಹೀರೋಗಳ ಜೊತೆ ಡೇಟಿಂಗ್ ಮಾಡದೇ ಆಫರ್ ಮಿಸ್ ಮಾಡ್ಕೊಂಡ್ರಾ ಸೆಕ್ಸಿ ಕ್ವೀನ್?

ಈ ವೇಳೆ ಕಪಿಲ್ ಮಲ್ಲಿಕಾ ಶೆರಾವತ್ ಕಾಲೆಳೆಯುತ್ತಾ, ಚಪಾತಿ ಬಿಸಿ ಬಿಸಿಯಾಗಿರಲೆಂದು ಜನ ಮಲ್ಲಿಕಾ ಶೆರಾವತ್ ಹಾಟ್ ಫೋಟೋ ಇರುವ ಪೇಪರ್ ನಲ್ಲಿ ಸುತ್ತಿಡುತ್ತಾರೆ ಎಂದು ಕೇಳಲ್ಪಟ್ವಿ ಎಂದು ತಮಾಷೆ ಮಾಡಿದರು. 

ಅದಕ್ಕೆ ಮಲ್ಲಿಕಾ ಬಹಳ ಮಜವಾಗಿ ಉತ್ತರಿಸಿದ್ದಾರೆ. ‘ ಒಂದು ಸಿನಿಮಾದಲ್ಲಿ ನಿರ್ಮಾಪಕರೊಬ್ಬರು ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡುವ ಸೀನ್ ಮಾಡಬೇಕು ಎಂದರು. ಆದರೆ ನಾನು ಒಪ್ಪಲಿಲ್ಲ. ಒಂದು ವೇಳೆ ಒಪ್ಪಿದ್ದರೆ ಅದೊಂದು ಒಳ್ಳೆಯ ಸೀನ್ ಆಗುತ್ತಿತ್ತು’ ಎಂದಿದ್ದಾರೆ.