- ಬೆಳಗಾಗೆದ್ದು ನೀವೆಲ್ಲ ಟೀ, ಬಿಸ್ಕೆಟ್‌ ತಿಂತಿದ್ರೆ, ನಾನ್‌ ಮಾತ್ರ ಆ್ಯಪಲ್‌ ತಿಂತಿರ್ತೀನಿ. ಅದ್ಕೂ ಮೊದಲು ಬಿಸಿ ಬಿಸಿ ನೀರಿಗೆ ನಿಂಬೆ ಹುಳಿ ಹಿಡ್ಕೊಂಡು ಕುಡೀತೀನಿ. ಇದರಿಂದ ದೇಹದಲ್ಲಿರೋ ವಿಷಪೂರಿತ ಅಂಶ ಹೊರ ಹೋಗುತ್ತೆ. ಆಮೇಲೆ ಆ್ಯಪಲ್‌ ಜೊತೆಗೆ ಬೆರ್ರೀಸ್‌, ಓಟ್ಸ್‌ ತಿನ್ನೋದು. ಪೀನಟ್‌ ಬಟರ್‌ನಲ್ಲಿ ಆ್ಯಪಲ್‌ ಅದ್ದಿ ತಿನ್ನೋ ಕ್ರೇಜ್‌ ನಂಗಿದೆ.

- ದಿನದಲ್ಲಿ ಆಗಾಗ ಮೊಳಕೆ ಕಾಳು ತಿಂತೀನಿ. ರೋಟಿ, ನಾನ್‌, ಸಾಕಷ್ಟುತರಕಾರಿ ಇರುವ ಸಲಾಡ್ಸ್‌ ನನ್‌ ಡಯೆಟ್‌ ನಲ್ಲಿದೆ.

ಕಿಯಾರಾ ಅಡ್ವಾಣಿ ನಟಿಯಾಗುವ ಮುನ್ನ ಮಾಡುತ್ತಿದ್ದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ!

- ದಿನದ ಕೊನೆಯ ಊಟದಲ್ಲಿ ಸೀ ಫುಡ್‌ ಮಿಸ್‌ ಆಗೋ ಹಾಗಿಲ್ಲ. ಒಮೇಗಾ 3 ಅಂಶ ಸೀ ಫುಡ್‌ನಲ್ಲಿ ಹೇರಳವಾಗಿರುತ್ತೆ.

- ನಟ್ಸ್‌, ವಾಲ್ನಟ್‌ ಸಂಜೆಯ ಸ್ನಾಕ್ಸ್‌.

- ಚೆನ್ನಾಗಿ ನೀರು ಕುಡಿಯೋದನ್ನೂ ಮಿಸ್‌ ಮಾಡಲ್ಲ.

ಯಂಗ್‌ ಯಂಗಾಗಿರಲು ಮಿಲಿಂದ್‌ ಸೋಮನ್‌ ಹೇಳೋ 3 ಟಿಫ್ಸ್‌

1. ದಿನವಿಡೀ ಆ್ಯಕ್ಟಿವ್‌ ಆಗಿರಿ.

ನಾನು ದಿನಕ್ಕೆ ಕನಿಷ್ಟಆರು ಕಿಮೀ ಓಡ್ತೀನಿ. ವರ್ಕೌಟ್‌ಗಿಂತಲೂ ಟ್ರೆಕಿಂಗ್‌ ಮಾಡೋದಿಷ್ಟ. ಹಾಗಂತ ವರ್ಕೌಟ್‌ ಮಿಸ್‌ ಮಾಡಲ್ಲ. ಆಫೀಸ್‌ನಲ್ಲಿ ಕೆಲಸ ಮಾಡೋರಾಗಿದ್ರೆ ಟೈಮ್‌ ಸಿಕ್ಕಾಗಲೆಲ್ಲ ಐದಾರು ಸ್ಟೆಪ್‌ ನಿಮ್ಮಿಷ್ಟದ ಡ್ಯಾನ್ಸ್‌ ಮಾಡಿ. ಏನ್‌ ಹಾಯಾಗಿರುತ್ತೆ ಗೊತ್ತಾ..

ಮದುವೆಗೂ ಮುನ್ನ ಸೆಕ್ಸ್‌ಗೆ ಅಡ್ವಾಣಿ ಕೊಟ್ರು ಸಮ್ಮತಿ!

2. ದೇಹದ ಬಗ್ಗೆ ಕೇರ್‌ ತಗೊಳ್ಳಿ

ಹೆಚ್ಚಿನವರು ಅದರಲ್ಲೂ ಹೆಣ್ಮಕ್ಕಳು ಒಂದು ಹಂತದ ಬಳಿಕ ತಮ್ಮ ದೇಹದ ಬಗ್ಗೆ ಕೇರ್‌ ಮಾಡೋದನ್ನೇ ನಿಲ್ಲಿಸುತ್ತಾರೆ. ಇದು ಸರಿಯಲ್ಲ. ನಮ್ಮನ್ನ ನಾವೇ ನೆಗ್ಲೆಕ್ಟ್ ಮಾಡಿದ್ರೆ ಮತ್ಯಾರು ಕೇರ್‌ ಮಾಡ್ತಾರೆ ಹೇಳಿ. ಕೈ ಕಾಲು, ಮುಖದ ಸ್ವಚ್ಛತೆ, ಆರೈಕೆಗೆ ಗಮನ ಕೊಡಿ. ನೀವು ಚೆನ್ನಾಗಿದ್ರೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಿರುತ್ತೆ.

3. ಬಾದಾಮಿ, ಒಣಹಣ್ಣು ತಿನ್ನಿ.

ಬಾದಾಮಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ತಿನ್ನಿ. ನಾನಂತೂ ಪ್ರತೀ ದಿನ ತಿಂತೀನಿ. ಇದರಲ್ಲಿ ಪ್ರೊಟೀನ್‌, ಎನರ್ಜಿ ನೀಡೋ ಅಂಶ ಸಾಕಷ್ಟಿರುತ್ತೆ. ನಮ್ಮ ಸ್ನಾಯುಗಳಿಗೂ ಒಳ್ಳೆಯದು. ಜೊತೆಗೆ ಟೇಸ್ಟ್‌ ಸಖತ್ತಾಗಿರುತ್ತೆ.