ಬಾಲಿವುಡ್ ನಲ್ಲಿ ಬಯೋಪಿಕ್ ಗಳು ಬರುತ್ತಿರುವುದು ಹೆಚ್ಚಾಗಿದೆ. ಭಾರತದ ಖ್ಯಾತ ಅಥ್ಲೀಟ್ ಪಿ ಟಿ ಉಷಾ ಬಯೋಪಿಕ್ ತೆರೆ ಮೇಲೆ ಬರಲಿದೆ. 

ಆರ್ ಜೆ ಸಿರಿ ಫೋಟೋಗಳು ಸಖತ್ ಹಾಟ್ ಮಗಾ!

ಬಾಲಿವುಡ್ ನಟಿ ಕತ್ರಿನಾ ಕೈಫ್ ಈ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರೇವತಿ ಎಸ್ ವರ್ಮಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. 

ಮೊದಲು ಪಿ ಟಿ ಉಷಾ ಪಾತ್ರಕ್ಕೆ ಪ್ರಿಯಾಂಕ ಚೋಪ್ರರನ್ನು ಅಪ್ರೋಚ್ ಮಾಡಲಾಗಿತ್ತು. ನಿರ್ಮಾಪಕರು ಪಿಗ್ಗಿಯನ್ನು ಸಂಪರ್ಕಿಸಿದ್ದರು. ಆದರೆ ಕಾರಣಾಂತರದಿಂದ ಒಪ್ಪಿರಲಿಲ್ಲ. ನಂತರ ಆ ಪಾತ್ರಕ್ಕೆ ಕತ್ರಿನಾರನ್ನು ಆಯ್ಕೆ ಮಾಡಲಾಯಿತು. 

ಸಂಜಯ್ ಲೀಲಾ ಬನ್ಸಾಲಿ ಚಿತ್ರಕ್ಕೆ ಸ್ಯಾಂಡಲ್‌ವುಡ್ ಕ್ರಶ್!

ಸದ್ಯಕ್ಕೆ ಕತ್ರಿನಾ ಸಲ್ಮಾನ್ ಖಾನ್ ಜೊತೆ ಭಾರತ್ ಸಿನಿಮಾದಲ್ಲಿ ನಟಿಸಿದ್ದಾರೆ. ಜೂ.5, 2019 ಕ್ಕೆ ಈ ಸಿನಿಮಾ ರಿಲೀಸಾಗಲಿದೆ. ಸಲ್ಲು-ಭಾಯ್ ಹಾಗೂ ಕತ್ರಿಕಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದು ಕೂಡಾ ಆ ಸಾಲಿಗೆ ಸೇರುವ ನಿರೀಕ್ಷೆಯಿದೆ. ರೋಹಿತ್ ಶೆಟ್ಟಿಯವರ ಸೂರ್ಯವಂಶಿ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.