ಇವುಗಳಲ್ಲಿ ಸ್ವಂತ ಪ್ರೊಡಕ್ಷನ್‌ ಹೌಸ್‌ ಕಟ್ಟಬೇಕು ಎನ್ನುವ ಕನಸು ಸಾಕಷ್ಟುಮಂದಿಗೆ ಇರುತ್ತದೆ. ಇದೇ ರೀತಿಯಾದ ಕನಸು ಹತ್ತು ವರ್ಷಗಳಿಂದ ಕಂಗನಾ ರಾಣಾವತ್‌ ಅವರದ್ದಾಗಿತ್ತು.

ಕಂಗನಾ ಬ್ಯಾಗ್‌ ಹಣದಲ್ಲಿ ಒಂದು ಮನೆಯನ್ನೇ ಕಟ್ಟಿಸಿಕೊಡ್ಬೋದಪ್ಪಾ!

ಇದೀಗ ಕಂಗನಾ ಮುಂಬೈನ ಪ್ರೈಮ್‌ ಲೊಕೇಷನ್‌ ಆದ ಪಾಲಿ ಹಿಲ್‌ನಲ್ಲಿ ಸ್ವಂತ ಪ್ರೊಡಕ್ಷನ್‌ ಹೌಸ್‌ ಕಟ್ಟಿನಿಲ್ಲಿಸಿದ್ದಾರೆ. ತಮಗೆ ಹೆಚ್ಚು ಖ್ಯಾತಿ ತಂದುಕೊಟ್ಟ‘ಮಣಿಕರ್ಣಿಕಾ’ ಚಿತ್ರದ ಹೆಸರನ್ನೇ ಪ್ರೊಡಕ್ಷನ್‌ಹೌಸ್‌ಗೆ ಇಟ್ಟಿರುವುದು ಮತ್ತೊಂದು ವಿಶೇಷ.

ಕಂಗನಾಗೆ ಇದೆಂಥಾ ಗತಿ! ರೈಲ್ವೇ ಟಿಕೆಟ್ ಹಂಚುವ ಕೆಲಸ ಶುರು ಮಾಡಿದ್ರಾ 'ಕ್ವೀನ್'?

ಈಗಾಗಲೇ ಬಾಲಿವುಡ್‌ನ ಸಾಕಷ್ಟುಮಂದಿ ತಮ್ಮದೇ ನಿರ್ಮಾಣ ಸಂಸ್ಥೆ ಕಟ್ಟಿಕೊಂಡು ಒಳ್ಳೊಳ್ಳೆಯ ಚಿತ್ರ ಕೊಟ್ಟಿರುವುದು ಕಣ್ಣ ಮುಂದೆಯೇ ಇದೆ. ಅದೇ ರೀತಿ ಕಂಗನಾಗೆ ತಮ್ಮ ‘ಮಣಿಕರ್ಣಿಕಾ ಪ್ರೊಡಕ್ಷನ್‌ ಹೌಸ್‌’ ಮೂಲಕ ಒಳ್ಳೆಯ, ಸೃಜನಾತ್ಮಕ ಚಿತ್ರಗಳನ್ನು ಕೊಡುವ ಆಸೆ ಇದೆಯಂತೆ. ಅದೂ ಇನ್ನೇನು ಪ್ರಾರಂಭಿಕ ಹಂತಕ್ಕೆ ಏರುವ ಸನಿಹದಲ್ಲಿದೆ. ಹೀಗೆ ದಶಕದ ಕನಸನ್ನು ನನಸಾಗಿಸಿಕೊಂಡಿರುವ ಕಂಗನಾಗೆ ಇಡೀ ಬಾಲಿವುಡ್‌ ಗುಡ್‌ಲಕ್‌ ಹೇಳಿದೆ.